ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು ಡಾ.ಪಿ. ಲೀಲಾ

ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು ಡಾ.ಪಿ. ಲೀಲಾ   Everyone should strive to build a healthy society Dr. P. Leela

ಹಾವೇರಿ  01 :  ಸ್ವಾಸ್ಥ್ಯ ಮತ್ತು ಆಸ್ವಾಸ್ಥತೆ ಎನ್ನುವುದು ಸ್ವಾಭಾವಿಕವಾಗಿದ್ದರೊ ಅನೇಕ ಕಾರಣಗಳಿಂದ ಮಾನಸಿಕ ಸಮತೋಲನೆಯಲ್ಲಿ ಆಗುವ ಏರುಪೇರು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮನೋರೋಗ ತಜ್ಞ ಡಾ. ಶ್ರೀಮತಿ ಲೀಲಾ ಪಿ. ಹೇಳಿದರು. ಇಲ್ಲಿನ ಶಿವಾಜಿ ನಗರದ "ಇಡಾರಿ" ಸ್ವಯಂ ಸೇವಾ ಸಂಸ್ಥೆಯ, ಶಕ್ತಿ ಸದನ ದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮೋದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಹಾಗೂ ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯು, ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿಗಳಿಗೆ ಆಯೋಜಿಸಿದ್ದ 2 ದಿವಸದ  "ಮಾನಸಿಕ ಆರೋಗ್ಯ" ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.    ಇಂದಿನ ದಿನಮಾನಗಳಲ್ಲಿ ಯಾಂತ್ರಿಕ ಬದುಕಿನಲ್ಲಿ ಸಾಗುತ್ತಿದ್ದೇವೆ.

ಕೌಟುಂಬಿಕ ಸಮಸ್ಯೆಗಳೇ ಬಹುತೇಕವಾಗಿ ಮಾನಸಿಕ ಖಿನ್ನತೆಗೆ ಕಾರಣವಾಗುತ್ತಲ್ಲಿದೆ ಎನ್ನುವುದು ವಾಸ್ತವಿಕ ಸಂಗತಿ ಎಂದರು.      ಪ್ರತಿಯೊಬ್ಬರಲ್ಲಿ ಒಂದಿಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳಿವೆ. ಜೊತೆಗೆ ಸತ್ವಯುತ, ಸಮತೋಲಿತ  ಆಹಾರದ ಕೊರತೆ ಮತ್ತು ಅತಿಯಾದ ಚಿಂತೆಯು ಸಹ ಇದಕ್ಕೆ ಕಾರಣವಿದೆ ಅದಕ್ಕಾಗಿ ಮಾನಸಿಕ ವೇದನೆಯಿಂದ ಬಳಲುವವರಿಗೆ ಸೂಕ್ಷ್ಮ ಮತ್ತು ಸಾಂತ್ವನದ ಮಾತುಗಳು ಇಂದಿನ ಅಗತ್ಯ ಮತ್ತು ಅವಶ್ಯವಿದೆ ಎಂದರು.     ಫೆವಾರ್ಡ್‌ ಕೆ. ಜಿಲ್ಲಾಧ್ಯಕ್ಷ ಏಕಾಂತ್ ಮುದಿಗೌಡರ ಅವರು ಮಾತನಾಡಿ, ಇತಿಹಾಸದಲ್ಲಿ ಮಾಟ, ಮಂತ್ರ, ಮೂಡ ನಂಬಿಕೆ ಬಲವಾಗಿತ್ತು. ಮೂಢನಂಬಿಕೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಇಂದು 21ನೇ ಶತಮಾನಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ಅನೇಕ ರೀತಿಯ ವೈಚಾರಿಕ ಮತ್ತು ವೈಜ್ಞಾನಿಕ ಉಪಚಾರಗಳು ದೊರೆಯುತ್ತಲ್ಲಿವೆ, ಮನೋರೋಗಕ್ಕೆ ಮದ್ದುಂಟು ಎನ್ನುವ ಮಾತು ಸತ್ಯವಿದೆ ಎಂದರು.     ಮುಖ್ಯ ಅತಿಥಿಯಾಗಿದ್ದ ಫೆವಾರ್ಡ್‌ ಕೆ. ರಾಜ್ಯ ಸದಸ್ಯ,ಎಚ್‌.ಎಫ್‌. ಅಕ್ಕಿ, ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟವು ಅಂದಿನ ಹಿರಿಯರಾದ ಎಸ್‌.ಆರ್‌. ಹಿರೇಮಠ ಆರಂಭಿಸಿದ ಸಂಸ್ಥೆ.  

