ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶ
Excellent results for students of Basavajyothi Science and Commerce Undergraduate College
ಲೋಕದರ್ಶನ ವರದಿ
ಜಮಖಂಡಿ 10: ಮಾರ್ಚ್ 2026ರಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ ಸ್ಥಳೀಯ ಬಸವಜ್ಯೋತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನಿಂದ ವಿಜ್ಞಾನ ವಿಭಾಗದಿಂದ ಹಾಜರಾಗಿದ್ದ ಎಲ್ಲ 96 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ 100 ಫಲಿತಾಂಶ ನೀಡಿದ್ದಾರೆ ಎಂದು ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ತಿಳಿಸಿದ್ದಾರೆ.
ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾಗಿದ್ದ 27 ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ನೀಡಿದ್ದಾರೆ. ಒಟ್ಟು 56 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 58 ವಿದ್ಯಾರ್ಥಿಗಳು ಪ್ರಥಮ ದರ್ಜೆ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ ಕೀರ್ತಿ ತೇಲಿ(584), ಸೌಮ್ಯಾ ಬಳಗಾರ(581), ಸಿದ್ಧಾರ್ಥ ಕುಂಬಾರ(576), ಅಮೂಲ್ಯಾ ಗುರವ((573), ಪೂಜಾ ಒಡೆಯರ(570), ಭಾಗ್ಯಶ್ರೀ ತಳವಾರ(567), ಸೋನಿಯಾ ಪಾಟೀಲ(564), ಪ್ರವೀಣ ಸಾಳುಂಕೆ(563), ಸೌಮ್ಯಾ ಪಾಟೀಲ(562), ಸಿದ್ಧಾರ್ಥ ಬಿರಾದಾರ(557), ಬಸವರಾಜ ಬಿರಾದಾರ(556), ಲುಕ್ಮಣ ಝಾರೆ(556), ಜ್ಯೋತಿ ಜಕನೂರ(554), ಕಾವೇರಿ ಕೋಟ್ಯಾಳ(554), ಲಕ್ಷ್ಮೀ ಸವಸುದ್ದಿ(554), ಅಶ್ವಿನಿ ರಾಮತೀರ್ಥ(553), ಶ್ವೇತಾ ಅರ್ಜುನವಾಡಿ(552), ದುಂಡೇಶ ಜಕನೂರ(552), ಮಾಳಪ್ಪ ಮಾದರ(551), ಗುರುಪ್ರಸಾದ ಕಲ್ಮಾಡಿ(550), ಅಮೃತಾ ಬಳೂಳ(549), ದೀಪಾ ಶುಂಠಿ(549), ಭಾಗ್ಯಶ್ರೀ ಟಕ್ಕಳಕಿ(541) ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕಾವ್ಯಾ ಮುದ್ದಾಪುರ(579), ಭಾಗ್ಯಶ್ರೀ ತಳವಾರ(578) ಹಗೂ ಅಂಜನಾ ಮುದ್ದಾಪುರ(572) ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಗಣಿತ(4), ಭೌತಶಾಸ್ತ್ರ(2), ಲೆಕ್ಕಶಾಸ್ತ್ರ(2), ವ್ಯವಹಾರ ಅಧ್ಯಯನ(1), ಅರ್ಥಶಾಸ್ತ್ರ(1), ಇಂಗ್ಲಿಷ್(2), ಕನ್ನಡ(2) ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಗೀರೀಶ ಕಡ್ಡಿ, ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಉಪಪ್ರಾಚಾರ್ಯ ಶ್ರೀಕಾಂತ ಬೆಳ್ಳಿಹಾಳ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 