ಮುಕ್ತ ಚದುರಂಗ ಸ್ಪರ್ಧೆಗೆ ಉತ್ತಮ ಸ್ಪಂದನೆ

ಮುಕ್ತ ಚದುರಂಗ ಸ್ಪರ್ಧೆಗೆ ಉತ್ತಮ ಸ್ಪಂದನೆ  Excellent response to the open chess tournament

ಲೋಕದರ್ಶನ ವರದಿ 

ಹುಬ್ಬಳ್ಳಿ 30 : ವಚನ ಚದುರಂಗ ಸಂಸ್ಥೆ ಹಾಗೂ ನವನಗರ ನಿವಾಸಿಗಳ ಹಿತೋದ್ಧಾರಕ ಸಂಘದ ಆಶ್ರಯದಲ್ಲಿ ಬಸವರಾಜ (ರಾಜು) ಶಿವಪ್ಪ ಬಳಿಗಾರ್ ಸ್ಮರಣಾರ್ಥ ನವನಗರದ ಈಶ್ವರ್ ದೇವಸ್ಥಾನದಲ್ಲಿ ಮುಕ್ತ ಚದುರಂಗ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.  ಎಲ್ಲ ವಯೋಮಾನದ ಸ್ಪರ್ಧಿಗಳು ಬೆಳಗ್ಗೆಯಿಂದ ಸಂಜೆವರೆಗೆ ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.  

ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಶಿಕ್ಷಣ ತಜ್ಞ ಡಾ. ಕೆ.ಬಿ. ಗುಡಸಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳು ರಜಾದಿನಗಳನ್ನು ಇಂತಹ ಬೌದ್ಧಿಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು. ಚದುರಂಗ ಆಟವು ಏಕಾಗ್ರತೆ, ಚಿಂತನಾ ಸಾಮರ್ಥ್ಯ, ನೆನಪಿನ ಶಕ್ತಿ ಹಾಗೂ ನಿರ್ಧಾರ ಕೈಗೊಳ್ಳುವ ಕೌಶಲವನ್ನು ವೃದ್ಧಿಸುತ್ತದೆ. ಜ್ಞಾನಾರ್ಜನೆಗೂ ಇದು ಅತ್ಯಂತ ಸಹಕಾರಿ ಎಂದರು.  

ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ಭಾರತದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್ ಕೋನೇರು ಹಂಪಿ ಅವರ ಸಾಧನೆಯನ್ನು ಉದಾಹರಿಸಿದ ಅವರು, ಯುವ ಆಟಗಾರರು ಅವರಂತೆ ಉನ್ನತ ಸಾಧನೆ ಮಾಡುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.  

ವಚನ ಚದುರಂಗ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾ ಚದುರಂಗ ಸಂಸ್ಥೆಯ ಅಧ್ಯಕ್ಷ ಪ್ರಾಧ್ಯಾಪಕ ಡಾ. ವಿಶ್ವನಾಥ ಪಿ. ಬಳಿಗಾರ ಅವರು ಜಿಲ್ಲೆಯಲ್ಲಿ ಚದುರಂಗದ ಬೆಳವಣಿಗೆಗೆ ಮಾಡುತ್ತಿರುವ ಸೇವೆಯನ್ನು ಡಾ. ಗುಡಸಿ ಶ್ಲಾಘಿಸಿ, ಅವರ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.  

ಕಾರ್ಯಕ್ರಮದಲ್ಲಿ ಮುಕ್ತ ಚದುರಂಗ ಸ್ಪರ್ಧೆಯ ಸಂಯೋಜಕ ಹಾಗೂ ಧಾರವಾಡ ಜಿಲ್ಲಾ ಚದುರಂಗ ಸಂಸ್ಥೆಯ ಅಧ್ಯಕ್ಷ ಪ್ರಾಧ್ಯಾಪಕ ಡಾ. ವಿಶ್ವನಾಥ ಪಿ. ಬಳಿಗಾರ, ಕೈಗಾರಿಕೋದ್ಯಮಿ ಸಿ.ವಿ. ಬಳಿಗಾರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಮಾಳವದೇಕರ, ಈಶ್ವರ್ ದೇವಸ್ಥಾನದ ಅಧ್ಯಕ್ಷ ಬಸವರಾಜ ಪಾಟೀಲ, ಅರವಿಂದ ಯೇರಿ, ವಿನಯ ಕುರ್ತಕೋಟಿ, ಹಿರಿಯ ಚದುರಂಗ ಆಟಗಾರ ಎಸ್‌.ಎಂ. ಭಾಗವತ್, ಡಾ. ಸುರೇಶ ಡಿ. ಹೊರಕೇರಿ, ಪುಷ್ಪಲತಾ ಪಾಟೀಲ, ಪ್ರಭು ರೋಣದ್, ಪವನಕುಮಾರ ಸರದೇಸಾಯಿ, ಮಲ್ಲಮ್ಮ ವಫಾ, ಸೈಯದಾ ಅಂಜುಮ್, ಪ್ರೊ. ಕಾಕೋಳ, ಪ್ರೊ. ತಬೀಬ್, ಗೀರೀಶ್ ಕೊಪ್ಪಳ, ಸಿದ್ದಾರ್ಥ ಪಾಟೀಲ, ಮೃತ್ಯುಂಜಯ್ ಮಟ್ಟಿ, ಕಿರಣ್ ಮಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.