ನವದೆಹಲಿ, ಜುಲೈ 2: ಅಬುಧಾಬಿಗೆ ಸೇರಿದ ಪ್ರಮುಖ ವಿಮಾನ ಸಂಸ್ಥೆ ಎತಿಹಾದ್ ಏರ್ ಲೈನ್ಸ್ ಈ ತಿಂಗಳ ೧೬ ರಿಂದ ಬೆಂಗಳೂರು ಸೇರಿದಂತೆ ಭಾರತದ ಏಳು ನಗರಗಳಿಗೆ ತನ್ನ ವಿಮಾನ ಸೇವೆ ಆರಂಭಿಸಲು ಸಿದ್ದವಾಗುತ್ತಿದೆ.
ಹೊಸದಾಗಿ ೧೭ ನಗರಗಳಿಗೆ ತನ್ನ ವಿಮಾನ ಸೇವೆಗಳನ್ನು ಪ್ರಕಟಿಸಿರುವ ಎತಿಹಾದ್.. ಈ ಪೈಕಿ ೭ ನಗರಗಳು ಭಾರತದಲ್ಲಿವೆ ಎಂದು ತಿಳಿಸಿದೆ.
ಕಳೆದ ತಿಂಗಳಲ್ಲಿ ಅಥೆನ್ಸ್ , ಗ್ರೀಸ್ ಜೊತೆಗೆ ೨೫ ನಗರಗಳಿಗೆ ವಿಮಾನ ಹಾರಾಟ ಆರಂಭಿಸಿದ್ದ ಎತಿಹಾದ್.. ಜುಲೈನಲ್ಲಿ ಮತ್ತೆ ೧೫ ಹೊಸ ನಗರಗಳಿಗೆ ತನ್ನ ವಿಮಾನ ಸೇವೆಗಳನ್ನು ವಿಸ್ತರಿಸಿ ವಿಶ್ವದ ೪೦ ನಗರಗಳಿಗೆ ವಿಮಾನ ಸೇವೆ ಕಲ್ಪಿಸಲು ಸಿದ್ದವಾಗುತ್ತಿದೆ.
ಈ ತಿಂಗಳ ೧೬ ರಿಂದ ಭಾರತದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಚ್ಚಿ, ಕೋಜಿಕೋಡ್, ಮುಂಬೈಗಳಿಗೆ ಎತಿಹಾದ್ ವಿಮಾನ ಸೇವೆಗಳನ್ನು ಒದಗಿಸಲಿದೆ. ಆದೇ ರೀತಿ ಪಾಕಿಸ್ತಾನ ಇಸ್ಲಾಮಾಬಾದ್, ಕರಾಚಿ, ಲಾಹೋರ್ .. ಮಾಲ್ಡೀವ್ಸ್, ಅಮ್ಮಾನ್, ಕೈರೋ, ಬೆಲ್ಗ್ರೇಡ್, ಇಸ್ತಾಂಬುಲ್, ಮ್ಯಾಂಚೆಸ್ಟರ್ ನಗರಗಳು ಕೂಡಾ ಎತಿಹಾದ್ ಏರ್ ಲೈನ್ಸ್ ಪಟ್ಟಿಯಲ್ಲಿವೆ.