ಸಂಗನಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ

ಸಂಗನಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ Excellent performance of students of Sangana Basaveshwara Pre-University College

ಲೋಕದರ್ಶನ ವರದಿ 

ತಾಂಬಾ 10 : ಗ್ರಾಮದ ಸಂಗನಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಈ ಬಾರಿ ಮಹಾವಿದ್ಯಾಲಯವು ಶೇಕಡಾ 86.58 ಫಲಿತಾಂಶ ದಾಖಲಿಸಿದ್ದು,  31 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 159 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 57 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 28 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ಕಲಾ ವಿಭಾಗದಲ್ಲಿ ಸೌಂದರ್ಯ ಪೂಜಾರಿ 569 ಅಂಕಗಳನ್ನು (ಶೇ.94.83) ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಲಾವಣ್ಯ ಪ್ಯಾಟಿ 563 ಅಂಕಗಳನ್ನು (ಶೇ.93.83) ಪಡೆದು ದ್ವಿತೀಯ ಸ್ಥಾನ ಪಡೆದರೆ, ವೈಷ್ಣವಿ ಹರಿಜನ್ 553 ಅಂಕಗಳುನ್ನು (ಶೇ.92.16) ತೃತಿಯ ಸ್ಥಾನ ಪಡೆದಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಭಾಗ್ಯಶ್ರೀ ಹಿರೇಕುರಬರ 549 ಅಂಕಗಳನ್ನು (ಶೇ.91.50) ಪಡೆದು ಪ್ರಥಮ ಸ್ಥಾನ, ಸುಜಾತಾ ಜೋಗಿ 549 ಅಂಕಗಳು (ಶೇ.91.50) ದ್ವಿತೀಯ ಸ್ಥಾನ, ಶಿವಲಿಂಗಪ್ಪ ಹಿಪ್ಪರಗಿ 546 ಅಂಕಗಳನ್ನು (ಶೇ.91) ತೃತಿಯ ಸ್ಥಾನ ಪಡೆದಿದ್ದಾರೆ 

ವಿಜ್ಞಾನ ವಿಭಾಗದಲ್ಲಿ ರೇಷ್ಮಾ ರಾಠೋಡ 560 ಅಂಕಗಳನ್ನು (ಶೇ.93.33) ಪಡೆದು ಪ್ರಥಮಸ್ಥಾನ, ಕಮಲ ಚಾಂದಕವಟೆ 551 ಅಂಕಗಳು (ಶೇ.91.83) ದ್ವಿತೀಯ ಸ್ಥಾನ, ಸಹನಾ ನಂದರಗಿ 550 ಅಂಕಗಳನ್ನು (ಶೇ.91.66) ತೃತಿಯ ಸ್ಥಾನ ಪಡೆದಿದ್ದಾರೆ. ವಿದ್ಯಾಥಿಗಳ ಈ ಸಾಧನೆಗೆ ಎಸ್‌ವ್ಹಿವ್ಹಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮತ್ತು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ನೂತನ ಪ್ರಾಚಾರ್ಯರಾದ ಎ.ಎಮ್‌.ಬೇವಿನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.