ಕಣ್ಮನ ಸೆಳೆದ ರೇಷ್ಮೆ ಕೃಷಿ ವಸ್ತು ಪ್ರದರ್ಶನ

ಕಣ್ಮನ ಸೆಳೆದ ರೇಷ್ಮೆ ಕೃಷಿ ವಸ್ತು ಪ್ರದರ್ಶನ Eye-catching sericulture exhibition

ಹಾವೇರಿ, ಡಿ 28: ಹುಕ್ಕೇರಿ ಮಠ ಜಾತ್ರೆಯ ಅಂಗವಾಗಿ ಹುಕ್ಕೇರಿ ಮಠ ಆವರಣದಲ್ಲಿ ಡಿ. 27 ರಿಂದ ಮೂರು ದಿನಗಳವರೆಗೆ  ಏರಿ​‍್ಡಸಲಾಗಿದ್ದ ರೇಷ್ಮೆ ಕೃಷಿ ವಸ್ತು ಪ್ರದರ್ಶನಕ್ಕೆ ವಿಧಾನಸಭಾ ಉಪ ಸಭಾಧ್ಯಕ್ಷರಾದ ರುದ್ರ​‍್ಪ ಲಮಾಣಿ ಉದ್ಘಾಟನೆ ಮಾಡಿದರು.  

ವಸ್ತು ಪ್ರದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ರೈತರು ಮತ್ತು ಸಾರ್ವಜನಿಕರು ವಿಕ್ಷಿಣೆಮಾಡಿ ಹರ್ಷ ವ್ಯಕ್ತಪಡಿಸಿದರು. ರೇಷ್ಮೆ ವಸ್ತುಪ್ರದರ್ಶನದಲ್ಲಿ ಹಿಪ್ಪುನೇರಳೆ ಕೃಷಿಗೆ ಸಂಬಂದಿಸಿದಂತೆ ಪ್ರಸಿದ್ದ ವಿ1 ತಳಿ ಹಿಪ್ಪುನೇರಳೆ ಸಸಿಗಳು, ನಾಟಿ ಪದ್ಧತಿ ಮತ್ತು ಹಿಪ್ಪುನೇರಳೆ ಕೃಷಿಯಲ್ಲಿ ಹನಿ ನೀರಾವರಿ ಪದ್ಧತಿಯ ಅಳವಡಿಕೆಯ ಪ್ರಾಮುಖ್ಯತೆಯನ್ನು ಮಾದರಿ ಮೂಲಕ ಪ್ರದರ್ಶಿಸಲಾಗಿತ್ತು. ರೇಷ್ಮೆ ಹುಳು ಸಾಕಾಣಿಕೆಗೆ ಸಂಬಂಧಿಸಿದಂತೆ ರೇಷ್ಮೆ ಹುಳುವಿನ ಮೊಟ್ಟೆಯಿಂದ ಹಿಡಿದುಕೊಂಡು ಪ್ರತಿಯೊಂದು ಹಂತದ ಹುಳುಗಳು, ನೈಜವಾಗಿ ಹುಳುಗಳು ಚಂದ್ರಿಕೆಯ ಮೇಲೆ ಗೂಡು ಕಟ್ಟುತ್ತಿರುವ ಕ್ರಿಯೆ ಎಲ್ಲಾ ವಿಕ್ಷಕರ ಗಮನ ಸೆಳೆದಿತು ಮತ್ತು ರೇಷ್ಮೆ ಹುಳು ಸಾಕಾಣಿಕೆ ಮನೆ, ರೇಷ್ಮೆ ಹುಳು ಸಾಕಾಣಿಕಾ ತಾತ್ಕಾಲಿಕ ಶೇಡ್ ಮಾದರಿಗಳು ಹಾಗೂ ಸೋಂಕು ನಿವಾರಕಗಳನ್ನು ಪ್ರದರ್ಶಿಸಲಾಗಿತ್ತು.  

