ಸದೃಡ ಆರೋಗ್ಯ, ಬಲಿಷ್ಠ ಶರೀರಕ್ಕೆ ವ್ಯಾಯಾಮವು ಅತ್ಯಗತ್ಯ: ಮಂಗಲಾ ಅಂಗಡಿ
Exercise is essential for good health and a strong body: Mangala Angadi
ಸದೃಡ ಆರೋಗ್ಯ, ಬಲಿಷ್ಠ ಶರೀರಕ್ಕೆ ವ್ಯಾಯಾಮವು ಅತ್ಯಗತ್ಯ: ಮಂಗಲಾ ಅಂಗಡಿ
ಯರಗಟ್ಟಿ, 03 ; ಇಂದಿನ ಯುವಕರು ದುಶ್ಚಟದಿಂದ ತಮ್ಮ ಶರೀರ ಹಾಳು ಮಾಡಿಕೊಳ್ಳುತ್ತಿದ್ದಾರೆ, ಸದೃಡ ಆರೋಗ್ಯಕ್ಕೆ ಬಲಿಷ್ಠ ಶರೀರದ ಜತೆಗೆ ವ್ಯಾಯಾಮವು ಅತ್ಯಗತ್ಯ ಎಂದು ಲೋಕಸಭಾ ಮಾಜಿ ಸಂಸದೆ ಮಂಗಲಾ ಅಂಗಡಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ಜೈಜವಾನ ಜೈ ಕಿಸಾನ್ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸನ್ 2022-23 ನೇ ಸಾಲಿನ ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೂತನವಾಗಿ ನಿರ್ಮಿಸಿದ ವ್ಯಾಯಾಮ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಗಡಿ ಕಾಯುವಲ್ಲಿ ಸೈನಿಕರ ಪಾತ್ರ ಮಹತ್ವದಾಗಿದೆ. ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ವೀರಯೋಧರಿಗೆ ಕೃತಜ್ಞತೆ ಸಲ್ಲಿಸೋಣ ಎಂದು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಎ.ವಿ.ಇಂಗಳೆ ಮಾತನಾಡಿ, ಮಕ್ಕಳಿಗೆ ಶಾಲಾ ಹಂತದಲ್ಲಿಯೇ ದೇಶಾಭಿಮಾನ, ಮುಂದಾಳತ್ವ ಗುಣ, ಪರೋಪಕಾರ ಮನೋಭಾವನೆ ಬೆಳೆಸಬೇಕು. ಅಂತಹ ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಹೇಳಿದರು.ಪಿಡಿಒ ವಿಜಯಕುಮಾರ ಅಂಗಡಿ ಮಾತನಾಡಿ, ಯೋಧ, ರೈತ, ಕಾರ್ಮಿಕ ಮತ್ತು ಶಿಕ್ಷಕ ಇವರನ್ನು ಎಲ್ಲರೂ ಗೌರವಿಸಬೇಕು ಎಂದರು.ಮುನವಳ್ಳಿ ಸೋಮಶೇಖರಮಠದ ಮುರಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಕಮಲಾಕ್ಷಿ ದೇಸಾಯಿ, ಗ್ರಾಪಂ ಅಧ್ಯಕ್ಷೆ ಕವಿತಾ ಬಾಲರಡ್ಡಿ, ಪಿಡಿಒ ಎಚ್.ಕೆ.ಚೌರಡ್ಡಿ, ಶಂಕರಗೌಡ ಪಾಟೀಲ, ಎಮ್.ವಿ.ಉಪ್ಪಿನ, ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸಪ್ಪ ಅಂಗಡಿ, ಉಪಾಧ್ಯಕ್ಷ ಚನ್ನಪ್ಪ ಕಡಬಿ, ನಿರ್ದೇಶಕ ಮಹಾದೇವ ಹೊಸವಾಳ, ಆಝಾದ ಕುದರಿ, ಕಮಾಲಸಾಬ ಕಂಗನೊಳ್ಳಿ, ಶಂಕರೆಪ್ಪ ಗಾಣಿಗೇರ, ವೀರಣ್ಣ ತಲ್ಲೂರ, ಭೀಮಶೆಪ್ಪ ಉಪ್ಪಾರ, ರುದ್ರ್ಪ ಹೊಸವಾಳ, ಬಸಲಿಂಗಪ್ಪ ಶೀಲವಂತರ, ಭೀಮಪ್ಪ ಗಾಣಿಗೇರ, ಹುಸೇನಸಾಬ ಕುದರಿ, ಬಸವಂತಪ್ಪ ಹೋಳಿ, ಬಸವರಾಜ ಕಾಜಗಾರ, ಸೋಮಲಿಂಗಪ್ಪ ಉಪ್ಪಾರ, ಬಾಪುಸಾಬ ಗುಡಗುಡಿ, ಬಾಬಾಸಾಬ ಬಾಣದಾರ, ಮಹಾಂತೇಶ ಕೊಪ್ಪದ ರಮೇಶ ಮಡಿವಾಳರ, ಸಂಗನಗೌಡ ಪಾಟೀಲ, ನಾಗಪ್ಪ ಲಕ್ಕನ್ನವರ, ಮಲಿಕಸಾಬ ಸಾಬರ, ಮಹೇಶ ಬಾವಿಕಟ್ಟಿ, ಈರಣ್ಣ ಉಪ್ಪಿನ, ಪ್ರಭಾತರಾವ ಇಂಗಳೆ, ಶಿವಾನಂದ ಗಾಣಿಗೇರ, ಧರೇಪ್ಪ ಗಾಣಿಗೇರ, ಅದಮ ಶಿದ್ನಾಳ, ಮಂಜುನಾಥ ಉಗರಗೋಳ, ಶಾನೂರ ಜಮಾದಾರ, ವಿನೋದ ತಲ್ಲೂರ, ಗೀರೀಶ ಗಾಣಿಗೇರ, ರಾಜಶೇಖರ ಕಲ್ಲನ್ನವರ, ಪ್ರಶಾಂತ ದುಂಡನಕೊಪ್ಪ, ಯಲ್ಲನಾಯ್ಕ ನಾಯ್ಕರ, ಛಾಯಾ ತಲ್ಲೂರ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು. ಮುಖ್ಯಶಿಕ್ಷಕ ಡಿ.ಡಿ.ಭೋವಿ ಸ್ವಾಗತಿಸಿದರು, ಶಿಕ್ಷಕ ಬಸನಗೌಡ ಅಣ್ಣಿಗೇರಿ ನಿರೂಪಿಸಿ, ವಂದಿಸಿದರು.
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ 