ಅಳಿವಿನ ದಂಗೆ: 500 ಪ್ರತಿಭಟನಾಕಾರರ ಬಂಧನ

ಲಂಡನ್, ಅ 9  ಹವಾಮಾನ ಬದಲಾವಣೆಯ ವಿರುದ್ಧ  ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಲಂಡನ್ ನಲ್ಲಿ ಅಳಿವಿನ ದಂಗೆ ಆರಂಭವಾಗಿದೆ.  ಪ್ರತಿಭಟನೆ ಆರಂಭವಾದ ಮೊದಲ 24 ಗಂಟೆಗಳಲ್ಲಿ ಸುಮಾರು 500 ಪ್ರತಿಭಟನಾಕಾರರನ್ನು ಲಂಡನ್ನ ಮೆಟ್ರೋಪಾಲಿಟನ್ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ, ಲಂಡನ್ ಸೇರಿದಂತೆ ವಿವಿಧ ಪ್ರಮುಖ ಯುರೋಪಿಯನ್ ನಗರಗಳಲ್ಲಿ ಅಳಿವಿನ ದಂಗೆಯಿಂದ ಸಿಂಕ್ರೊನೈಸ್ ಮಾಡಿದ ಪ್ರತಿಭಟನೆಯನ್ನು ಪ್ರಾರಂಭಿಸಲಾಯಿತು,  ಧರಣಿ, ಸಂಚಾರ ತಡೆ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟಿಸು ಸರ್ಕಾರದ ಗಮನ ಸೆಳೆಯಲಾಗುತ್ತಿದೆ.  ಮಂಗಳವಾರ, ಮೆಟ್ರೋಪಾಲಿಟನ್ ಪೊಲೀಸರು ಪ್ರತಿಭಟನೆಯನ್ನು ಟ್ರಾಫಲ್ಗರ್ ಚೌಕಕ್ಕೆ ಸೀಮಿತಗೊಳಿಸಿದ್ದು, ಅದನ್ನು ಮೀರಿದಲ್ಲಿ ಯಾರನ್ನಾದರೂ ಬಂಧಿಸಲಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. ಪೊಲೀಸರ ಪ್ರಕಾರ, ಸೋಮವಾರ ಲಂಡನ್ನಲ್ಲಿ ನಡೆದ ಅಳಿವಿನ ದಂಗೆ ಪ್ರತಿಭಟನೆಯ ಭಾಗವಾಗಿ ಒಟ್ಟು 280 ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಮಂಗಳವಾರ, 1730 ಗಂಟೆಗಳವರೆಗೆ ಒಟ್ಟು 212 ಜನರನ್ನು ಬಂಧಿಸಲಾಗಿದೆ. ಬಹುಪಾಲು ಪ್ರತಿಭಟನಾಕಾರರನ್ನು ದಂಡದೊಂದಿಗೆ ಬಿಡಲಾಗಿತ್ತು.  ಆದಾಗ್ಯೂ, ಅವರು ಮತ್ತೆ ಪ್ರತಿಭಟನೆಗೆ ಮರಳಿದ್ದಾರೆ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಸಾರ್ವಜನಿಕರ ಗಮನವನ್ನು ಸೆಳೆಯುವ ಪ್ರಯತ್ನವಾಗಿ ಇಂತಹ ಪ್ರತಿಭಟನೆಗಳನ್ನು ಸಕ್ರಿಯವಾಗಿ ನಡೆಸುತ್ತಿದೆ, ಇದನ್ನು ಅವರು 'ಹವಾಮಾನ ತುರ್ತುಸ್ಥಿತಿ' ಎಂದು ಕರೆಯುತ್ತಾರೆ ಎಂದು ವರದಿ ಸೇರಿಸಲಾಗಿದೆ ಬಲರ್ಿನ್, ಆಮ್ ಸತರದಯಾಡ್ಯಾಮ್ ಮತ್ತು ಸಿಡ್ನಿಯಂತಹ ಇತರ ನಗರಗಳಲ್ಲಿಯೂ ಪ್ರತಿಭಟನೆಗಳಯ ನಡೆಂಯುತ್ತಿವೆ.