ಸಮಾನತೆಗಾಗಿ ಸಮಾಜದ ಎಲ್ಲರೂ ಸಂಘಟಿತರಾಗಬೇಕು- ಪ್ರಕಾಶಾನಂದಜೀ

ಸಮಾನತೆಗಾಗಿ  ಸಮಾಜದ ಎಲ್ಲರೂ ಸಂಘಟಿತರಾಗಬೇಕು- ಪ್ರಕಾಶಾನಂದಜೀ Everyone in society should organize for equality - Prakashanandji

            ರಾಣೇಬೆನ್ನೂರು: 28 ಇಂದಿನ  ಕಲಿಯುಗದಲ್ಲಿ ಸಂಘಟನೆ ಬಹಳ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಮಾಜದ ಗಣ್ಯರು ಒಗ್ಗಟ್ಟಾಗಿ ಒಂದಾಗಿ, ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದಾಗ ಮಾತ್ರ ಸಮಾಜವು ಭದ್ರತೆಯಾಗುವುದರ ಜೊತೆಗೆ ಮಕ್ಕಳು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು  ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಕಾಶಾನಂದಜೀ ಮಹಾರಾಜ್ ನುಡಿದರು. ಅವರು, ಗುರುವಾರ ನಗರದ  ನೀಲಕಂಠೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜಿಲ್ಲಾ ದೇವಾಂಗ ಸಂಘದ ಎಸ್ ಎಸ್‌.ಎಲ್‌. ಸಿ, ಪಿಯುಸಿ ಮಕ್ಕಳ ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ವಯೋವೃದ್ಧರ,ನಿವೃತ  ನೌಕರರ ಗೌರವ, ಸಾಧಕ ಗಣ್ಯರ ಅಭಿನಂದನಾ  ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

           ಭಾರತ ಪುಣ್ಯಭೂಮಿ ವಿವಿಧತೆಯಲ್ಲಿ ಏಕತೆ ಕಾಣುವುದೇ ಬಹುದೊಡ್ಡ ಸಂಸ್ಕೃತಿಯಾಗಿದೆ. ಸಮಾಜದ ಮಕ್ಕಳು ಶಿಕ್ಷಣದ ಜೊತೆಗೆ ತಮ್ಮಲ್ಲಿರುವ ನೈಜ ಪ್ರತಿಭೆ ಮತ್ತು ಜಾಣ್ಮೆ ಪ್ರದರ್ಶಿಸಿ ಹಡೆದ ತಂದೆ ತಾಯಿಗಳಿಗೆ ಮತ್ತು ಪಾಲಕರಿಗೆ ಸಮಾಜಕ್ಕೆ ಗೌರವ ತರುವ ಕೆಲಸ ಮಾಡಿದಾಗ ಮಾತ್ರ ಸಂತೃಪ್ತಿಯ ಜೀವನ ಸಾಗಿಸಲು ಸಾಧ್ಯವಾಗುವುದು ಎಂದರು.   ರಾಜ್ಯಾಧ್ಯಕ್ಷ ರವೀಂದ್ರ ಕಲ್ಬುರ್ಗಿ ಅವರು ಸಮಾರಂಭ ಉದ್ಘಾಟಿಸಿ ಚಾಲನೆ ನೀಡಿದರು. ಜಿಲ್ಲಾಧ್ಯಕ್ಷ ಬಸವರಾಜ ಮೈಲಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನೂತನವಾಗಿ ಸೇರೆ​‍್ಡಗೊಂಡ  ನೂತನ ಸರಕಾರಿ ನೌಕರರಿಗೆ ಸಂಘಕ್ಕೆ ಸ್ವಾಗತಿಸಿ, ಅಭಿನಂದಿಸಿ ಗೌರವಿಸಲಾಯಿತು.  

           ಮುಖ್ಯ ಅತಿಥಿಗಳಾಗಿ  ಪಾಲ್ಗೊಂಡಿದ್ದ, ಮಾಜಿ ಶಾಸಕ  ಅರುಣಕುಮಾರ್ ಪೂಜಾರ ಅವರು ಸಮಾಜ ಮತ್ತು ಸಮಾನತೆ ಇವುಗಳ ಕಡೆ ಇಂದು ಗಮನಹರಿಸಬೇಕಾಗಿದೆ. ಸಂಘಟನೆ ಇದ್ದರೆ ಸಮಾಜಕ್ಕೆ ತುಂಬಾ ಬೆಲೆ ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಸಮಾಜದ ಅಭಿವೃದ್ಧಿಗೆ ಗಮನಹರಿಸಬೇಕು ಎಂದು  ಕರೆ ನೀಡಿದರು. ತಾಲೂಕ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ರಾಜೇಶ್, ಗೌರವಾಧ್ಯಕ್ಷ ಸಂಕಪ್ಪ ಮಾರನಾಳ, ಶಿಗ್ಗಾವಿ ಅಧ್ಯಕ್ಷ ವೀರ​‍್ಪ ಗಾಯದ, ಹಾವೇರಿ ಅಧ್ಯಕ್ಷ ಚಿದಂಬರ ಕುದರಿ, ಮುಖಂಡರಾದ ಗಣೇಶ ಹಾವನೂರ, ಮನೋಹರ ಡವಳಿಗಿ, ಸುರೇಶ ಮಾರನಾಳ ಗಣೇಶ ಸಾಲಗೇರಿ, ಡಾ. ಚಂದ್ರಶೇಖರ ಕೇಲಗಾರ, ಲಕ್ಷ್ಮಿಕಾಂತ ಹುಲಗೂರು, ಗಣೇಶ ಶಿರಗೂರ, ಶಾರದಾ ಆನ್ವೇರಿ, ಮಮತಾ ಹುಣಸಿಮರದ, ಉಮಾ ಅಗಡಿ, ವಿಜಯಲಕ್ಷ್ಮಿ ಬೆಟಗೇರಿ, ಜಯಮ್ಮ ಕುಂಚೂರ, ಸೇರಿದಂತೆ ಸಮಾಜದ ಗಣ್ಯರು, ಯುವಕರು, ದೇವಾಂಗ ಸಂಘ,ಮಹಿಳಾ  ಸಂಘ, ಯುವಕ ಸಂಘದ ಕಾರ್ಯಕಾರಿ ಸಮಿತಿ, ಸದಸ್ಯರು ನಿವೃತ ನೌಕರರು ಸಂಘದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.