ಇಂದು ರಾಜ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಲಿದೆ. ಸ್ವಯಂ ಸೇವಾ ಸಂಸ್ಥೆಗಳ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಒಕ್ಕೂಟವು ಸರ್ಕಾರದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಲಿದೆ. ಪ್ರತಿಯೊಬ್ಬರು ಸದಸ್ಯತ್ವವನ್ನು ಪಡೆದು  ಸಮುದಾಯದ ಯೋಜನೆಗಳ ಕುರಿತು ಚಿಂತನೆ ನಡೆಸಿ, ಸಂಸ್ಥೆಗಳು ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂದರು.     ಇನ್ನೋರ್ವ ಅತಿಥಿ, ಸಾಹಿತಿ ಸತೀಶ್ ಕುಲಕರ್ಣಿ ಅವರು ಸಮಾಜದಲ್ಲಿ, ಇಂದು ಅನೇಕ ಸಮಸ್ಯೆಗಳಿಂದ ಬಳಲುವರು ಇದ್ದಾರೆ. ಅಂಥವರಿಗೆ ಕಾನೂನು ಬದ್ಧವಾಗಿ  ಎಲ್ಲ ರೀತಿಯ ಸಹಾಯ,ಸಹಕಾರ ದೊರಕಿಸುವ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು, ಸಿಬ್ಬಂದಿಗಳು ಮುಂದಾಗಿ, ತಮ್ಮ ಸೇವೆ ಸಲ್ಲಿಸಲು ಮುಂದಾಗಬೇಕು  ಎಂದು ಕರೆ ನೀಡಿದರು.     

ಬೆಂಗಳೂರಿನ ನಿಮಾನ್ಸ್‌ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಡಾ.ಶಿವಾನಂದ ಏರಿಮನಿ ಅವರು, ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿಗಳಿಗೆ ಯಶಸ್ವಿ ತರಬೇತಿ ನಡೆಸಿ, ಕಾರ್ಯಕರ್ತರ ಮತ್ತು ಸಿಬ್ಬಂದಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದರು. ಫೆವಾರ್ಡ್‌ ಕೆ.ಜಿಲ್ಲಾ ಘಟಕದ  ಮಾಜಿ ಕಾರ್ಯದರ್ಶಿ ಎಚ್‌. ಎಸ್‌. ಮಜೀದ್, ಉಪಾಧ್ಯಕ್ಷ ಕೆ.ಎಸ್‌. ನಾಗರಾಜ, ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ನೂರಾರು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಶ್ರೀಮತಿ ಪಾರ್ವತಿ ಲಮಾಣಿ ಪ್ರಾರ್ಥಿಸಿದರು. ಶ್ರೀಮತಿ ಸುಶೀಲಾ ಪಾಟೀಲ, ಸ್ವಾಗತಿಸಿ,.ಜಿಲ್ಲಾ ಕಾರ್ಯದರ್ಶಿ ಎಂ.ಎನ್‌. ಸಣ್ಣಿಠಣ್ಣನವರ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಟ್ಟಪ್ಪ ಹರಿವಿ ನಿರೂಪಿಸಿ," ಇಡಾರಿ " ಸಂಸ್ಥೆಯ ಅಧ್ಯಕ್ಷ ಶ್ರೀಮತಿ ಪರಿಮಳಾ ಜೈನ್, ವಂದಿಸಿದರು.