ಭವಿಷ್ಯದ ಜೀವನ ಬದುಕಿಗೆ ಪರಿಸರ ಪ್ರಜ್ಞೆ ಅಗತ್ಯ: ಡಾ. ಮೃತ್ಯುಂಜಯ
Environmental awareness is essential for future life: Dr. Mrityunjaya
ರಾಣೇಬೆನ್ನೂರು 12 : ಮಾನವನ ಸ್ವಾರ್ಥ ಮತ್ತು ದುರಾಸೆಯ ಪರಿಣಾಮ ಇಂದು ಅಮೂಲ್ಯವಾದ ನೈಸರ್ಗಿಕ ಸಂಪತ್ತು ನಾಶವಾಗುತ್ತಲ್ಲಿದೆ. ಪರಿಣಾಮ ಇಂದು ಪರಿಸರದಲ್ಲಿ ಅನೇಕ ಏರುಪೇರುಗಳಾಗಿ ಮಾನವ ಸಂತತಿ ನಿರಾಸೆಯಿಂದ ಜೀವನ ಸಾಗಿಸುವಂತಾಗಿದೆ ಅದಕ್ಕಾಗಿ, ಮತ್ತು ಭಾರತದ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಮನೆಗೊಂದು ಶಶಿ ನೆಟ್ಟು ಪರಿಸರ ಸಂರಕ್ಷಿಸಬೇಕಾದ ಇಂದಿನ ಅಗತ್ಯವಿದೆ ಎಂದು ಬಿಎಜೆಎಸ್‌ಎಸ್, ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ. ಎಂ. ಎಂ. ಮೃತ್ಯುಂಜಯ ಹೇಳಿದರು. ಅವರು ಕಾಲೇಜು ಆವರಣದಲ್ಲಿ, ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿ ಮಾತೆ ನಮ್ಮ ಗೀತೆ ಜೀವನದ ಬದುಕು. ಪರಿಸರ ನಾಶವಾದರೆ ಬದುಕೆ ನಾಶವಾದಂತೆ ಎನ್ನುವ ವಾಸ್ತವಿಕ ಸ್ಥಿತಿಯನ್ನು ಅರಿತುಕೊಂಡರೆ ಮಾತ್ರ ಪರಿಸರ ಸಂರಕ್ಷಿಸಲು ಸಾಧ್ಯವಾಗುವುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ, ಪರಶುರಾಮ ಪವಾರ ಅವರು, ಆಧುನಿಕ ಜೀವನ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದರ ಪರಿಣಾಮ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪರಿಸರ ಸಮಾತೋಲನತೆಗೆ ನೈಜತೆಯನ್ನು ಅಳವಡಿಸಿಕೊಂಡು, ಸಾಗಬೇಕಾದ ಇಂದಿನ ಅಗತ್ಯವಿದೆ ಎಂದರು. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದಲ್ಲಿ ಸಮಾಜ ಮತ್ತು ಪ್ರಶಿಕ್ಷಣಾರ್ಥಿಗಳ ಪಾತ್ರ ವಿಷಯ ಕುರಿತು ಉಪನ್ಯಾಸಕ ರಾಜೀವ್ ಕೆ. ಎಂ. ಅವರು ಮಾತನಾಡಿದರು.
ಕಾಲೇಜಿನ ನೂರಾರು ವಿದ್ಯಾರ್ಥಿಗಳು ಆವರಣದಲ್ಲಿ ವಿವಿಧ ಬಗೆಯ ಶಶಿಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯ ಪ್ರಜ್ಞೆ ಮೂಡಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪರವಾಗಿ ಪರಿಸರ ಜಾಗೃತಿ ಘೋಷಣೆಗಳನ್ನು ಮೂಡಿಸಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಪರಿಸರ ಜನಜಾಗೃತಿ ಜಾತಕದಲ್ಲಿ ಕಾಲೇಜಿನ ಉಪನ್ಯಾಸಕರಾದ ಶಿವಕುಮಾರ್ ಬಿಸಲಳ್ಳಿ, ದೇವರಾಜ ಹಂಚಿನಮನಿ, ಹೆಚ್. ಬಿ. ಪಟ್ಟಣಶೆಟ್ಟಿ, ಹೆಚ್.ಐ. ಬ್ಯಾಡಗಿ, ಶ್ರೀಕಾಂತ್ ಗೌಡ ಶಿವಣ್ಣನವರ, ಬಿ.ಕೆ. ಚೌಡಣ್ಣನವರ್ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 