ಬ್ಯಾಂಕಿನ ಏಳ್ಗೆಗೆ ಪ್ರತಿಯೊಬ್ಬರು ಸಹಕರಿಸಬೇಕು: ಕಸಬೇಗೌಡರ
Everyone should cooperate for the development of the bank: Kasabe Gowda
ವಿಜಯಪುರ 06: ಶ್ರೀ ಸಿದ್ಧೇಶ್ವರ ಕೊ. ಆಫ್. ಬ್ಯಾಂಕಿನ ಚುನಾವಣೆಯಲ್ಲಿ ಗೆಲವು ಸಾಧಿಸಿದ ಹಾಲಿ ಆಡಳಿತ ಮಂಡಳಿಯ ಹಾಗೂ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಉಪಾಧ್ಯಕ್ಷರಿ ಹಾಗೂ ನಿರ್ದೇಶಕ ಮಂಡಳಿಯವರಿಗೆ ಶ್ರೀ ಸಿದ್ಧೇಶ್ವರ ಬ್ಯಾಂಕಿನ ಫಿಗ್ಮಿ ಸಂಗ್ರಹಕಾರ ಅಧ್ಯಕ್ಷರಾದ ವಿರೇಶ ಎಸ್. ಕಸಬೇಗೌಡರು ಹಾಗೂ ಉಳಿದ ಎಲ್ಲಾ ಶಾಖೆಯ ಫಿಗ್ಮಿ ಸಂಗ್ರಹಕಾರರು ಕೂಡಿಕೊಂಡು ಹಾಲಿ ಆಡಳಿತ ಮಂಡಳಿಗೆ ಸನ್ಮಾನಿಸಿ ಗೌರವಿಸಿ ಸಿಹಿ ವಿತರಿಸಿ ಸಂಭ್ರಮ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪಿಗ್ಮಿ ಸಂಗ್ರಾಹಕರ ಸಂಘದ ಅಧ್ಯಕ್ಷರಾದ ವಿರೇಶ ಕಸಬೇಗೌಡರ ಮಾತನಾಡಿ, ಪಿಗ್ಮಿ ಸಂಗ್ರಹಾಕರಿಗೆ ಪ್ರೋತ್ಸಾಹ ಕೊಡಿ ಅವರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ದೇಶಕ ಮಂಡಳಿ ಮುಂದಾಗಬೇಕು. ಬ್ಯಾಂಕಿನ ಏಳ್ಗೆಗೆ ಮುಖ್ಯ ಕಾರಣೀಕರ್ತರು ಪಿಗ್ಮಿ ಸಂಗ್ರಹಕಾರರಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಬ್ಯಾಂಕಿನ ಏಳ್ಗೆಗೆ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ನಿದೇಶಕರಾದ ಗುರು ಗಚ್ಚಿನಮಠ, ವೈಜನಾಥ ಕರ್ೂರಮಠ, ಶ್ರೀ ಹರೀಶಗೌಡ ಎಸ್. ಪಾಟೀಲ, ರಮೇಶ ಬಿದನೂರ, ವಿಶ್ವನಾಥ ಮಸಬಿನಾಳ, ಗಚ್ಚಿನಕಟ್ಟಿ, ಡಾ. ಸಂಜು ಮುಳವಾಡ, ಆರ್.ಎಂ. ಪಾಟೀಲ ಸೇರಿದಂತೆ ಪಿಗ್ಮಿ ಸಂಗ್ರಹಾಕಾರರಾದ ಬಸವರಾಜ ಬ್ಯಾಳಿ, ಬಸವರಾಜ ಯಾಳವಾರ, ಎ.ಬಿ.ಮಹೇಂದ್ರಕರ, ಎನ್.ಎಂ. ಮೋಟಗಿ, ಪಿ.ಬಿ.ಕೊಪ್ಪದ, ಅಡಕಿ, ಕೊಂಡಗೂಳಿ, ಪಿ.ಎಸ್.ದೇವರ, ನೀಲಕಠಂ ಪೂಜಾರಿ ಸೇರಿದಂತೆ ಬ್ಯಾಂಕಿನ ಎಲ್ಲ ನಿರ್ದೇಶಕ ಮಂಡಳಿಯವರು ಉಪಸ್ಥಿತರಿದರು.
ರೇವಪ್ಪ ಆರ್. ಕೋಳೂರ ನಿರೂಪಿಸಿ, ವಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 