ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಡಾ. ಸೂರಜ ಜೈನ್
Environmental protection is our responsibility: Dr. Suraj Jain
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಡಾ. ಸೂರಜ ಜೈನ್
ಧಾರವಾಡ 06: ಮನುಷ್ಯನ ಬದುಕಿಗೆ ಅತ್ಯವಶ್ಯಕವಾದ ಪರಿಶುದ್ಧ ಗಾಳಿ, ಬೆಳಕು, ನೀರು, ಆಹಾರ ಸಿಗಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಸಸಿಗಳನ್ನು ನೆಟ್ಟು ಪೋಷಿಸಬೇಕು. ಅಂದರೆ ಮಾತ್ರ ನಮ್ಮ ಮುಂದಿನ ಭವಿಷ್ಯದ ಪೀಳಿಗೆಗೆ ನಿರ್ಮಲ ಪರಿಸರ ಕಲ್ಪಿಸಬಹುದಾಗಿದೆ ಎಂದು ಉಪಪ್ರಾಚಾರ್ಯ ಡಾ. ಸೂರಜ ಜೈನ್ ಹೇಳಿದರು. ನಗರದ ಜೆ.ಎಸ್.ಎಸ್. ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಮಾನವ ಹಕ್ಕುಗಳ ಸಂಘ ಹಾಗೂ ಎನ್.ಎಸ್. ಎಸ್. ಹಾಗೂ ಎಸ್.ಸಿ.ಸಿ. ಘಟಕದ ವತಿಯಿಂದ ಹಮ್ಮಿಕೊಂಡ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ಲಾಸ್ಲಿಕ ಬಳಕೆ ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ. ಆದರೆ ನಮ್ಮ ನಿತ್ಯ ಬದುಕಿನಲ್ಲಿ ಪ್ಲಾಸ್ಟಿಕನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಿರಿ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು. ನಮ್ಮ ಜೆ.ಎಸ್.ಎಸ್. ಸಂಸ್ಥೆಯು ಹಚ್ಚು ಹಸಿರಿನಿಂದ ಕೂಡಿದ ಸುಂದರ ಆವರಣವಾಗಿದೆ. ವಿಶ್ವ ಪರಿಸರ ದಿನವು ಕೇವಲ ಒಂದೇ ದಿನಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯವೂ ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಬದುಕಲು ಸ್ವಚ್ಛಂದದ ಪರಿಸರ ಒದಗಿಸಲು ನಮ್ಮಿಂದ ಸಾಧ್ಯ ಎಂದರು. ಮುಖ್ಯ ಅತಿಥಿ ಡಾ. ರತ್ನಾ ಐರಸಂಗ ಪರಿಸರ ಸಂರಕ್ಷಣೆಯು ಮನೆಯಿಂದಲೇ ಆರಂಭವಾಗುತ್ತದೆ. ತಾಯಿಯೇ ಮೊದಲ ಗುರುವು ಮನೆಯೇ ಮೊದಲ ಪಾಠಶಾಲೆ ಆ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಸರ ಸಂರಕ್ಷಣೆಯ ಹೊಣೆಯನ್ನು ಹೊತ್ತುಕೊಳ್ಳಬೇಕು. ಈಗಾಗಲೇ ಮೂರು ಲಕ್ಷ ಅರವತ್ತು ಸಾವಿರ ಸೂಕ್ಷ್ಮ ಜೀವಿಗಳನ್ನು ಕಂಡು ಹಿಡಿಯಲಾಗಿದೆ. ಇನ್ನೂ ಅನೇಕ ಸೂಕ್ಣ್ಮ ಜೀವಿಗಳ ಅನ್ವೇಷಣೆ ಆಗಬೇಕಿದೆ. ಹೀಗಾಗಿ ವಿಜ್ಞಾನ ವಿದ್ಯಾರ್ಥಿಗಳು ಈ ಬಗ್ಗೆ ಸಂಶೋಧನೆ ಕೈಗೊಳ್ಳಬೇಕಿದೆ. ಭೂಮಿಯು ಅತ್ಯಮೂಲ್ಯವಾದ ಗ್ರಹವಾಗಿದ್ದು ಐದು ದಶಲಕ್ಷಕ್ಕೂ ಹೆಚ್ಚಿನ ಜೀವರಾಶಿಗಳಿಗೆ ಆಶ್ರಯವಾಗಿದೆ. ಕೃಷಿಯಲ್ಲಿ ಬಳಸಲ್ಪಡುವ ರಾಸಾಯನಿಕಗಳು ಕ್ಯಾನ್ಸರ್ ಅಂತಹ ರೋಗಗಳಿಗೆ ಎಡೆಮಾಡಿಕೊಡುತ್ತಿದೆ. ಪ್ಲಾಸ್ಟಿಕ್ ನಲ್ಲಿ ಸಂಸ್ಕರಿಸಿದ ಆಹಾರಗಳಿಂದ ಮತ್ತು ರುಚಿ ಹೆಚ್ಚಿಸಲು ಬಳಸುವ ಅಜಿನೊಮೊಟೊಗಳಿಂದ ಜ್ಞಾಪಕ ಶಕ್ತಿಯು ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. 2005 ರಿಂದ 2025 ರವರೆಗಿನ ವಿಶ್ವ ಪರಿಸರ ದಿನಾಚರಣೆಯ ಪ್ರತಿವರ್ಷದ ಧ್ಯೇಯ ವಾಕ್ಯಗಳನ್ನು ಹೇಳಿದರು.ಸಸಿ ನೆಟ್ಟು ಪೋಷಿಸುವಂತೆ ತಿಳಿಸಿದರು. ಒಂದು ಮರವು ನಮ್ಮ ಮೂರು ಪೀಳಿಗೆಗೆ ಆಮ್ಲಜನಕ ನೀಡುವ ಸಾಮರ್ಥ್ಯ ಹೊಂದಿದೆ ಎಂದು ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆ ಕುರಿತು ಅರಿವು ಮೂಡಿಸಿದರು. ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರದ ಮೇಲೆ ತಂತ್ರಜ್ಞಾನದ ಪ್ರಭಾವ ವಿಷಯ ಕುರಿತು ಆಯೋಜಿಸಲಾದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರೊ. ಚೇತನಾ ಕೋರಿಶೆಟ್ಟರ ಸ್ವಾಗತಿಸಿದರು. ಪ್ರೊ. ಅರ್ಚನಾ ಪಾಟೀಲ ವಂದಿಸಿದರು. ಪ್ರೊ. ವಾಣಿಶ್ರೀ ಕುಲಕರ್ಣಿ ನಿರೂಪಿಸಿದರು. ಡಾ.ಸೂರಜ ಜೈನ, ಡಾ. ಆರ್.ವಿ. ಚಿಟಗುಪ್ಪಿ ಡಾ. ರತ್ನಾ ಐರಸಂಗ, ಪ್ರೊ. ಬಲಭೀಮ ಹಾವನೂರ, ಪ್ರೊ. ಆನಂದ ಕಟ್ಟಿಮನಿ, ಪ್ರೊ. ಚೇತನಾ ಕೋರಿಶೆಟ್ಟರ, ಪ್ರೊ. ವಾಣಿಶ್ರೀ ಕುಲಕರ್ಣಿ, ಪ್ರೊ. ಅರ್ಚನಾ ಪಾಟೀಲ, ಡಾ. ಕವಿತಾ ಭಜಂತ್ರಿ, ಪ್ರೊ.ಸಹನಾ ವಿ.ಎ.ಪ್ರೊ. ಸ್ಮಿತಾ ಪಾಟೀಲ, ಪ್ರೊ. ಮಹಾಂತೇಶ ಕೆ. ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 