ಪ್ರತಿಯೋಬ್ಬ ಮಹಿಳೆಯಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ ಅದನ್ನ ಗುರುತಿಸುವ ಕಾರ್ಯ ಮಾಡಬೇಕು
Every woman has a talent, and we should work to recognize it.
ಶಿಗ್ಗಾವಿ 16 : ಮಹಿಳೆಯು ಬದುಕಿನ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು ಪ್ರತಿಯೋಬ್ಬ ಮಹಿಳೆಯಲ್ಲಿ ಒಂದಿಲ್ಲೊಂದು ಪ್ರತಿಭೆ ಇರುತ್ತದೆ ಅದನ್ನ ಗುರುತಿಸುವ ಕಾರ್ಯ ಮಾಡಬೇಕು ಎಂದು ಸ್ರ್ತೀಶಕ್ತಿ ಸ್ವಸಹಾಯ ಸಂಘದ ಅದ್ಯಕ್ಷೆ ಸುಶೀಲಕ್ಕ ಪಾಟೀಲ ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ವಚನನಿಧಿ ವನಿತಾ ಸಂಘ ಶಿಗ್ಗಾವಿ ವತಿಯಿಂದ ಮಾತೃ ವಂದನಾ, ಸ್ತ್ರೀನಿಧಿ -2026 ಪ್ರಶಸ್ತಿ ಪ್ರಧಾನ ಸಮಾಂಭವನ್ನ ಉದ್ಘಾಟಿಸಿ ಮಾತನಾಡಿದ ಅವರು, ವಚನನಿಧಿ ವನಿತಾ ಸಂಘ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಮಹಿಳೆಯರ ಪ್ರತಿಭೆಯನ್ನ ಗುರುತಿಸುವ ಕಾರ್ಯ ಮಾಡುತ್ತಿದೆ ಎಂದರು.
ಶಿಗ್ಗಾವಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ವಿನೋಧಾ ಪಾಟೀಲ “ಇಂದಿನ ಮಹಿಳೆಯ ಸವಾಲುಗಳು” ಎಂಬ ವಿಷಯದ ಕುರಿತು ಮಾತನಾಡಿ, 12 ನೇ ಶತಮಾನದ ಸಮಾನವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಪ್ರತಿನಿತ್ಯದ ಬದುಕಿನಲ್ಲಿ ಮಹಿಳೆಯು ಹಲವಾರು ಸವಾಲುಗಳನ್ನ ಬವಣೆಯಾಗಿ ಸ್ವೀಕರಿಸುತ್ತಿದ್ದಾಳೆ, ಹೆಣ್ಣನ್ನ ಕ್ಷಮೆಯಾಧರಿತ್ರಿ ಎಂಬ ಹೆಸರಿನಿಂದ ಕರೆಯುವ ಮೂಲಕ ಮಹಿಳೆಗೆ ಸಹನಾ ಶಕ್ತಿಯುಳ್ಳ ಭೂಮಿ ಸಮಾನ ಹಕ್ಕುಗಳನ್ನು ಹೆಣ್ಣಿಗೆ ಕೊಡಲಾಗಿದೆ, ಸಮಾಜಿಕ ಸವಾಲುಗಳನ್ನ ಪ್ರತಿನಿತ್ಯ ಹೆಣ್ಣು ಅನುಭವಿಸುತ್ತ ಬರುತ್ತಿದ್ದಾಳೆ, ಸಾಮರಸ್ಯದ ಕೊರತೆ ಕೌಟುಂಬಿಕ ಬದುಕಿನಲ್ಲಿ ಎದುರಿಸುತ್ತಿದ್ದೇವೆ, ವಿಘಟಿತ ಕುಟುಂಬದ ಒತ್ತಡದ ಬದುಕಿನಲ್ಲಿ ಹೆಣ್ಣಿಗೆ ಬಹಳಷ್ಟು ತೊಂದರೆಗಳನ್ನ ಎದುರಿಸಬೇಕಾಗುತ್ತದೆ, ಲಿಂಗ ತಾರತಮ್ಯವೂ ನಡೆದುಕೊಂಡು ಬಂದಿದೆ ಎಂದರು.
ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು, ಅದ್ಯಕ್ಷತೆಯನ್ನ ವಚನ ನಿಧಿ ವನಿತಾ ಸಂಘದ ಅದ್ಯಕ್ಷೆ ಡಾ. ಲತಾ ನಿಡಗುಂದಿ ವಹಿಸಿದ್ದರು, ಕಾರ್ಯಕ್ರಮದ ದಿವ್ಯ ಸಾನಿದ್ಯ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ 2026ರ ಸ್ತ್ರೀನಿಧಿ ಪ್ರಶಸ್ತಿಯನ್ನ ಹಾನಗಲ್‌ನ ಕನ್ನಡ ಉಪನ್ಯಾಸಕಿ ಪುಸ್ಪಾವತಿ ಶಲವಡಿಮಠ ಅವರಿಗೆ ಪ್ರಧಾನ ಮಾಡಲಾಯಿತು. ಶಿಗ್ಗಾವಿ ವಚನನಿಧಿ ವನಿತಾ ಸಂಘದ ಸದಸ್ಯರಾದ ಪ್ರತಿಭಾ ಗಾಂಜಿ, ವಿಜಯಲಕ್ಷ್ಮಿ ಹೆಸರೂರ, ಶಂಕುಂತಲಾ ಕೋಣನವರ, ಗಿರಿಜಮ್ಮ ಹೆಸರೂರ, ವಿಜಯಲಕ್ಷ್ಮಿ ಗೊಟಗೋಡಿ, ಸುಮಂಗಲಾ ಕೋರಿ, ಕವಿತಾ ದಾಸರ, ಸುಜತಾ ಬಳಿಗಾರ ಸೇರಿದಂತೆ ಕ.ಸಾ.ಪ, ಶ.ಸಾ.ಪ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 