‘ಡಾ. ಅಂಬೇಡ್ಕರರ ತತ್ವಾರ್ದಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ’
Everyone should adopt the principles of ‘Dr.Ambedkar’
ಲೋಕದರ್ಶನ ವರದಿ
ಬೆಟಗೇರಿ 14: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವಾರ್ದಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಶಿಕ್ಷಣ ಹೋರಾಟ ಸಮಿತಿ ಅಧ್ಯಕ್ಷ ಚಿದಾನಂದ ತಳವಾರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಶಿಕ್ಷಣ ಹೋರಾಟ ಸಮಿತಿ ಸಹಯೋಗದಲ್ಲಿ ಬುಧವಾರ ಏ.14ರಂದು ಸ್ಥಳೀಯ ಅಂಬೇಡ್ಕರ ವೃತ್ತದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ ಅವರು ಭಾರತ ದೇಶಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ ಮಹಾ ಮಾನವತಾವಾದಿಯಾಗಿದ್ದಾರೆ ಎಂದರು.
ಸ್ಥಳೀಯ ವೇದಮೂರ್ತಿ ಸಂಗಯ್ಯ ಹಿರೇಮಠ ಕಾರ್ಯಕ್ರಮದ ಸಾನಿಧ್ಯ ವಹಿಸಿ ಡಾ.ಬಿ ಆರ್ ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚಣೆ ನೆರವೇರಿಸಿದ ಬಳಿಕ ಸಿಹಿ ವಿತರಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಸುಭಾಷ ಕರೆಣ್ಣವರ, ಪ್ರಕಾಶ ಹಾಲಣ್ಣವರ, ರವಿ ದಾನವ್ವಗೋಳ, ಮೆಳೆಪ್ಪ ಹರಿಜನ, ಪಂಡಿತ ಸಣ್ಣಕ್ಕಿ, ಅಶೋಕ ಹರಿಜನ, ಉಮೇಶ ಹರಿಜನ, ಶಿವಾನಂದ ಹರಿಜನ, ಶ್ರೀಶೈಲ ತಳವಾರ, ಗುರವ್ವ ಕಟ್ಟಿಮನಿ,ಮಾರುತಿ ಪೋಳ, ಚಾಯಪ್ಪ ಗಜಾಕೋಶ, ಮಾರುತಿ ಹರಿಜನ, ಸುರೇಶ ತಳವಾರ, ರಮೇಶ ದಾನವ್ವಗೋಳ, ಶಿವನಪ್ಪ ಮಾಳೇದ, ಕಲ್ಲಪ್ಪ ಮುಧೋಳ, ಡಾ.ಬಿ.ಆರ್.ಅಂಬೇಡ್ಕರ ಶಿಕ್ಷಣ ಹೋರಾಟ ಸಮಿತಿ ಸದಸ್ಯರು, ಗ್ರಾಮಸ್ಥರು ಇದ್ದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 