ಮುರಡಿ ಗ್ರಾ.ಪಂ ಕೂಸಿನ ಮನೆಗೆ ಕಾರ್ಯನಿರ್ವಾಹಕ ಅಧಿಕಾರಿಗಳ ಭೇಟಿ: ನೀಲಗಂಗಾ ಬಬಲಾದ
Executive officers visit Muradi Gram Panchayat: Neelganga Babalada
ಯಲಬುರ್ಗಾ 27: ತಾಲೂಕಿನ ಮುರಡಿ ಗ್ರಾಮದಲ್ಲಿ ನಡೆಯುತ್ತಿರುವ ಕೂಸಿನ ಮನೆಯು ಚನ್ನಾಗಿದ್ದು, ಮಕ್ಕಳ ಪಾಲನೆ ಪೋಷಣೆಯನ್ನು ಕೇರ್ ಟೇಕರ್ ಚನ್ನಾಗಿ ಮಾಡುತ್ತಿದ್ದಾರೆ. ಗುಣಮಟ್ಟದ ಆಹಾರ ವಿತರಿಸುತ್ತಿದ್ದು, ಮಕ್ಕಳಿಗೆ ಪೂರಕವಾಗಿದೆ. ಇದು ತಾಲೂಕಿಗೆ ಮಾದರಿಯ ಕೂಸಿನ ಮನೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ನೀಲಗಂಗಾ ಬಬಲಾದ ಅಭಿಪ್ರಾಯಪಟ್ಟರು. ಇಂದು ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮ ಪಂಚಾಯತಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಕೂಸಿನ ಮನೆ ಪರೀಶೀಲಿಸಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೂಸಿನ ಮನೆ ವರವಾಗಿದೆ. ಅದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಕೂಲಿಕಾರರ ಮಕ್ಕಳು ಪಡೆಯಬೇಕು ಎಂದರು.
ಮಕ್ಕಳಿಗೆ ಜಿಲ್ಲಾ ಪಂಚಾಯತಿ ಸಿದ್ದಪಡಿಸಿದ ಆಹಾರದ ಮೆನು ಕೊಡಬೇಕೆಂದು ತಿಳಿಸಿದಾಗ ಕೇರ್ ಟೇಕರ್ ಅವರು ಪ್ರತಿದಿನದ ಬೆಳಗ್ಗೆ ಹಾಲು, ಗಂಜಿ, ದಾಲ್ ಕಿಚಡಿ, ಹೀಗೆ ಪ್ರತಿದಿನದ ಮೆನುವಿನಂತೆ ತಯಾರಿಸಿ ಕೊಡುತ್ತಿದ್ದೇವೆ. ಅದರ ಜೊತೆಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದ್ದು, ಹೀಗಾಗಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೂಸಿನ ಮನೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು. ಮುರಡಿ ಗ್ರಾಪಂ ವ್ಯಾಪ್ತಿಯ ನರಸಾಪುರ ಗ್ರಾಮದ ಹತ್ತಿರ ನಿರ್ಮಾಣಗೊಂಡಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಸಂಪೂರ್ಣ ಮುಗಿದಿದ್ದು, ಅದರಲ್ಲಿ ಕಸ ವಿಲೇವಾರಿ ಮಾಡಬೇಕು. ಸ್ವ-ಸಹಾಯ ಸಂಘದ ಮಹಿಳೆಯರಿಗೆ ಅಲ್ಲಿ ಕೆಲಸ ಕೊಡಬೇಕು. ಬಳಿಕ ಎಫ್ ಎಸ್ ಟಿ ಘಟಕ ಪರೀಶೀಲಿಸಿ, ಕೂಡಲೇ ಎಫ್ ಎಸ್ ಟಿ ಘಟಕ ಪ್ರಾರಂಭಿಸಬೇಕು. ಇಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕರಾದ ಫಕೀರ್ಪ ಕಟ್ಟಿಮನಿ, ಅಕೌಂಟ್ ಆಫೀಸರ್ ಹಜರತ್ ಅಲಿ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ಗ್ರಾ.ಪಂ ಪಿಡಿಒರಾದ ಪುಷ್ಪಲತಾ ಪಾಟೀಲ್, ಡಿಇಒರಾದ ರಮೇಶ ಹಳ್ಳಿ, ತಾ.ಪಂ ಸಿಬ್ಬಂದಿ ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 