ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಪಾಡುವಲ್ಲಿ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು

ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಪಾಡುವಲ್ಲಿ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು Everyone should be committed to protecting the environment by planting and nurturing trees.

ರಾಣಿಬೆನ್ನೂರು: 27 ಮನುಷ್ಯನ ಅತಿಯಾಸೆಯಿಂದ ಪರಿಸರ ನಾಶವಾಗುತ್ತಿದ್ದು, ಇದು ಹೀಗೆಯೇ ಮುಂದು ವರೆದರೆ ಮನುಷ್ಯನ ಸಂಕುಲ ಸರ್ವ ನಾಶವಾಗುವುದರಿಂದ ಯಾವುದೇ ಅನುಮಾನವಿಲ್ಲ. ಆದ್ದರಿಂದ ಪ್ರತಿಯೊಬ್ಬ ಪ್ರಜೆಯು ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಪಾಡುವಲ್ಲಿ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು ಎಂದು ರಾ.ತಾ.ಶಿ. ಸಂಸ್ಥೆ ಅಧ್ಯಕ್ಷ ಡಾಽ ಸಂಜಯ್ ಸಾವುಕಾರ ಹೇಳಿದರು.  

ನಗರದ ಆರ್‌.ಟಿ.ಇ.ಎಸ್ ಮಹಾವಿದ್ಯಾಲಯದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ವಿದ್ಯಾಲಯದ ಆವರಣದಲ್ಲಿ  ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಆರೋಗ್ಯ, ನೆಮ್ಮದಿ, ಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ದೈಹಿಕ ಕಸರತ್ತಿಯಿಂದ ದೂರವಿದ್ದು ಹೃದಯಘಾತ, ಅತಿಯಾದ ಬೊಜ್ಜು, ಮಧುಮೇಹದಂತಹ ಗಂಭೀರ ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಒತ್ತಡದ ಜೀವನದ ನಡುವೆ ಕೆಲ ಸಮಯ ಪ್ರಕೃತಿ, ಗಿಡಮರಗಳನ್ನು ಬೆಳೆಸುವ ಹವ್ಯಾಸವನ್ನು ಬೆಳೆಸಿಕೊಂಡಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.  

ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ ಸುಮಾರು 100ಕ್ಕೂ ಅಧಿಕ  ಸಸಿಗಳನ್ನು ನೆಡಲಾಯಿತು. ಎನ್ ಎಸ್ ಎಸ್ ಕಾರ್ಯಕ್ರಮಧಿಕಾರಿ  ಸರಸ್ವತಿ ಬಮ್ಮನಾಳ, ಮಧುಕುಮಾರ ಆರ್, ಬಿ.ಕೆ.ಕಾಟೇನಹಳ್ಳಿ, ಜಿ.ಸಿ.ನಿಡಗುಂದಿ, ಡಾಽಮನೋಜಕುಮಾರ ಸವಣೂರು,  ಬಾಬಾ ಸಾಹೇಬ ಜಂಗ್ಳಪ್ಪನವರ, ಎಸ್ ಪಾಟೀಲ, ಪ್ರಸನ್ನಗೌಡ ಪಾಟೀಲ, ಡಾಽಜ್ಯೋತಿ ಜಂಬಗಿ ಸೇರಿದಂತೆ ಮತ್ತಿತರರು ಇದ್ದರು.