ಗ್ರಂಥಗಳು ಸುಟ್ಟರು ಜ್ಞಾನ ಸುಡುವುದಿಲ್ಲಾ: ಶ್ರೀಕಾಂತ ದುಂಡಿಗೌಡ್ರ
Even if scriptures are burned, knowledge will not be burned: Srikanth Dundigowdra
ಶಿಗ್ಗಾವಿ 30: ನಿಸ್ವಾರ್ಥ ಸಮಾಜಮುಖಿ ವ್ಯಕ್ತಿಗಳಿಂದ ಸ್ಥಾಪಿತವಾದ ಈ ಶಿಕ್ಷಣ ಸಂಸ್ಥೆ ಈ ತಾಲೂಕಿನ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನ ಭಂಡಾರವನ್ನು ನೀಡಿ ಅವರ ಬದುಕು ಹಸನಾಗಿಸಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ನಳಂದಾ ಶಿಕ್ಷಣ ಸಂಸ್ಥೆ ಶಿಗ್ಗಾವಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾವಣೆಯಾಗುತ್ತದೆ ಅಂತ ಶಾಶ್ವತವಾದ ಜ್ಞಾನವನ್ನು ಈ ಸಂಸ್ಥೆ ನೀಡುವಲ್ಲಿ ಸಫಲವಾಗಿದೆ ಅಲ್ಲದೇ ಇಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ ಭವ್ಯ ಭಾರತವನ್ನು ನಿರ್ಮಿಸಲು ಯುವಕರನ್ನು ತಯಾರಿಸುವ ಅವಶ್ಯಕತೆಯಿದೆ ಹೀಗಿರುವಾಗ ವಿದ್ಯಾರ್ಥಿಗಳು ಶಿಕ್ಷಕರ ಮಾತುಗಳನ್ನು ಪಾಲಿಸಬೇಕೇಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ. ಎನ್.ದಂಡಿನ, ಶಿಗ್ಗಾವಿ ಕ್ಷೇತ್ರಶಿಕ್ಷಣಾಧಿಕಾರಿ ಎಂ. ಬಿ. ಅಂಬಿಗೇರ, ಸಂಸ್ಥೆಯ ಅಧ್ಯಕ್ಷ ಡಾ. ಪಿ. ಆರ್. ಪಾಟೀಲ ಸಂಸ್ಥೆಯ ಗೌರವ ಕಾರ್ಯದರ್ಶಿ ಎಫ್. ಸಿ. ಪಾಟೀಲ, ಕೆಎಂಎಫ್. ನಿರ್ದೇಶಕ ತಿಪ್ಪಣ್ಣ ಸಾತಣ್ಣವರ ಪ್ರಾಚಾರ್ಯ ಬಾಲಚಂದ್ರ ತೊಂಡಿಹಾಳ ಉದ್ಯಮಿ ನರಹರಿ ಕಟ್ಟಿ, ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಶೈಲ ಹುದ್ದಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ, ನಿವೃತ್ತ ಉಪಪ್ರಾಚಾರ್ಯ ಜಿ. ಎನ್. ಯಲಿಗಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣಗೌಡ್ರ ಹುಡೇದಗೌಡ್ರ ನಿವೃತ್ತ ಪ್ರಧಾನಗುರುಗಳ ಎಚ್. ಪಿ. ಹಾವೇರಿ ಸೇರಿದಂತೆ ಆಡಳಿತ ಮಂಡಳಿ ಪಧಾಧಿಕಾರಿಗಳು ಶಾಲಾ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲಕರು ಪೋಷಕರು ಹಾಜರಿದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 