ಬೆಂಗಳೂರು,ನ 09 : ಸುಪ್ರೀಂ ಕೋರ್ಟ್ ತೀರ್ಪನ್ನ ಎಲ್ಲರೂ ಗೌರವಿ ಸಬೇಕು. ಸಮಾಜದಲ್ಲಿ ಎಲ್ಲರೂ ಶಾಂತಿಯನ್ನ ಕಾಪಾಡಬೇಕು ಮಾಜಿ ಸಚಿವ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಅಯೋ ಧ್ಯೆ ತೀಪು ವಿಚಾರ ಆ ಬಗ್ಗೆ ನಾನೀಗ ಮಾತಾಡಲ್ಲ.ಕೆಪಿಸಿಸಿ ಕಚೇರಿಯಲ್ಲಿ ತುರ್ತು ಸಭೆ ಇದೆ.ಸಭೆಗೆ ಹೋಗುತ್ತಿದ್ದೇನೆ.ಆದರೆ ಎಲ್ಲ ಜನರು ಶಾಂತಿ, ಸೌಹಾರ್ಧತೆಯನ್ನ ಕಾಪಾಡಿಕೊಳ್ಳಬೇಕು ಎಂದು ಕರೆಕೊಟ್ಟರು. ಅಯೋಧ್ಯೆ ವಿವಾದಿತ ಭೂಮಿ ಬಗ್ಗೆ ಸುಪ್ರೀಂ ತೀಪು ಬಂದಿದೆ.ಕೆಪಿಸಿಸಿ ಸಭೆಯ ಬಳಿಕ ಸಭೆಯಲ್ಲಿ ಚರ್ಚಿಸಿ ನಂತರ ಮಾತನಾಡ್ತೇನೆ.ಎಲ್ಲರಿಗೂ ನಾನು ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡ್ತೇನೆ ಎಂದರು.