ಹಿರೇಬೆಂಡಿಗೇರಿ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಈರವ್ವ ಹಡಪದ ಅವಿರೋಧ ಆಯ್ಕೆ
Eravva Hadapa was elected unopposed as the new chairperson of Hirebendigeri Gram
ಹಿರೇಬೆಂಡಿಗೇರಿ ಗ್ರಾಪಂ ನೂತನ ಅಧ್ಯಕ್ಷೆಯಾಗಿ ಈರವ್ವ ಹಡಪದ ಅವಿರೋಧ ಆಯ್ಕೆ
ಶಿಗ್ಗಾವಿ 19: ತಾಲ್ಲೂಕಿನ ಹಿರೇಬೆಂಡಿಗೇರಿ ಗ್ರಾಮ ಪಂಚಾಯಿತಿಗೆ 2ನೇ ಅವಧಿ ಅಧ್ಯಕ್ಷ ,ಉಪಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷೆ ಈರವ್ವ ಹಡಪದ, ಉಪಾಧ್ಯಕ್ಷ ಚನ್ನಬಸಪ್ಪ ಮ್ಯಾಗೇರಿ ಅವರನ್ನು ಗ್ರಾಮಸ್ಥರು, ಸದಸ್ಯರು ಸನ್ಮಾನಿಸಿದರು. ಸಾಮಾನ್ಯ ಮಹಿಳೆ ಮೀಸಲಾತಿ ಇರುವ ಅಧ್ಯಕ್ಷೆ ಸ್ಥಾನಕ್ಕೆ ಈರವ್ವ ಹಡಪದ, ಸಾಮಾನ್ಯ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ ಚನ್ನಬಸಪ್ಪ ಮ್ಯಾಗೇರಿ ತಲಾ ಒಂದೊಂದು ನಾಮಪತ್ರ ಸಲ್ಲಿಸಿದರು. ಹೀಗಾಗಿ ಅವರನ್ನು ಅಧ್ಯಕ್ಷ ,ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಆಗಿದ್ದರೆ ಎಂದು ಘೋಷಿಸಲಾಗಿದೆ ಎಂದು ಚುನಾವಣೆ ಅಧಿಕಾರಿ ಕುಮಾರ ಮಣ್ಣವಡ್ಡರ, ಸಹಾಯಕರಾಗಿ ಪ್ರಕಾಶ ಓಂಧಕರ, ಸುರೇಶ ತಗ್ಗಿಹಳ್ಳಿ ಕಾರ್ಯ ನಿರ್ವಹಿಸಿದರು.
ನಂತರ ನಡೆದ ಅಭಿನಂದನ ಸಮಾರಂಭದಲ್ಲಿ ಈರವ್ವ ಹಡಪದ್ ಮಾತನಾಡಿ,ಕುಡಿಯುವ ನೀರು, ವಿದ್ಯುತ್ ದೀಪ, ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು.ಅದಕ್ಕೆ ಎಲ್ಲ ಸದಸ್ಯರ ಗ್ರಾಮಸ್ಥರ ಸಹಕಾರ ಮುಖ್ಯವಾಗಿದೆ ಎಂದರು. ಮುಖಂಡರಾದ ತಿಪ್ಪಣ್ಣ ಸಾತಣ್ಣವರ, ಸಂಗಮೇಶ ಕಂಬಳಿಮಠ, ಫಕ್ಕೀರೇಶ ಕೊಂಡಾಯಿ,ಶಂಕರ ಮುಂದಿನ್ಮನಿ, ಬಸನಗೌಡ ಪಾಟೀಲ, ಚನ್ನಪ್ಪ ಕುಂದೂರ, ಫಕೀರಯ್ಯ ಹಿರೇಮಠ ನಾಗಪ್ಪ ಅದೃಶ್ಯಪ್ಪನವರ, ಬಸವರಾಜ್ ಕನಕಟ್ಟಿ, ಬಸವರಾಜ ಬ್ಯಾಹಟ್ಟ, ಚನ್ನಬಸಪ್ಪ ಹಡಪದ, ಆಶಿಮ್ ಖಾನ್ ಪಟೇಲ್, ದ್ಯಾಮಣ್ಣವರ, ಶಂಕ್ರಮ್ಮ ಹರಿಜನ, ಯಲ್ಲವ್ವ ತಳವಾರ,ಫಾತಿಮಾ ತಹಶಿಲ್ದಾರ, ರುದ್ರ್ಪ ನಂದನ್ನವರ, ಸೇರಿದಂತೆ ಅನೇಕ ಮುಖಂಡರು ಇದ್ದರು
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 