ಪತ್ಯೇತರ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ: ಚೌಗುಲಾ

ಪತ್ಯೇತರ ಚಟುವಟಿಕೆಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ: ಚೌಗುಲಾ  Extra-curricular activities contribute to the all-round development of children: Chowgula

ಮಾಂಜರಿ 05: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪತ್ಯೇತರ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಚಿಕ್ಕೋಡಿಯ ಸಿಪಿಐ ವಿಶ್ವನಾಥ್ ಚೌಗುಲಾ ಹೇಳಿದರು. 

ಅವರು ಶನಿವಾರರಂದು ಸಮೀಪದ ಶುರುಗುಪ್ಪಿ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ 25/26 ಸಾಲಿನ ಪತ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಶಾಲಾ ಸಂಸತ್ ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮಕ್ಕಳು ಮೊಬೈಲ್ ಬಲಿಯಾಗದಂತೆ ಎಚ್ಚರವಹಿಸುವುದು ಪಾಲಕರ ಕರ್ತವ್ಯ, ಶಾಲೆಯ ಉತ್ತರೋತ್ತ ಬೆಳವಣೆಗೆಗೆ ಬೆನ್ನುಲುಬಾಗಿ ನಿಲ್ಲುತ್ತೇನೆ. ಶಾಲೆಯ ಗ್ರಾಮೀಣ ಮಟ್ಟದಲ್ಲಿ ಬೆಳೆದು ಬಂದ ಹಾದಿಯನ್ನು ನೆನಪಿಸಿದ ಅವರು, ಶಾಲೆಯು ಇನ್ನೂ ಉತ್ತುಂಗಕ್ಕೇರಲಿ ಎಂದು ಹಾರೈಸಿದರು. 

ದಿವ್ಯ ಸಾನಿಧ್ಯ ವಹಿಸಿದ ಸದ್ಗುರು ಡಾಕ್ಟರ್ ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ಆಶೀರ್ವಚನ ಮತ್ತು ಮಾರ್ಗದರ್ಶನ ನೀಡುತ್ತಾ ಕೆಎಲ್‌ಇ ಸಂಸ್ಥೆಯ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಸಪ್ತರ್ಷಿಗಳು ಸ್ಥಾಪಿಸಿದ ಕೆಎಲ್‌ಇ ಸಂಸ್ಥೆ ಡಾಕ್ಟರ್ ಪ್ರಭಾಕರ್ ಕೋರೆಯವರ ನೇತೃತ್ವದಲ್ಲಿ ವಿಶ್ವವಿಖ್ಯಾತ ಹೊಂದಿದೆ ಎಂದು ಹೇಳಿದರು. 

 ವಿದ್ಯಾರ್ಥಿಗಳಾದವರು ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡು ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಇರಬೇಕು ಭಕ್ತಿ ಶ್ರದ್ಧೆಯಿಂದ ಓದಿ ವಿದ್ಯಾರ್ಥಿ ಜೀವನ ಬಂಗಾರದಂತೆ ವಾಗಿರಬೇಕು. ಜ್ಞಾನವೆಂಬ ಆಸ್ತಿಯನ್ನು ಗಳಿಸಿ ಸಮಾಜದ ಆಸ್ತಿ ಆಗಿರಬೇಕು ಎಂದು ಮಾರ್ಗದರ್ಶನ ನೀಡಿದರು  

 ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಕಾರ್ಯಾಧ್ಯಕ್ಷರು ಶಿವಾನಂದ್ ಬಿ ಪಾಟೀಲ್ ಮಾತನಾಡುತ್ತಾ ಡಾಕ್ಟರ್ ಪ್ರಭಾಕರ್ ಕೋರೆ ಅವರ ಪ್ರಯತ್ನದಿಂದ ಗ್ರಾಮೀಣ ಪ್ರದೇಶದಲ್ಲಿ ಕೆಎಲ್‌ಇ ಸಂಸ್ಥೆ ಉನ್ನತ ಮಾದರಿಯಲ್ಲಿ ಸಾಗುತ್ತದೆ. ವಿದ್ಯಾರ್ಥಿಗಳಾದವರು ತಮ್ಮ ಪ್ರತಿಭೆಗಳನ್ನು ಅರಳಿಸುವ ಕೆಲಸ ಮಾಡಬೇಕೆಂದು ಹೇಳಿದರು. 2024-25ನೇ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೆದ್ದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.  

ಆರ್ ಡಿ ಪವಾರ್ ಮತ್ತು ವೈಷ್ಣವಿ ಎಸ್ ಚೌಗುಲೆ ನಿರೂಪಿಸಿದರು. ಶ್ರಾವಣಿ ಕುಲಕರ್ಣಿ ಪ್ರಾರ್ಥನೆ ಗೀತೆಯ ನೃತ್ಯದ ಮೂಲಕ ಸ್ವಾಗತಿಸಿದಳು. ಪ್ರೊಫೆಸರ್ ಪಿಎಸ್ ರತ್ತು ಅತಿಥಿಗಳ ಸ್ವಾಗತ ಮತ್ತು ಕಿರು ಪರಿಚಯ ಮಾಡಿದರು. ಎಲ್ಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊಫೆಸರ್ ಕೆ ಎಂ ಮಾಳಿ ವಂದಿಸಿದರು.