ಡಾ. ಅಂಬೇಡ್ಕರ್ ಜಯಂತಿ ಆಚರಿಸಿ ಗಮನ ಸೆಳೆದ ಮಾಜಿ ಸೈನಿಕರ ಮಹಾಒಕ್ಕೂಟ
Ex-Servicemen's Grand Alliance draws attention by celebrating Dr. Ambedkar Jayanti
ಬೆಳಗಾವಿ: ಜಿಲ್ಲೆಯ ಮಾಜಿ ಸೈನಿಕರ ಮಹಾಒಕ್ಕೂಟದ ಕಾರ್ಯಾಲಯದಲ್ಲಿ ಡಾ: ಬಿ. ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಂವಿಧಾನ ಪೀಠಿಕೆಯ 200 ಪ್ರತಿಗಳನ್ನು ಹಂಚುವುದರ ಮೂಲಕ ವಿಭಿನ್ನವಾಗಿ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಒಕ್ಕೂಟದ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಅವರು ಮಾತನಾಡಿ, ಭಾರತದ ಪ್ರತಿಯೊಬ್ಬ ಪ್ರಜೆಯು ತನ್ನ ಜೀವನದ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಪಾಲನೆ ಮಾಡಬೇಕಾದ ನಿಯಮಾವಳಿಗಳ ಹಾಗೂ ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವ ಅತ್ಯದ್ಭುತ ಗ್ರಂಥವಾದ ಸಂವಿಧಾನವನ್ನು ರಚಿಸಿ ಸಮಾಜದಲ್ಲಿ ಸಮಾನತೆಯ ಬೆಳಕನ್ನು ಚೆಲ್ಲುವ ಕೆಲಸ ಮಾಡಿರುವಂತಹ ಧೀಮಂತ ನಾಯಕ ಡಾ. ಬಿ. ಆರ್ ಅಂಬೇಡ್ಕರ್. ಇವರು ಯಾವುದೇ ಒಂದು ಸಮಾಜ, ಒಂದು ಜಾತಿಗೆ ಸೀಮಿತವಾಗಿರುವ ನಾಯಕರಲ್ಲ ದೇಶದ ಪ್ರತಿಯೊಬ್ಬ ಪ್ರಜೆಗೂ ಮಾದರಿ ಮತ್ತು ಪ್ರೇರಣೆಯಾಗಿರುವ ನಾಯಕ. ಬಡವ -ಶ್ರೀಮಂತ ಕೆಳವರ್ಗ- ಮೇಲ್ವರ್ಗ ಎನ್ನದೇ ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು ಸಮಾನತೆಯಿಂದ ನೋಡಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸಂಗಪ್ಪ ಮೇಟಿ, ಸಹ ಕಾರ್ಯದರ್ಶಿಗಳಾದ ಸಂತೋಷ ಮಠಪತಿ, ಹಿರಿಯರಾದ ಅಶೋಕ ಮಜಗಿ, ಬಸವರಾಜ ವನ್ನೂರ, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಪಟ್ಟಣಶೆಟ್ಟಿ, ಸದಸ್ಯರಾದ ಗೀತಾ ಗನಬಸಪ್ಪನವರ ಮುಂತಾದವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 