ದೇಶದ ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರನ್ನು ಸದುಪಯೋಗ ಮಾಡಿಕೊಳ್ಳಿ: ಐಹೊಳೆ
Everyone in the country should make good use of clean drinking water: Aihole
ರಾಯಬಾಗ 28: ದೇಶದ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸು ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ ಮೀಷನ ಯೋಜನೆ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ರಾಯಬಾಗ ಗ್ರಾಮೀಣ ಭಾಗದ ಆನೆಬಾಯಿಕೋಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಜೆಜೆಎಮ್ ಯೋಜನೆಯಡಿ ಮಂಜೂರಾದ 2 ಕೋಟಿ 54 ಲಕ್ಷ ರೂ. ಅನುದಾನದಲ್ಲಿ 966 ಮನೆಗಳಿಗೆ ನಳ ಸಂಪರ್ಕ, 5 ಮೇಲ್ಮಟ್ಟದ ಜಲಸಂಗ್ರಾಲಯ ಕಾಮಗಾರಿ ಹಾಗೂ ಭಿರಡಿ ಗ್ರಾಮದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಮಂಜೂರಾದ 25 ಲಕ್ಷ ರೂ. ಅನುದಾನದಲ್ಲಿ ಪ.ಜಾತಿ ಕಾಲೋನಿಯ ಭಿರಡಿ-ಜಲಾಲಪೂರ ರಸ್ತೆಯಿಂದ ರಾಜು ಮೈಶಾಳೆ ತೋಟದ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಪ್ರಮುಖವಾಗಿ ನೀರಿನ ಸೌಕರ‌್ಯ ಮತ್ತು ರಸ್ತೆಗಳನ್ನು ಸುಧಾರಿಸುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಎಇಇ ಸುಭಾಷ ಭಜಂತ್ರಿ, ಜೆಇ ಲೋಹಿತ ಕಾಂಬಳೆ, ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಮಹಾದೇವ ಬೊರಗಾಂವೆ, ಶ್ರೀಧರ ಕುಡಚೆ, ಬಾದಶಾ ಡಾಂಗೆ, ಮಜ್ಜಿದ ಡಾಂಗೆ, ವಸಂತ ಕಾಂಬಳೆ, ಸಿದ್ದಪ್ಪ ಪುಜೇರಿ, ನಿಂಗಪ್ಪ ಪೂಜೇರಿ, ಮುರಗೇಂದ್ರ ನಿಶಾನಂದಾರ, ಕೇಶವ ಹವಾಲ್ದಾರ, ಸುಹಾಸ ಪುಜೇರಿ, ವಸಂತ ನಿಶಾನದಾರ, ಶಂಕರ ಗಂಗನ್ನವರ, ಸುರೇಶ ದೇವಋಷಿ, ಮಧುಕರ ಕಾಂಬಳೆ, ಕೆಂಪಣ್ಣ ಮೈಶಾಳೆ, ಶಂಕರ ನಿಡವಣಿ, ಸದಾಶಿವ ನಿಡವಣಿ, ಗೋಪಾಲ ಕೋಚೆರಿ, ಗೋಪಾಲ ನಿಡಗುಂದಿ, ರಂಜಾನ ಮಕಾಂದಾರ, ಬಸಪ್ಪ ಖಿಲಾರೆ, ಅಝಾದ ಡಾಂಗೆ, ರಮೇಶ ಕಾಂಬಳೆ ಸೇರಿದಂತೆ ಅನೇಕರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 