ಲೋಕದರ್ಶನ ವರದಿ
ಬಳ್ಳಾರಿ17: ದೇಶದ ಸಂವಿಧಾನದ ಬಗ್ಗೆ ಪ್ರತಿಯೊಬ್ಬ ನಾಗರಿಕರೂ ಅರಿವು ಹೊಂದಬೇಕು. ಸಂವಿಧಾನದಲ್ಲಿ ಇರುವ ಮೂಲಭೂತ ಹಕ್ಕುಗಳು, ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಭಾವಿ ಐಎಎಸ್ (ತರಬೇತಿ) ಅಧಿಕಾರಿ ಕೀತರ್ಿಕಿರಣ್ ಪೂಜಾರ್ ಅವರು ಅಭಿಪ್ರಾಯಪಟ್ಟರು. ಅವರು ಸ್ಥಳೀಯ ಬಾಲಕಿಯರ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರದಂದು ಸಂಜೆ ಬಳ್ಳಾರಿಯ ಗಾಯತ್ರಿ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕಮಲಾಪುರ ಹೋಬಳಿ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಡಾ.ಕಿಚಡಿ ಚನ್ನಪ್ಪ ಅವರ ಅಮೆರಿಕ ಸಂವಿಧಾನ (ಕನ್ನಡ) ಮತ್ತು ದಿ ಕಾನ್ಸಿಟಿಟ್ಯೂಷನ್ ಆಫ್ ಅಮೆರಿಕ( ಆಂಗ್ಲ) ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಡಾ.ಕಿಚಡಿ ಚನ್ನಪ್ಪ ಅವರು ರಚಿಸಿರುವ ಕೃತಿಗಳು ಅಮೆರಿಕಾ ದೇಶದ ಸಂವಿಧಾನಗಳಿಗ ಸಂಬಂಧಿಸಿದವುಗಳಾಗಿದ್ದು, ಈ ಸಂವಿಧಾನವು ವಿಶ್ವದಲ್ಲಿ ಮೊಟ್ಟಮೊದಲನೆಯ ಲಿಖಿತ ಸಂವಿಧಾನವಾಗಿದೆ. ಆದ್ದರಿಂದ ಇದು ಇಡೀ ವಿಶ್ವಕ್ಕೆ ಒಂದು ಮಾದರಿ ಸಂವಿಧಾನವಾಗಿ ಪರಿಣಮಿಸಿದೆ. ಆದರೆ ನಮ್ಮ ಭಾರತ ದೇಶದ ಸಂವಿಧಾನಕ್ಕೆ 67 ವರ್ಷಗಳು ಸಂದಿವೆ. ಆದರೆ ಅಮೆರಿಕಾ ಸಂವಿಧಾನವು 200 ವರ್ಷಗಳ ಹಳೆಯದು. ಸಂವಿಧಾನದ ಬಗ್ಗೆ ಐಎಎಸ್ ಪರೀಕ್ಷೆಗಳಲ್ಲಿ ಪ್ರಶ್ನೆಗಳು ಇದ್ದೇ ಇರುತ್ತವೆ. ಜ್ಞಾನಾರ್ಜನೆಯ ದೃಷ್ಟಿಯಿಂದ ವಿಶ್ವದ ಎಲ್ಲ ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಬೇಕು. ಹಾಗೆಯೇ ಭಾರತದ ಸಂವಿಧಾನದ ಪ್ರತಿಯೊಬ್ಬ ಪ್ರಜೆಯು ಓದಿ ಅಥರ್ೈಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿಂಧನೂರು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಹನುಮಂತಪ್ಪ ಎಂ. ಇವರು ಪುಸ್ತಕಗಳ ಕುರಿತು ಮಾತನಾಡಿ, ಅಮೆರಿಕ ದೇಶದ ಸಂವಿಧಾನದಂತೆ ಅಲ್ಲಿನ ಜನತೆ ಪೂರಕವಾಗಿ ನಡೆದುಕೊಳ್ಳುತ್ತಿದ್ದಾರೆ. ಆದರೆ ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೂ ಮತ್ತು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೂ ತುಂಬಾ ವ್ಯತ್ಯಾಸವಿದೆ. ಅಲ್ಲಿನ ರಾಷ್ಟ್ರಧ್ಯಕ್ಷರು ನೇರವಾಗಿ ಜನರಿಂದ ಆಯ್ಕೆಗೊಂಡು ಅವರು ಸವರ್ೋಚ್ಛ ಅಧಿಕಾರವನ್ನು ಚಲಾಯಿಸುತ್ತಾರೆ. ಆದರೆ ಭಾರತದಲ್ಲಿ ನಾಮಮಾತ್ರ ಕಾರ್ಯವನ್ನು ರಾಷ್ಟ್ರಪತಿಗಳು ಚಲಾಯಿಸುತ್ತಾರೆ ಎಂದರಲ್ಲದೆ, ಅಮೆರಿಕಾದಲ್ಲಿ ಶೇ.99ರಷ್ಟು ಜನರು ಅಕ್ಷರಸ್ಥರಾಗಿದ್ದಾರೆ. ಅದು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿದೆ. ನಮ್ಮ ದೇಶದಲ್ಲಿ ನಾವು ಎಂತಹ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಪ್ರಜೆಗಳು ತಡಕಾಡುವಂತಾಗಿದೆ. ಜೊತೆಗೆ ಎಡ-ಬಲ ಪಂಥೀಯ ಗುಂಪುಗಳು ನಮ್ಮಲ್ಲಿದ್ದು, ಇಲ್ಲಿಯವರೇ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು ಅಥವಾ ಸುಟ್ಟು