ಕಾರ್ಯನಿರತ ಪತ್ರಕರ್ತರಸಂಘದಲ್ಲಿ‘ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪನೆ: ರಾಜು ಹೆಬ್ಬಳ್ಳಿ
Establishment of a 'Welfare Development Fund' in the Working Journalists' Association: Raju Hebballi
ಗದಗ 31: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಹಿತ ಕಾಯುವ ಉದ್ದೇಶದಿಂದ ಗದಗ ಜಿಲ್ಲೆಯಲ್ಲಿ ‘ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪನೆಗೆ ಮುಂದಾಗಿದ್ದು, ಅದಕ್ಕೆ ಪೂರಕವಾಗಿ ಮೊದಲ ಹಂತದಲ್ಲೇ 1 ಲಕ್ಷರೂ. ‘ ಕ್ಷೇಮಾಭಿವೃದ್ಧಿ ನಿಧಿ’ ಸಂಗ್ರಹವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಎನ್.ಆರ್ ಭಾಂಡಗೆ ಸಂಪಾದಕತ್ವದ ‘ಚಕ್ರವರ್ತಿ’ ಕನ್ನಡ ದಿನಪತ್ರಿಕೆಯ 2026ನೇ ವರ್ಷದ ವರ್ಣರಂಜಿತ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಸಾನಿಧ್ಯವಹಿಸಿದ್ದ ಮಲ್ಲ ಸಮುದ್ರ-ಕಳಸಾಪೂರ ಓಂಕಾರೇಶ್ವರ ಗಿರಿಯ ಶ್ರೀ ಓಂಕಾರೇಶ್ವರ ಹಿರೇಮಠದ ಶ್ರೀಷ.ಬ್ರ. ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳು ಭಕ್ತರು ನೀಡಿದ್ದ 5001 ರೂ. ಹಣವನ್ನು ‘ಪತ್ರಕರ್ತರ ಕ್ಷೇಮಾಭಿವೃದ್ಧಿ’ಗೆ ನೀಡುವ ಮೂಲಕ ‘ಕ್ಷೇಮಾಭಿವೃದ್ಧಿ ನಿಧಿ’ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
ಈ ವೇಳೆ ತಮ್ಮ ಮಠಕ್ಕೆ ನೀರು ಇಲ್ಲದ ಕಾರಣ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಪತ್ರಕರ್ತರು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಮನ ಸೆಳೆಯುವ ಬಗ್ಗೆ ಆ ವಿಚಾರವನ್ನು ಸಾಂದರ್ಭಿಕವಾಗಿ ಪ್ರಸ್ತಾಪಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರತ್ನಾಕರವಾಣಿ ದಿನಪತ್ರಿಕೆಯ ಸಂಪಾದಕರಾದ ಜಗದೀಶ ಪೂಜಾರಅವರು ಶ್ರೀಮಠಕ್ಕೆ ಬೋರ್‌ವೆಲ್ ಹಾಕಿಸಿ ಕೊಡುವ ಭರವಸೆ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು ‘ಅಲ್ಲಿ ನೀರು ಬೀಳುವದಿಲ್ಲ ಎಂದಾಗ ಜಗದೀಶ ಪೂಜಾರ ಅವರು ಪೂಜ್ಯರಿಗೆ ’21,000 ರೂ.ಗಳನ್ನು ಪೂಜ್ಯರಿಗೆ ನೀಡಿದರು. ಆದರೆ, ಪೂಜ್ಯರು ಮಾತ್ರ 'ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ'ಗೆ ಕೊಡಬಯಸಿದ್ದ 5,001 ರೂ. ಜತೆಗೆ ಶ್ರಿಮಠಕ್ಕೆ ಜಗದೀಶ ಪೂಜಾರ ಅವರು ನೀಡಿದ ದೇಣಿಗೆಯ 21,000 ರೂ. ಹಣವನ್ನೂ ಸೇರಿಸಿ ಒಟ್ಟು 26,001 ರೂ.ಗಳನ್ನು ಕಾನಿಪ ಜಿಲ್ಲಾ ಸಂಘಕ್ಕೆ ನೀಡಿ, ಈ ಹಣದಿಂದ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಎಂದು ಹರಸಿ ಆಶೀರ್ವದಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾ ಘಟಕಕ್ಕೆ ಕ್ಷೇಮಾಭಿವೃದ್ಧಿ ನಿಧಿ ನೀಡಿದವರಿಗೆ ಹಾಗೂ ಈ ಕಾರ್ಯಕ್ಕೆ ಸಹಕಾರ ನೀಡಲು ವೇದಿಕೆ ಕಲ್ಪಿಸಿದ ಶ್ರೀ ಷ.ಬ್ರ. ಫಕೀರೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ, ಕಿತ್ತೂರ ಕರ್ನಾಟಕ ದಿನಪತ್ರಿಕೆ ಸಂಪಾದಕರಾದ ಮಂಜುನಾಥ ಬಸಪ್ಪ ಅಬ್ಬಿಗೇರಿ, ಎ.ಬಿ.ಎಸ್.ಎಸ್.ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಈಶ್ವರಸಾ ಮೇರವಾಡೆ, ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಮಾರುತಿ ಪವಾರ, ಗದಗಎಸ್.ಎಸ್.ಕೆ ಪಂಚ ಕಮೀಟಿ ಅಧ್ಯಕ್ಷರಾದ ಫಕೀರಸಾ ಬಿ ಭಾಂಡಗೆ, ನ್ಯಾಯವಾದಿ ಜೋಸೆಫ್ ಉಧೋಜಿ, ಸಾಹಿತಿಎ.ಎಸ್ ಮಕಾನದಾರ, (ಆನಂದಯ್ಯ ವಿರಕ್ತಮಠ, ಸಂಪಾದಕರು, ರೈಜ್‌ಆಫ್‌ಗದಗ ದಿನಪತ್ರಿಕೆ), ಹುಬ್ಬಳ್ಳಿಯ ಬಾಲಚಂದ್ರ ಭಾಂಡಗೆಮತ್ತು ಹಿರಿಯ ಪತ್ರಕರ್ತ ಮತ್ತು ನ್ಯಾಯವಾದಿ ಆಗಿರುವಅನಂತಎಸ್. ಕಾರ್ಕಳ ಅವರುಸೇರಿ ಈ ಕಾರ್ಯಕ್ಕೆ ಸಹಕಾರ ನೀಡಿದಚಕ್ರವರ್ತಿ ದಿನಪತ್ರಿಕೆ ಸಂಪಾದಕರಾದಎನ್. ಆರ್. ಭಾಂಡಗೆ ನೇತ್ರತ್ವದತಂಡಕ್ಕೆ ಹಾಗೂ ಹಿರಿಯ ಪತ್ರಕರ್ತರಾದ ಡಾ.ಅನಂತಎಸ್. ಕಾರ್ಕಳ, ಜಗದೀಶ ಕುಲಕರ್ಣಿ, ನ್ಯಾಯವಾದಿ ಮಿತ್ರಟಿ.ಎನ್. ಭಾಂಡಗೆ, ಜಗದೀಶ ಪೂಜಾರ ಸೇರಿ ಎಲ್ಲರಿಗೂ ಜಿಲ್ಲಾ ಸಂಘದ ಪರವಾಗಿ 'ಅನಂತ' ಧನ್ಯವಾದಗಳು..
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 