ಜಿಲ್ಲೆಯಲ್ಲಿ ಮೂರು ವಿಶಾಲವಾದ ನದಿಗಳು ಹರಿದರೂ ತಪ್ಪದ ಜಲಸಂಕಟ!
Even though three wide rivers flow through the district, there is always water scarcity!
ಬೇಸಿಗೆಯ ಬಿರು ಬಿಸಿಲಿಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಜಿಲ್ಲಾಡಳಿತ ಕಸರತ್ತು
ಬಸವರಾಜ ಭಾವಿ (ತೋಳಮಟ್ಟಿ)
ಬಾಗಲಕೋಟೆ: ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ ಮತ್ತು ಕೃಷ್ಣಾ ನದಿಗಳು ಹರಿಯುತ್ತಿದ್ದರೂ ಈ ಬಾರಿ ಬೇಸಿಗೆಯ ದಾಖಲೆಯ ತಾಪಮಾನಕ್ಕೆ ನೀರಿನ ಆಹಾಕಾರ ನಿಧಾನವಾಗಿ ಏರುತ್ತಿದೆ. ಜೂನ್ವರೆಗೆ ನೀರಿನ ಆಹಾಕಾರ ಎದುರಾಗಲಿದೆ.
ಇಲಕಲ್ ಹಾಗು ಗುಳೇದಗುಡ್ಡ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಲಬಣಗೊಂಡಿದೆ. ಬೇಸಿಗೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಹಲವು ಕಡೆಗೆ ನೀರಿನ ಅಭಾವ ಕಂಡುಬರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇವುಗಳ ನಿರ್ವಹಣೆ ಜಿಲ್ಲಾಡಳಿತ ಮುಂದಾಗಿದ್ದರೂ ಇದನ್ನು ನಿವಾರಿಸಲು ಸವಾಲಾಗಿ ಪರಿಣಮಿಸಿದೆ.
ಸೂರ್ಯನ ತಿವ್ರ ಪ್ರಖರತೆಗೆ ನದಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಇನ್ನು ಗ್ರಾಮೀಣ ಭಾಗದ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿಗಳನ್ನು ತುಂಬಿಸುವುದು ಕೂಡ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಅಧಿಕವಾಗಿದೆ
ಪ್ರಸ್ತುತ ನೀರಿನ ಸ್ಥಿತಿಗತಿ ಮತ್ತು ಬಹುಗ್ರಾಮ ಯೋಜನೆಗಳು
ಜಿಲ್ಲೆಯ 196 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಸ್ಥಿರವಾಗಿಡಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 39 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಚಾಲ್ತಿಯಲ್ಲಿದ್ದು, ಸುಮಾರು 8.90 ಲಕ್ಷ ಜನರಿಗೆ ನೀರು ಒದಗಿಸುತ್ತಿವೆ. ಘಟಪ್ರಭಾ ನದಿ ಮೂಲಕ 12 ಯೋಜನೆಯಡಿಯಲ್ಲಿ 140 ಹಳ್ಳಿಗಳಿಗೆ ,ಕೃಷ್ಣಾ ನದಿ ಮೂಲಕ 23 ಯೋಜನೆಗಳಡಿಯಲ್ಲಿ 237 ಹಳ್ಳಿಗಳಿಗೆ ,ಮಲಪ್ರಭಾ ನದಿ ಮೂಲಕ 4 ಯೋಜನೆಗಳಡಿಯಲ್ಲಿ 41 ಹಳ್ಳಿಗಳಿಗೆ ನೀರು ಸರಬರಾಜು ಅಗುತ್ತಿದೆ. ಇತ್ತೀಚೆಗೆ ನದಿಗಳಿಗೆ ನೀರು ಬಿಟ್ಟಿರುವುದರಿಂದ ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದೆ. ಏಪ್ರಿಲ್ ಮೊದಲ ವಾರದಲ್ಲಿ ಘಟಪ್ರಭೆಗೆ 1.10 ಟಿಎಂಸಿ ಮತ್ತು ಮಲಪ್ರಭೆಗೆ 1.00 ಟಿಎಂಸಿ ನೀರು ಬಿಡುಗಡೆ ಮಾಡಲಾಗಿರುವುದು ಸಮಾಧಾನಕರ ಸಂಗತಿ.
ಜಿಲ್ಲಾಡಳಿತದ ವರದಿಯ ಪ್ರಕಾರ:
ಏಪ್ರೀಲ್ ನಲ್ಲಿ 52 ಮತ್ತು ಮೇ ತಿಂಗಳಲ್ಲಿ 62 ಗ್ರಾಮಗಳಿಗೆ ನೀರಿನ ತೀವ್ರ ತೊಂದರೆ ಉಂಟಾಗುವ ನೀರೀಕ್ಷೆಯಿದೆ. ಸಮಸ್ಯೆ ಎದುರಿಸಲು ಈಗಾಗಲೇ 111 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, 2026-27ನೇ ಸಾಲಿನಲ್ಲಿ ಸಂಭವನೀಯ ನೀರಿನ ಸಮಸ್ಯೆ ಎದುರಿಸಲು ಹೊಸ ಯೋಜನೆ 611.89 ಲಕ್ಷ ರೂ. ಗಳ ವೆಚ್ಚದ 206 ಕಾಮಗಾರಿಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ನದಿಗಳ ನೀರಿನ ಹರಿವು ನಿಂತರೆ ಪರಿಸ್ಥಿತಿ ಕೈಮೀರಬಹುದು. ಚಿಕ್ಕಪಡಸಲಗಿ ಬ್ಯಾರೇಜ್ ವ್ಯಾಪ್ತಿಯ ನೀರು ಏಪ್ರಿಲ್ ಅಂತ್ಯಕ್ಕೆ ಮುಗಿಯಲಿದ್ದು, ಜೂನ್ ವರೆಗೆ ನೀರು ಪೂರೈಸಲು ಹಿಪ್ಪರಗಿ ಬ್ಯಾರೇಜ್ನಿಂದ ಹೆಚ್ಚಿನ ನೀರು ಬಿಡುಗಡೆ ಮಾಡುವುದು ಅನಿವಾರ್ಯವಾಗಿದೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 