ಹಾಕಬೇಕೆಂಬ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದರು. ಇದಕ್ಕೆ ಜನತೆ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಸಂವಿಧಾನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲವೆನ್ನುವ ಹಾಗೆ ನಿಲರ್ಿಪ್ತ ಭಾವನೆಯಿಂದ ಎಂದು ವಿಷಾದ ವ್ಯಕ್ತಪಡಿಸಿದರು. ಭಾರತದಲ್ಲಿ ಪ್ರತಿಯೊಬ್ಬರು ಸಂವಿಧಾನವನ್ನು ಓದುವಂತಾಗಬೇಕು. ಆಗ ಮಾತ್ರ ಸಂವಿಧಾನದ ಬಗ್ಗೆ ಅರಿವು ಹೊಂದಲು ಸಾಧ್ಯ. ಆದ್ದರಿಂದ ವಿದ್ಯಾಥರ್ಿ ಸಮೂಹ ಅಮೆರಿಕಾ ಸಂವಿಧಾನವನ್ನು ವ್ಯಾಸಂಗ ಮಾಡುವ ದೃಷ್ಟಿಯಿಂದ ಉತ್ತಮವಾಗಿ ತಿಳಿದುಕೊಳ್ಳಲು ಅತ್ಯಂತ ಸರಳವಾದ ಭಾಷೆಯಲ್ಲಿ ಲೇಖಕರು ರಚಿಸಿದ್ದಾರೆ. ಇದೊಂದು ಆಕರ ಗ್ರಂಥವಾಗಲಿದೆ ಎಂದು ಹೇಳಿದರು. ವೇದಿಕೆಯ ಮೇಲಿದ್ದ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಜಂಬಯ್ಯ ನಾಯಕ ಅವರು ಮಾತನಾಡಿ, ಅಮೆರಿಕ ದೇಶವು ವಿಶ್ವದಲ್ಲಿ ಹಿರಿಯ ರಾಷ್ಟ್ರವಾಗಿದೆ. ಅದನ್ನು ಹಿರಿಯಣ್ಣ ಎಂದು ಕರೆಯಲಾಗುತ್ತಿದೆ. ಆದರೆ ಆ ದೇಶವು ದುರ್ಬಲ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುವುದು. ಯುದ್ಧ ಮಾಡುವುದು. ಆಥರ್ಿಕ ವಲಯದ ಮೇಲೆ ತನ್ನ ಹಿಡಿತವನ್ನು ಸಾಧಿಸಲು ಹೆಣಗುತ್ತಿದೆ. ಇಂತಹ ದೇಶದಲ್ಲಿ ಸಂವಿಧಾನವು ಹೇಗೆ ತನ್ನ ಕೆಲಸ ಮಾಡುತ್ತಿದೆ. ಅದರ ಸಾಧಕ ಬಾಧಕಗಳೇನು ಎಂಬುದನ್ನು ಅತ್ಯಂತ ಸ್ಥೂಲವಾಗಿ ಲೇಖಕ ಚನ್ನಪ್ಪನವರು ಚಿತ್ರಸಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ.ಕಡ್ಲಬಾಳ ಪನ್ನಂಗಧರ ಅವರು ಮಾತನಾಡಿ, ಸ್ವಾತಂತ್ರ್ಯೋತ್ಸವದ ದಿನದಂದು ಪುಸ್ತಕ ಲೋಕಾರ್ಪಣೆಯ ಕಾರ್ಯವನ್ನು ಹಮ್ಮಿಕೊಂಡಿರುವುದು ಸಂತಸ ಸಂಗತಿ. ಇಂದು ಜನರಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸಬೇಕಾಗಿದೆ. ವಾಸ್ತವದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಪುಸ್ತಕವನ್ನು ಬಿಡುಗಡೆ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇಲ್ಲಿ ಲೇಖಕರು ಒಬ್ಬರೇ ಪುಸ್ತಕ ರಚನೆಗೆ ಕಾರಣರಲ್ಲ. ಅವರ ಹಿಂದೆ ಅವರ ತಂದೆ-ತಾಯಿ- ಕುಟುಂಬದವರ ಕೊಡುಗೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಸಿದ್ರಾಮ, ಹೊಸಪೇಟೆಯ ಭಾರತೀಯ ಜೀವ ವಿಮಾ ನಿಗಮದ ವ್ಯವಸ್ಥಾಪಕ ನಾಣಿಕೇರಿ ಯಂಕಪ್ಪ, ಗಾಯತ್ರಿ ಪ್ರಕಾಶನದ ಮಾಲೀಕರಾದ ಡಾ.ಕೆ.ಬಸಪ್ಪ ಉಪಸ್ಥಿತರಿದ್ದರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಆರಂಭದಲ್ಲಿ ಉಪನ್ಯಾಸಕ ನಾಗರಾಜ್ ಪತ್ತಾರ್ ಅವರು ಪ್ರಾಥರ್ಿಸಿದರು. ಲೇಖಕ ಡಾ.ಕಿಚಡಿ ಚನ್ನಪ್ಪ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಪ್ರಭು ಅವರು ನಿರೂಪಿಸಿದರು. ಕಸಪಾ ಕಮಲಾಪುರ ಹೋಬಳಿ ಘಟಕದ ಅಧ್ಯಕ್ಷ ಡಾ.ದಯಾನಂದ ಕಿನ್ನಾಳ್ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದರು. ಇದೇ ವೇಳೆ ಡಾ.ಕಿಚಡಿ ಚನ್ನಪ್ಪ ಮತ್ತು ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.