ರೇಷ್ಮೆ ಸಾಕಾಣಿಕೆಗೆ ಸಂಬಂದಿಸಿದಂತೆ ಪ್ರತಿಯೊಂದು ಮಾಹಿತಿ ಯಶಸ್ವಿ ರೈತರ ಯಶೋಗಾಥೆ ಹಾಗು ವನ್ಯ ರೇಷ್ಮೆ ಕೃಷಿಯ ಕುರಿತು ವಿಡಿಯೊ ಮೂಲಕ ಪ್ರದರ್ಶಿಸಲಾಗಿತ್ತು. ಹಾಗೆಯೇ ನೂಲು ಬಿಚ್ಚಾಣಿಕೆಗೆ ಯೋಗ್ಯವಲ್ಲದ ಗೂಡುಗಳಿಂದ ತಯಾರಿಸಿದ ವಸ್ತುಗಳಾದ ಹಾರಗಳು, ಹೂಗುಚ್ಚಗಳು, ಹೂವಿನ ಕುಂಡಲಗಳು, ಬಾರ್ಬಿ ಡಾಲ್‌ಗಳು, ತೋರಣಗಳು ಮತ್ತು ಪೋಟೊ ಪ್ರೇಮ್‌ಗಳಂತಹ ಕರಕುಶಲ ವಸ್ತುಗಳು, ಸೆಲ್ಪಿ ರೇಷ್ಮೆ ಚಿಟ್ಟೆ, ರೇಷ್ಮೆ ಹುಳುವಿನ ಜೀವನ ಚಕ್ರದ ವಿಧ್ಯುತ್ ಬೆಳಕಿನಿಂದ ಕೂಡಿದ ಪ್ರದರ್ಶನ ಫಲಕ ಎಲ್ಲರ ಆಕರ್ಷಣೆಯ ಮುಖ್ಯ ಭಾಗವಾಗಿದ್ದವು ಹಾಗೂ ರೇಷ್ಮೆ ಕೃಷಿಯ ಮೌಲ್ಯವರ್ಧನೆಯ ಮಹತ್ವ ಸಾರು ವಂತಿದ್ದವು  ವಸ್ತು ಪ್ರದರ್ಶನದಲ್ಲಿ ಮಲ್ಬರಿ ರೇಷ್ಮೆಯ ವಿವಿಧ ತಳಿಗಳಾದ ಮಿಶ್ರತಳಿ (ಸಿ.ಬಿ) ಗೂಡು ಮತ್ತು ದ್ವಿತಳಿ ಹೈಬ್ರಿಡ್ ಗೂಡುಗಳು, ಟಸಾರ್, ಮುಗಾ ಮತ್ತು ಎರಿ ರೇಷ್ಮೆ ಹುಳುವಿನ ವಿವಿಧ ಪ್ರಭೇದಗಳ ಗೂಡುಗಳು, ನೂಲುಗಳ ಪ್ರದರ್ಶನ, ವಿವಿಧ ಬಗೆಯ ರೇಷ್ಮೆ ಸೀರೆಗಳು ಮತ್ತು ಕಚ್ಚಾ ರೇಷ್ಮೆ ನೂಲಿನ ಶಾಲ್‌ಗಳು ವೀಕ್ಷಕರ ಕುತೂಹಲ ಹೆಚ್ಚುವಂತೆ ಮೆರಗು ನೀಡುತ್ತಿದ್ದವು.ರೇಷ್ಮೆಯಿಂದ ರೂಪಗೊಂಡ ಸಂಪೂರ್ಣ ವಿವಾಹ ಸಂಪ್ರದಾಯವನ್ನು ಬಿಂಬಿಸುವ ವಿನೂತನ ಕಲ್ಪನೆ ನೋಡುಗರ ಗಮನ ಸೆಳೆಯಿತು-ವಧು ವರರ ಗೊಂಬೆಗಳ ಮೂಲಕ ಮದುವೆ ಉಡುಪುಗಳೊಂದಿಗೆ ಮದುವೆಯ ಹಾರ, ವಧುವಿನ ಆಭರಣಗಳಾದ ಕಿವಿಯೋಲೆ, ನೆಕ್ಸಸ್, ಬಳೆಗಳು ಸಂಪೂರ್ಣವಾಗಿ ರೇಷ್ಮೆ ಗೂಡು ಮತ್ತು ನೂಲಿನಿಂದ ಅಲಂಕರಿಸಿ ರೇಷ್ಮೆಯಿಂದ-ಮದುವೆಯವರೆಗಿನ ವೈಭವವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿ ರೇಷ್ಮೆ ಕೃಷಿಯ ಸಾಂಸ್ಕೃತಿಕ ಮತ್ತು ಕಲಾತ್ಮಕ ಮಹತ್ವವನ್ನು ಒತ್ತಿ ಹೇಳುತ್ತಿದ್ದವು ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು. 

ಈ ಸಂದರ್ಭದಲ್ಲಿ ಶಾಸಕರು ಹಾಗೂ ಉಪಾಸಭಾಧ್ಯಕ್ಷ ರಾದ ರುದ್ರ​‍್ಪ ಲಮಾಣಿ. ಸಂಸದರಾದ ಬಸವರಾಜ ಬೊಮ್ಮಾಯಿ,ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸವರಾಜ ನೀ ಶೀವಣ್ಣನವರ, ಹುಕ್ಕೇರಿ ಮಠದ ಪರಮಪೂಜ್ಯ ಮ.ನಿ.ಪ್ರ. ಸದಾಶಿವ ಮಹಾ ಸ್ವಾಮಿಗಳು, ಗ್ಯಾರಂಟಿ ಯೋಜನೆ  ತಾಲ್ಲೂಕಾ ಅಧ್ಯಕ್ಷರು ಎಮ್ ಎಮ್ ಮೈದೂರ, ಜಿಲ್ಲಾಧಿಕಾರಿ  ಡಾ. ವಿಜಯ ಮಾಹಾಂತೇಶ ದಾನಮ್ಮನವರ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹಾಗೂ ಇತರರು ಇದ್ದರು.