ಉತ್ತರ ಕರ್ನಾಟಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ: ಕವಠಗಿಮಠ
Establish North Karnataka Development Corporation: Kavathagimath
ಬೆಳಗಾವಿ 05: ರಾಜ್ಯ ಸರಕಾರ ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಲು ಉತ್ತರ ಕರ್ನಾಟಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ ಕವಠಗಿಮಠ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಬೇಡಿಕೆ ಒಂದೇ ಸಮಸ್ಯೆಗೆ ಪರಿಹಾರ ಅಲ್ಲ. ಅಖಂಡ ಕರ್ನಾಟಕದ ಕನಸ್ಸು ಕಂಡರವು ಉತ್ತರ ಕರ್ನಾಟಕದ ಜನರು. ಈ ಭಾಗದ ದೊಡ್ಡ ನಗರಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯ ಇದೆ. ಕಾಟಾಚಾರಕ್ಕೆ ಚಳಿಗಾಲದ ಅಧಿವೇಶನ ನಡೆಸಿ ಪಲಾಯನ ಮಾಡುವ ಸರಕಾರದ ನಡೆಯನ್ನು ಖಂಡಿಸುತ್ತೇನೆ ಎಂದರು.
ಬೆಳಗಾವಿಗೆ ಟೆಕ್ಸಟೈಲ್ ಪಾರ್ಕ್ ನಿರ್ಮಾಣ ಮಾಡುವುದು, ಬೋರಗಾವದಲ್ಲಿ ಸಿಲ್ಬರ್ ಪಾರ್ಕ, ಐಟಿ ಪಾರ್ಕ್ ನಿರ್ಮಾಣ, ಹುಕ್ಕೇರಿಯಲ್ಲಿನ ರಾಜಾ ಲಖಮನಗೌಡ ಜಲಾಶಯದ ಬಳಿ ಬೃಂದಾವನ ಅಭಿವೃದ್ಧಿ ಪಡಿಸುವುದು, ಗೋಕಾಕ್ ಫಾಲ್ಸ್ ಅಭಿವೃದ್ಧಿ, ಗೊಡಚಿನಮಲ್ಕಿ ಅಭಿವೃದ್ಧಿ ಪಡಿಸುವುದು, ಖಾನಾಪುರ ತಾಲೂಕಿನ ಅಸೋಗಾ ಅಭಿವೃದ್ಧಿಪಡಿಸುವುದು, ಬೆಳಗಾವಿ ಉತ್ತರ ಕರ್ನಾಟಕದ ಪ್ರಮುಖವಾಗಿ ಬೆಳೆಯುತ್ತಿರುವ ನಗರಕ್ಕೆ ಮೂಲಭೂತ ಸೌಕರ್ಯಕ್ಕಾಗಿ ಯಡಿಯೂರ್ಪ ಮುಖ್ಯಮಂತ್ರಿಯಾಗಿದ್ದಾಗ ಸರಕಾರ ನೂರಾರು ಕೋಟಿ ರೂ.ಗಳ ಅನುದಾನ ಕೊಟ್ಟಿದ್ದರು. ಸರಕಾರ ಈಗಲಾದರೂ ಬೆಳಗಾವಿಗೆ ಮೂಲಭೂತ ಸೌಕರ್ಯ ಕಲ್ಲಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ತೋರುವ ಮಲತಾಯಿ ಧೋರಣೆ, ಕಾವೇರಿಗೆ ಇರುವ ನ್ಯಾಯ ಕೃಷ್ಣಗೆ ಯಾಕಿಲ್ಲ ಭದ್ರಾ ಮತ್ತು ತುಂಗೆಗೆ ಇರುವ ಆ ಕಾಳಜಿ ಮಲಪ್ರಭಾ ಘಟಪ್ರಭಾಗೆ ಯಾಕಿಲ್ಲ ಅನ್ನುವ ಕೂಗು ನಮ್ಮ ಭಾಗದ ಜನರಿಗೆ ಆಗಿದೆ. ಹೀಗಾಗಿ ಅವಲೋಕನಗಳನ್ನು ನಾವು ಮಾಡಿದಾಗ ನೀರಾವರಿ ಯೋಜನೆಗಳು ಅದು ಆಲಮಟ್ಟಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದರು.
ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಿ ಬೈಲಹೊಂಗಲ, ಚಿಕ್ಕೋಡಿ ಹಾಗೂ ಗೋಕಾಕ್ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಸರಕಾರ ಈ ಅಧಿವೇಶನದಲ್ಲಿ ಘೋಷಣೆ ಮಾಡಬೇಕು ಎಂದರು. ಬೆಳಗಾವಿ ಜಿಲ್ಲೆಯ ವಿವಿಧ ಸರಕಾರಿ ಹುದ್ದೆಗಳು ಖಾಲಿ ಇವೆ. ನೀರಾವರಿ, ಲೋಕೋಪಯೋಗಿ, ಶೈಕ್ಷಣಿಕ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ್ ಮಾತನಾಡಿ, ಡಿ.8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. 9ರಂದು ಯಡಿಯೂರ್ಪ ಮಾರ್ಗದಿಂದ ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ಬೃಹತ್ ಪ್ರಮಾಣದಲ್ಲಿ ಹೋರಾಟ ನಡೆಸಲಾಗುತ್ತಿದೆ. ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗಿಯಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ. ವಿ.ಐ.ಪಾಟೀಲ್, ಬಿಜೆಪಿ ಮುಖಂಡ ಎಂ.ಬಿ.ಜೀರಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 