ಕಣ್ಣಿನ ರಕ್ಷಣೆ ಮತ್ತು ಜಾಗೃತಿಗಾಗಿ ಸಮಯಕ್ಕೆ ತಪಾಸಣೆಗೆ ಒಳಪಡಿಸಬೇಕು: ಡಾ.ಪ್ರಜಕ್ತಾ
Eye protection and awareness should be checked on time: Dr. Prajakta
ಸವಣೂರ 07: ಬದುಕಿನ ಅವಿಭಾಜ್ಯ ಅಂಗಗಳಾಗಿರುವ ಕಣ್ಣುಗಳನ್ನು ನಿಗದಿತ ಸಮಯಕ್ಕೆ ತಪಾಸಣೆಗೆ ಒಳಪಡಿಸುವುದು ಹಾಗೂ ಚಿಕಿತ್ಸೆ ಪಡೆಯುವುದು ಅಗತ್ಯವಿದೆ ಎಂದು ಶಿವಮೊಗ್ಗ ಶಂಕರ ಆಸ್ಪತ್ರೆಯ ವೈದ್ಯರಾದ ಡಾ.ಪ್ರಜಕ್ತಾ ಹೇಳಿದರು.
ತಾಲೂಕಿನ ಕಾರಡಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ,ಶಿವಮೊಗ್ಗ. ಪ್ರಾಥಮಿಕ ಆರೋಗ್ಯ ಕೇಂದ್ರ,ಕಾರಡಗಿ ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಹಾವೇರಿ. ಜಿಲ್ಲಾ ಅಂಧತ್ವ ನಿಯಂತ್ರಣಾ ಕಾರ್ಯಕ್ರಮ,ತಾಲೂಕು ವೈಧ್ಯಾಧಿಕಾರಿಗಳ ಕಛೇರಿ,ಸವಣೂರ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತಿ ಕಾರಡಗಿ, ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಆಯೋಜಿಸಿದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಸಲಹೆ ನೀಡಿದರು.
ಇಂದಿನ ಆಧುನಿಕ ಉಪಕರಣಗಳ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಉಲ್ಬಣವಾಗುತ್ತಿರುವುದು ಕಂಡು ಬರುತ್ತಿದೆ. ಕಣ್ಣಿಗೆ ಯಾವುದೇ ಸಮಸ್ಯೆಗಳು ಆಗದಂತೆ ತಡೆಯಲು ರಕ್ಷಣೆಗೆ ತಪಾಸಣೆ ಚಿಕಿತ್ಸೆ ಮಾಡಿಸಿಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದರು.
ಅಮ್ಮಾ ಸಂಸ್ಥೆ(ರಿ) ಸಂಸ್ಥಾಪಕರಾದ ನಿಂಗಪ್ಪ ಆರೇರ ಮಾತನಾಡಿ ಕಣ್ಣಿನ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಇಂತಹ ಉಚಿತ ಶಿಬಿರ ಪ್ರಯೋಜನೆಗಳನ್ನು ಸಾರ್ವಜನಿಕರು ಪಡೆಯಲು ಎಲ್ಲರೂ ಸಹಕಾರ ನೀಡುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕ ಆಸ್ಪತ್ರೆಯ ನೇತ್ರಾಧಿಕಾರಿ ಮಹಾದೇವಿ ಬನ್ನಿಮಟ್ಟಿ,ಗ್ರಾಪಂ ಸದಸ್ಯರಾದ ಜೈರಬ ಮಕಾಂದಾರ,ಸಾಮಾಜಿಕ ಕಾರ್ಯಕರ್ತರಾದ ಮಹಾಂತೇಶ ಆಡರಕಟ್ಟಿ,ಶಿವಮೊಗ್ಗ ಆಸ್ಪತ್ರೆಯ ಮಾನು ಬಡಿಗೇರ,ಸಚಿನ,ಅಮೃತ, ಭೂಮಿಕಾ,ನಿಚ್ಚತಾ,ಸ್ವರ್ಣ, ಶೃತಿ,ಕಾರಡಗಿ ಆಸ್ಪತ್ರೆಯ ಮಲ್ಲಿಕಾರ್ಜುನಗೌಡ ಯರಗುಪ್ಪಿ, ಸವಿತಾ ಕಮದೋಡ,ಭಾರತ ಬಡಿಗೇರ, ರೂಪಾ ಹಿರೇಮಠ, ವಿನಾಕ್ಷಿ ಕುರಂದವಾಡ,ಮುಬಿನಾ ಬಮ್ಮಿಗಟ್ಟಿ,ರಾಜೇಶ್ರೀ ಮುಚ್ಚಂಡಿ,ಆಶಾ ಕಾರ್ಯಕರ್ತೆಯರಾದ ನಾಗಮ್ಮ ಕ್ಯಾತನಹಳ್ಳಿ,ವಿಜಯಾ ಪೂಜಾರ,ನೇತ್ರಾವತಿ ಬಳಿಗಾರ,ಶಕುಂತಲಾ ಅರಳಿಕಟ್ಟಿ,ಶಾರದಾ ತಳವಾರ ಸೇರಿದಂತೆ ಅನೇಕರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 