ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪತ್ಯೇತರ ಚಟುವಟಿಕೆಗಳು ಸಹಕಾರಿಯಾಗುತ್ತವೆ : ಮೆಕ್ಕಳಕಿ
Extracurricular activities contribute to the all-round development of children: Mekkalakhi
ಮಾಂಜರಿ 23: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪತ್ಯೇತರ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಕೆಎ??? ಸಂಸ್ಥೆಯ ಚಿಕ್ಕೋಡಿಯ ಅಭಿಯಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾಕ್ಟರ್ ಸಚಿನ್ ಮೆಕ್ಕಳಕಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಕೆಎ??? ಶಿಕ್ಷಣ ಸಂಸ್ಥೆಯ ಎಸ್ ಸಿ ಪಾಟೀಲ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ಸಾಲಿನ ಪತ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಶಾಲಾ ಸಂಸತ್ ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಕ್ಕಳು ಮೊಬೈಲ್ ಬಲಿಯಾಗದಂತೆ ಎಚ್ಚರವಹಿಸುವುದು ಪಾಲಕರ ಕರ್ತವ್ಯ, ಶಾಲೆಯ ಉತ್ತರೋತ್ತ ಬೆಳವಣೆಗೆಗೆ ಬೆನ್ನುಲುಬಾಗಿ ನಿಲ್ಲುತ್ತೇನೆ. ಶಾಲೆಯ ಗ್ರಾಮೀಣ ಮಟ್ಟದಲ್ಲಿ ಬೆಳೆದು ಬಂದ ಹಾದಿಯನ್ನು ನೆನಪಿಸಿದ ಅವರು, ಶಾಲೆಯು ಇನ್ನೂ ಉತ್ತುಂಗಕ್ಕೇರಲಿ ಎಂದು ಹಾರೈಸಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಸ್ಥಳೀಯ ಸಲ ಸಮಿತಿಯ ಅಧ್ಯಕ್ಷರಾದ ಬಸವರಾಜ್ ಕೋರೆ ಮಾತನಾಡಿ, ಪತ್ಯೇತರ ಚಟುವಟಿಕೆಗಳ ಜೊತೆಗೆಓದಿನಲ್ಲಿ ಆಸಕ್ತಿ ವಹಿಸಿ ವಿದ್ಯಾವಂತರಾಗಿ ತಂದೆ-ತಾಯಿಯ ಋಣ ತೀರುಸುವಂತೆ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸುವಂತೆ ತಿಳಿಸಿದರು
ಈ ಕಾರ್ಯಕ್ರಮಕ್ಕೆ ಸ್ಥಳೀಯ ಸಲಾ ಸಮಿತಿಯ ಸದಸ್ಯರಾದ ಅಣ್ಣ ಸಾಹೇಬ್ ಜಕಾತೆ ಕುಮಾರ್ ಕೋರೆ ವಿವೇಕ್ ನಷ್ಟೇ ತುಕಾರಾಮ ಪಾಟೀಲ್ ಬಿ ಎಸ್ ಅಂಬಿ ಜೆ ಎಸ್ ತಮಗೌಡ ಪಿ ಎನ್ ತಳವಾರ್ ಎಂ ಎಸ್ ಕಾನಡೆ ಪಾರ್ಥ ಸಾರಥಿ ನಂದಾ ಮಹುವಾ ನಿಯೋಗಿ ಹಾಜರಿದ್ದರು
ಸಂತೋಷ್ ಹಿರೇಮಠ ಸ್ವಾಗತಿಸಿ ಬಿ ಎಸ್ ಜಕಾತಿ ನಿರೂಪಿಸಿ ವಂದಿಸಿದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 