ದಾಂಡೇಲಿಯಲ್ಲಿ ಕಾಳಿ ನದಿ ರಕ್ಷಣೆಗೆ ಪರಿಸರ ಪ್ರೇಮಿಗಳ ಅಭಿಯಾನ

     ದಾಂಡೇಲಿಯಲ್ಲಿ ಕಾಳಿ ನದಿ ರಕ್ಷಣೆಗೆ ಪರಿಸರ ಪ್ರೇಮಿಗಳ ಅಭಿಯಾನ  Environmentalists' campaign to protect the Kali River in Dandeli

ಲೋಕದರ್ಶನ ವರದಿ 

ದಾಂಡೇಲಿ 18: ದಾಂಡೇಲಿಯ ಫಾರೀಕ್ ಪ್ರಸಂಟೇಶನ್ ವತಿಯಿಂದ ಶನಿವಾರ ಕಾಳಿನದಿ ಸೇತುವೆ ಮೇಲೆ ಕಾಳಿನದಿ ಸಂರಕ್ಷಣೆಗೆ ಜಾಗ್ರತಿ ಅಭಿಯಾನ ಕೈಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಅಭಿಯಾನದಲ್ಲಿ ಯುವ ಕಾರ್ಯಕರ್ತರು ಕಾಳಿನದಿ  

ನಮ್ಮ ಜೀವನಾಡಿ - ಸ್ವಚ್ಚವಾಗಿಡುವದು ನಮ್ಮೇಲ್ಲರ ಹೊಣೆ, ನದಿಗೆ ಕಸ ಎಸೆಯಬೇಡಿ, ಪರಿಸರ ಉಳಿಸಿ- ಕಾಳಿನದಿ ಬೆಳೆಸಿ ಎಂಬ ಸಂದೇಶಗಳಿರುವ ಜಾಗ್ರತಿ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು.

ಅಲ್ಲದೆ ಕಾಳಿ ಸೇತುವೆಯ ಮೇಲೆ ಸಾರ್ವಜನಿಕರಿಗೆ ನಿರಂತರವಾಗಿ ಜಾಗ್ರತಿ ಮೂಡಿಸುವ ಉದ್ದೇಶದಿಂದ ಶಾಶ್ವತ ಜಾಗ್ರತಿ ಫಲಕಗಳನ್ನು  ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಆಯೋಜಕರಾದ ಗೋವಿಂದ ಫಾರೀಕ್ ಮಾತನಾಡಿ ಕಾಳಿನದಿ ದಾಂಡೇಲಿಯ ಜೀವನಾಡಿಯಾಗಿದ್ದು , ಅದರ ಸ್ವಚ್ಚತೆ ಕಾಪಾಡುವದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.   

ಅಭಿಯಾನದಲ್ಲಿ ಫಾರೀಕ್ ಪ್ರಸೆಂಟೇಶನ್‌ನ ಸುನೀಲ ಎಮ್‌.ಎಚ್, ರಾಕೇಶ ಸಾರಡಾ, ಮಂಜುನಾಥ ದೇಸಾಯಿ, ಶಬ್ಬೀರ್ ಪಾನವಾಲೇ, ಶಾನೂರ್, ಅಭಿಷೇಕ ಪಾಟೀಲ್, ಮತ್ತಿತರರು ಪಾಲ್ಗೊಂಡಿದ್ದರು.  ಸಾರ್ವಜನಿಕರು ಈ ಜಾಗೃತಿ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಕಾಳಿನದಿ ಸಂರಕ್ಷಣೆಗೆ ಸಹಕರಿಸುವ ಭರವಸೆ ನೀಡಿದರು.