ಎಫ್‌ಐಸಿ ಕಾಮಗಾರಿಯಿಂದ ರೈತರ ಸಮಸ್ಯೆ ಪರಿಹಾರ ಅಸಾಧ್ಯ
FIC work cannot solve farmers' problems
ತಾಳಿಕೋಟಿ 21: ಬೂದಿಹಾಳ ಪೀರಾಪೂರ ಏತ ನೀರಾವರಿ ಯೋಜನೆಯ ಅಂತಿಮ ಕಾಮಗಾರಿಯಾದ ಎಫ್‌ಐಸಿ (ಹೊಲಗಾವಲು) ಮಾಡುವುದರಿಂದ ರೈತರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ರವಿವಾರ ಪಟ್ಟಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಈ ಯೋಜನೆಗೆ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಎಂದು ಹೆಸರಿಟ್ಟವನು ನಾನು ಇದಕ್ಕಾಗಿ ಒಂದು ಸಮಿತಿಯನ್ನು ಕಟ್ಟಿಕೊಂಡು ಹಗಲಿರಲು ಹೋರಾಟ ಮಾಡಿದ್ದೇನೆ ಈ ಯೋಜನೆಯ ರೂಪರೇಶೆ ಸಿದ್ಧ ಪಡಿಸಿಕೊಟ್ಟಿದ್ದೆ ಅದರಂತೆ ಕಾಮಗಾರಿ ಮಾಡಿದ್ದರೆ ಈ ದುರ್ಗತಿ ರೈತರಿಗೆ ಬರುತ್ತಿರಲಿಲ್ಲ ಇನ್ನೂ ಕಾಲ ಮಿಂಚಿಲ್ಲ ರೈತರ ಸಂಘಟಿತ ಹೋರಾಟ ನಡೆಸಿ ಈಗಿರುವ ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳಬಹುದು ಅವರು ಗಟ್ಟಿ ನಿರ್ಧಾರ ಮಾಡಿದರೆ ನಾನು ಅವರೊಂದಿಗಿದ್ದು ಹೋರಾಟ ಮಾಡುತ್ತೇನೆ ಎಂದ ಅವರು ಉಸ್ತುವಾರಿ ಸಚಿವರು ಧರಣಿ ನಿರತ ಸ್ಥಳಕ್ಕೆ ಬರುವ ಮೊದಲು ನೀರು ಸಂಗ್ರಹಣ ಪಾಯಿಂಟುಗಳನ್ನು ವೀಕ್ಷಿಸಿ ಬರಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಅತಿ ಚಿಕ್ಕದಾದ ಸ್ಟೋರೇಜ್ ಪಾಯಿಂಟ್ ಮಾಡಿರುವುದರಿಂದ ಸಮಸ್ಯೆ ಉದ್ಭವವಾಗಿದೆ. ಸ್ಟೋರೇಜ್ ಪಾಯಿಂಟ್ ಗಳನ್ನು ಹೆಚ್ಚಿಸುವುದರ ಜೊತೆಗೆ ಹೆಚ್ಚು ಸಾಮರ್ಥ್ಯದ ನಿರ್ಮಾಣ ಮಾಡಿದರೆ ನೀರು ರಬಸದಿಂದ ಹೊಲಗಳಿಗೆ ತಲುಪುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು ಈ ಯೋಜನೆ ಕುರಿತು ಉಸ್ತುವಾರಿ ಸಚಿವರು ನನ್ನ ಸಲಹೆಗಳನ್ನು ಪಡೆಯಲು ಬಯಸಿದರೆ ನಾನು ಮುಕ್ತವಾಗಿ ಅವರಿಗೆ ಸಹಕಾರ ಕೊಡಲಿದ್ದೇನೆ ರೈತರ ವಿಷಯದಲ್ಲಿ ನನಗೆ ರಾಜಕೀಯ ಬೇಡ ಅವರ ಹಿತ ಮುಖ್ಯ ಇದನ್ನು ಓಪನ್ ಕ್ಯಾನಲ್ ಮಾಡಿದ್ದರೆ ಯಾವ ಸಮಸ್ಯೆಯೂ ಇರಲಿಲ್ಲ ಪೈಪ್ ಲೈನ್ ಪದ್ಧತಿ ಅಳವಡಿಸಿದ್ದರಿಂದ ಈ ಸಮಸ್ಯೆಗಳು ಉದ್ಭವವಾಗಿವೆ, ನಮ್ಮ ರೈತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಬಸನಗೌಡ ವಣಕಿಹಾಳ, ಸಾಹೇಬಗೌಡ ಪಾಟೀಲ, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಸಂಗಮ್ಮ ದೇವರಹಳ್ಳಿ, ಮುಖಂಡರಾದ ಎಂ.ಎಂ.ಪಾಟೀಲ,ಡಾ.ಪ್ರಭುಗೌಡ ಬಿರಾದಾರ,ರಾಜುಗೌಡ ಗುಂಡಕನಾಳ,ಸೋಮನಗೌಡ ಕವಡಿಮಟ್ಟಿ, ಜಗದೀಶ ಪಂಪಣ್ಣವರ, ಮಲ್ಲಣ್ಣ ತಂಗಡಗಿ, ಲಕ್ಷ್ಮಣ ಬಿಜ್ಜೂರ,ಈಶ್ವರ ಹೂಗಾರ, ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 