ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗಾಗಿ, ಶಾಲೆಗಳಿಗೆ ರಜೆ ವಿಸ್ತರಣೆ: ಎಐಡಿಎಸ್‌ಓ ಆಕ್ಷೇಪ
Extension of school holidays for socio-educational survey: AIDSSO objects
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗಾಗಿ, ಶಾಲೆಗಳಿಗೆ ರಜೆ ವಿಸ್ತರಣೆ: ಎಐಡಿಎಸ್‌ಓ ಆಕ್ಷೇಪ
ಧಾರವಾಡ 07: ರಾಜ್ಯ ಸರ್ಕಾರವು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ರಜೆಯನ್ನು ವಿಸ್ತರಿಸಿದೆ. ಈ ಕ್ರಮವು ಅತ್ಯಂತ ಅಪ್ರಜಾತಾಂತ್ರಿಕವಾಗಿದ್ದು, ಇದರಿಂದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಡ್ಡಿ ಎದುರಾಗುವುದರಲ್ಲಿ ಸಂಶಯವಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಮತ್ತು ಸರ್ಕಾರಿ ಶಾಲಾ ಮಕ್ಕಳ ನಡುವೆ ಭೀಕರ ತಾರತಮ್ಯ ಉಂಟಾಗುವ ಆತಂಕ ಎದುರಾಗಿದೆ.
ಈಗಾಗಲೇ ಶಾಲಾ ಶಿಕ್ಷಕರು ಭೋದನೆ ಮಾಡುವ ಜೊತೆಗೆ ಭೋದಕೇತರ ಚಟುವಟಿಕೆಗಳ ಜವಾಬ್ದಾರಿಗಳನ್ನು ನಿರ್ವಹಿಸುವ ದುಸ್ಥಿತಿ ಇದ್ದು, ಈ ಸಮೀಕ್ಷೆಯ ಜವಾಬ್ದಾರಿಯು ಹೊರೆಯಾಗಲಿದೆ ಎಂದು ಶಿಕ್ಷಕರಿಂದಲೂ ಕೇಳಿಬರುತ್ತಿದೆ. ರಜೆ ವಿಸ್ತರಣೆ ಆದರೇ ಕಡಿಮೆ ಸಮಯದಲ್ಲಿ ಪಾಠಗಳನ್ನು ಸಂಪೂರ್ಣಗೊಳಿಸುವ ಒತ್ತಡಕ್ಕೆ ಶಿಕ್ಷಕರು ಸಿಲುಕಲಿದ್ದಾರೆ. ಅಲ್ಲದೇ ಈ ಕ್ರಮವು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಸ್ಥಿರತೆಯನ್ನು ಹಾಳು ಮಾಡುತ್ತದೆ. ಬೋಧನೆ ಮತ್ತು ಕಲಿಕೆಯ ಶಾಲಾ ಪ್ರಮುಖ ಕಾರ್ಯಕ್ಕೆ ತೊಂದರೆಯಾಗದಂತೆ ಪೂರಕ ಯೋಜನೆಯಿಲ್ಲದೆ, ಚರ್ಚೆಯು ಮಾಡದೇ ಶಾಲೆಗಳಿಗೆ ಏಕಾಏಕಿ ರಜೆಯನ್ನು ವಿಸ್ತರಿಸಿರುವುದು ಶೋಚನೀಯ ಸಂಗತಿಯಾಗಿದೆ. ಜೊತೆಗೆ ಸರ್ಕಾರಿ ಶಾಲಾ ಮಕ್ಕಳ ಫಲಿತಾಂಶ ಕುಸಿಯುವ ಭೀತಿ ಉಂಟಾಗಿದೆ.
ಸಮೀಕ್ಷೆಯ ಕೆಲಸಕ್ಕೆ ಸರ್ಕಾರಿ ಶಾಲಾ ಸಮಯವನ್ನು ಬಲಿಕೊಡದೆ, ಮಕ್ಕಳ ಶೈಕ್ಷಣಿಕ ಭವಿಷ್ಯ ಹಿತದೃಷ್ಟಿಯಿಂದ ರಜೆ ವಿಸ್ತರಣೆಯ ಆದೇಶವನ್ನು ಹಿಂಪಡೆದು, ಸಮೀಕ್ಷೆಯ ಕೆಲಸಕ್ಕೆ ಪರ್ಯಾಯ ವ್ಯವಸ್ಥೆಗೆ ಸರ್ಕಾರವು ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್‌ಓ ಧಾರವಾಡ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 