ಶಿಗ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಸಂಭ್ರಮ

ಶಿಗ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಸಂಭ್ರಮ  Excitement at the Shigli Cluster-Level Sports Meet


ಲಕ್ಷ್ಮೇಶ್ವರ"  17: ತಾಲೂಕಿನ ಶಿಗ್ಲಿಯ ಗ್ರಾಮದಲ್ಲಿ ಕ್ಲಸ್ಟರ ಮಟ್ಟದ ಕ್ರೀಡಾಕೂಟ ಸಂಭ್ರಮದೊಂದಿಗೆ ನಡೆಯಿತು ಗ್ರಾಮದ ಎಸ್ ಎಸ್ ಕೂಡ್ಲಮಠ ಪ್ರೌಢ ಶಾಲೆಯ ಮೈದಾನದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಚರ್ಮನಾರಾದ ಎಸ್ ಪಿ ಬಳಿಗಾರ ಆವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದವು ಪ್ರಾರಂಭಗೊಳಿಸಲಾಯಿತು ಕ್ರೀಡಾಕೂಟದ ಧ್ವಜಾರೋಹಣವನ್ನು ಸಮಿತಿಯ ಅಧ್ಯಕ್ಷರಾದ ಎಫ್ ಡಿ ಹುನಗುಂದ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್‌. ಬಿ.ಸಿಮಿಕೆರಿ ಅವರು ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಹಂತದಲ್ಲಿ ಪ್ರೀತಿಯ ಜೊತೆಗೆ ಕ್ರೀಡೆಯು ಅವಶ್ಯವಾಗಿದೆ ವಿದ್ಯಾರ್ಥಿಗಳಿಗೆ ಕ್ರೀಡೆಗಳಿಂದ ತಮ್ಮ ಆರೋಗ್ಯದ ಗುಣಮಟ್ಟ ಹೆಚ್ಚಿಸು ವುದರೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಒಂದು ಅವಕಾಶವಾಗಿದೆ ಎಂದರು ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಜಿ.ಎಫ್‌.ಘಂಟಾಮಠ,ಆಡಳಿತ ಮಂಡಳಿಯ ವಾಯ್ಸ್‌ ಚೇರಮನ್ ರಾದ ಹೆಚ್‌. ಎಫ್‌. ತಳವಾರ, ಗೌರವ ಕಾರ್ಯದರ್ಶಿಗಳಾದ ಸಿ. ಎಂ ರಾಗಿ,ಹಿರಿಯ ಸದಸ್ಯರುಗಳಾದ ಡಿ ವೈ ಹನಗುಂದ,ವಿ. ಎಚ್‌. ಪವಾಡದ,ಚಂದ್ರಣ್ಣ. ತೋಟದ,ಮಾಲತೇಶ್ ಪಾಟೀಲ್, ಭರತ್‌. ಬಳಿಗಾರ, ಕಳ್ಳಿಹಾಳ,ಕ್ಲಸ್ಟರಿನ ಸಂಯೋಜಕರರಾದ ಜ್ಯೋತಿ. ಗಾಯಕ್ವಾಡ,ಎಲ್ಲ ಶಾಲೆಗಳ ಮುಖ್ಯಾದ್ಯಾಪಕರುಗಳು, ಶಿಕ್ಷಕರು, ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಹಾಜರಿದ್ದರು.