ಪ್ರತಿಯೊಬ್ಬರು ಶೌಚಾಲಯವನ್ನು ಉಪಯೋಗಿಸಬೇಕು

ಗದಗ : ಸರಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಶೌಚಾಯಗಳನ್ನು ಉಪಯೋಗಿಸಬೇಕು. ಮಕ್ಕಳು ತಪ್ಪದೇ ಶಾಲೆಗೆ ಹೋಗುವುದರ ಜೊತೆಗೆ ಸಾಧನೆ ಮಾಡುವ ಛಲವನ್ನು ಹೊಂದಿರಬೇಕು ಎಂದು ಸ.ಹಿ.ಪ್ರಾ ಶಾಲೆಯ ಶಿಕ್ಷಕ ಎಮ್.ಎಸ್. ಮೇಘಾವತ ನುಡಿದರು. 

    ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ  ಸಿಂಗಟರಾಯನಕೇರಿ ತಾಂಡಾ ಗ್ರಾಮದ ಮರಿಯಮ್ಮ ದೇವಸ್ಥಾನದ ಆವರಣದಲ್ಲಿ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗದಗ ಹಾಗೂ ಗ್ರಾಮ ಪಂಚಾಯತ ಇವರ ಸಹಯೋಗದಲ್ಲಿ ಗ್ರಾಮ ಸಂಪರ್ಕ ಯೋಜನೆ ಅಡಿಯಲ್ಲಿ ಜಾನಪದ ಮತ್ತು ಬೀದಿ ನಾಟಕದ ಮೂಲಕ ಸಕರ್ಾರದ ಯೋಜನೆಯ ಕುರಿತು ಜನ ಜಾಗೃತಿ ಮೂಡಿಸಲು ಕ್ಷೇತ್ರ ಪ್ರಚಾರ ಕಾರ್ಯಕ್ರಮಕ್ಕೆ ತಮಟೆ ಬಾರಿಸುವುದರ ಮೂಲಕ ಚಾಲನೆ ನೀಡಿದರು.

      ಶ್ರೀ ಸಿದ್ಧಲಿಂಗೇಶ್ವರ ಜಾನಪದ ಕಲಾತಂಡ ಅಡವಿಸೋಮಾಪೂರ ಹಾಗೂ ಶ್ರೀ ಗುರು ಶಿಷ್ಯ ಪರಂಪರೆ ಜಾನಪದ ಕಲಾತಂಡ ಲಕ್ಕುಂಡಿ ಜಾನಪದ ಕಲಾ ತಂಡದವರು  ಗ್ರಾಮದ ಸ್ವಚ್ಚತೆ ಹಾಗೂ ಸಕರ್ಾರದ ವಿವಿಧ ಜನಪರ ಯೋಜನೆಗಳಾದ ಕಿಸಾನ್ ಸಮ್ಮಾನ್, ಸಹಾಯಧನ, ನೇಕಾರರು, ಮೀನುಗಾರರ ಸಾಲಮನಾ, ರೈತರ ಸಾಲಮನ್ನಾ,  ಆಯುಷ ಸಮ್ಮಾನ್ ಕಾಡರ್್ ಯೋಜನೆ, ವಿದ್ಯಾಶ್ರೀ ಯೋಜನೆ,ಮಾತೃ ಶ್ರೀ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಭಾಗ್ಯಶ್ರೀ ಯೋಜನೆ, ಗಂಗಾ ಕಲ್ಯಾಣ ಯೋಜನೆ, ರುದ್ರಾಪಿ ಯೋಜನೆಗಳ ಕುರಿತು ಆಯಾ ಇಲಾಖೆಯಲ್ಲಿ ಮಾಹಿತಿ ಪಡೆದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.  ಜನಪದ ಗೀತೆ ಹಾಗೂ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಿಸಿದರು. 

ಇದೇ ಸಂದರ್ಭದಲ್ಲಿ ಸರಕಾರಿ ಧನಂಜಯ.ಮ. ಚವ್ಹಾಣ, ದ್ಯಾಮಲ್ಲೇಪ್ಪ.ಜಾ.ಲಮಾಣಿ,  ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿ ಇದ್ದರು.