ಪ್ರತಿ ಮಕ್ಕಳು ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳಾಗಬೇಕು: ಶಾಸಕ ಓಲೇಕಾರ

ಹಾವೇರಿ:ಸೆ.25: ಪ್ರತಿ ಮಕ್ಕಳು ಸಾಂಸ್ಕೃತಿಕ ಪ್ರತಿನಿಧಿಗಳಾಗಿ ದೇಶದ ನಾನಾ ಭಾಗಗಳಲ್ಲಿ ಪ್ರತಿನಿಧಿಸಬೇಕು. ಸಾಂಸ್ಕೃತಿಕ ರಾಯಭಾರಿಗಳಾಗಿ ಜಿಲ್ಲೆಯ ಪ್ರತಿ ಮಕ್ಕಳು ಹೊರಹೊಮ್ಮಬೇಕು ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು.

ಸೋಮವಾರ ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ, ಸಾಂಸ್ಕೃತಿಕ ಶೈಕ್ಷಣಿಕ ಸ್ಪಧರ್ೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ. ಜಿಲ್ಲೆಯ ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪಧರ್ೆಗಳಲ್ಲಿ ಜಿಲ್ಲೆಗೆ ಕೀತರ್ಿ ತರುವ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಗೆ ಸೂಕ್ತ ತರಬೇತಿ, ಪ್ರದರ್ಶನದ ಗುಣಮಟ್ಟವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಅಗತ್ಯ ತರಬೇತಿಗಳನ್ನು ಮಕ್ಕಳಿಗೆ ನೀಡಬೇಕು. ನಿಜವಾದ ಪ್ರತಿಭೆಗಳನ್ನು ನಿಣರ್ಾಯಕರು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕಲೆ, ಸಂಗೀತ, ಸಾಹಿತ್ಯಕ್ಕೆ ಹೆಸರಾದ  ಹಾವೇರಿ ಜಿಲ್ಲೆಯಲ್ಲಿ ಹೊಸ ಹೊಸ ಪ್ರತಿಭೆಗಳು ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ. ಗಾನಯೋಗಿ ಪುಟ್ಟರಾಜ ಗವಾಯಿಗಳಂತ ಮಹಾನ್ ಸಾಧಕರನ್ನು ನೀಡಿದ ಹಿರಿಮೆ ಈ ಜಿಲ್ಲೆಗೆ ಸಲ್ಲುತ್ತದೆ. ಪರಂಪರೆಯ ಜಾಡು ಹಿಡಿದು ಹೋರಟಾಗ ಹಿರಿಯರು ಹಾಕಿಕೊಟ್ಟ ಸಾಹಿತ್ಯ, ಸಂಸ್ಕೃತಿಯ ಸೊಗಡು ಜಿಲ್ಲೆಯ ಮಕ್ಕಳಲ್ಲಿ ಕಾಣಬಹುದು ಎಂದು ಹೇಳಿದರು.

ಜಿಲ್ಲೆಯ ಮಕ್ಕಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮೊದನೇ ಸ್ಥಾನ ಪಡೆಯುವಂತೆ ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕು. ಹೊಸ ಹೊಸ ಕ್ಷೇತ್ರದಲ್ಲಿ ಹೊಸ ಹೊಸ ಪ್ರತಿಭೆಗಳು ಬೆಳೆಯಬೇಕು. ಕಲೆ, ಸಂಗೀತ, ಕ್ರೀಡೆ ಹೀಗೆ ಎಲ್ಲ ರಂಗದಲ್ಲೂ ಹಾವೇರಿ ಜಿಲ್ಲೆಯ ಮಕ್ಕಳು ಮುಂದೆ ಬರಬೇಕು. ಮಕ್ಕಳನ್ನು ಎಲ್ಲ ಕ್ಷೇತ್ರಗಳಲ್ಲಿ ಬೆಳಕಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಹೇಳಿದರು.

ಸನ್ಮಾನ: ಭೂಪಾಲನಲ್ಲಿ ಜರುಗಿದ ಕಳೆದ ಸಾಲಿನ ರಾಷ್ಟ್ರ ಮಟ್ಟದ ಪ್ರತಿಭಾ ಕಾರಂಜಿ ಸಂಗೀತ ಸ್ಪಧರ್ೆಯಲ್ಲಿ ತೃತೀಯ ಸ್ಥಾನ ಪಡೆದ ರಾಣೇಬೆನ್ನೂರಿನ ಮಾರುತಿ ನಗರದ ಸಕರ್ಾರಿ ಪ್ರೌಢಶಾಲೆ ವಿದ್ಯಾಥರ್ಿಗಳನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಶಿಕ್ಷಣ ಶಿಕ್ಷಣ ಇಲಾಖೆ ಉಪನಿದರ್ೆಶಕ ಅಂದಾನೆಪ್ಪ ವಡಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ  ಜಿಲ್ಲಾ ಡಯಟ್  ಉಪನಿದರ್ೆಶಕ ಬಸವಲಿಂಗಪ್ಪ ಜಿ.ಎಂ., ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಶೈಕ್ಷಣಿಕ ಸ್ಪಧರ್ೆಗಳ ನೋಡಲ್ ಅಧಿಕಾರಿ ಈರಪ್ಪ ಲಮಾಣಿ, ಶಿಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ, ದೈಹಿಕ ಶಿಕ್ಷಣಾಧಿಕಾರಿ ಇಚ್ಚಂಗಿ,ಶಿವಬಸವೇಶ್ವರ ಪ್ರಸಾದ ನಿಲಯ ಸಮಿತಿಯ ಚೇರಮನ್ ಶಿವಯೋಗೆಪ್ಪ ವಾಲಿಶೆಟ್ರ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಾದ  ಜೆ.ಆರ್.ಯಲವದಹಳ್ಳಿ, ಎಚ್.ಪಿ.ಬಣಕಾರ, ಎಂ.ಬಿ.ಶಾಂತಗಿರಿ, ಎಸ್.ಜಿ.ಕೋರಿ, ಎಚ್.ಎನ್.ಪಾಟೀಲ, ಎಂ.ಜಿ.ಹಿರೇಮಠ, ಜಿ.ಎಸ್.ಗಂಗಣ್ಣನವರ, ಜಾವೂರ, ಜಾಗಿರದಾರ, ಎಸ್.ಬಿ.ಕೋಟಿ, ಎನ್.ಎನ್.ಕುಂದೂರ, ವಿನಾಯಕ ಗಡ್ಡದ, ಜೆ.ಎಂ.ಇಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಾವೇರಿ ಜಿಲ್ಲೆಯ ಪ್ರತಿಭೆಗಳು ರಾಷ್ಟ್ರಮದ ಸ್ಪಧರ್ೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಗೆ ಕೀತರ್ಿ ತರಬೇಕು ಎಂದು