ಉದ್ಯಮಶೀಲತಾ ತಿಳುವಳಿಕೆ ಶಿಬಿರ ಯಶಸ್ವಿ

ಉದ್ಯಮಶೀಲತಾ ತಿಳುವಳಿಕೆ ಶಿಬಿರ ಯಶಸ್ವಿ  Entrepreneurship awareness camp a success

 ಮುಂಡಗೋಡ 21 : ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೆಂದ್ರ (ಸಿಡಾಕ್ ) ಧಾರವಾಡ ಸಿಡಾಕ್, ಕಾರವಾರ ಉದ್ಯಮ ಶೀಲತಾ ತಿಳುವಳಿಕೆ ಶಿಬಿರ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗಾಗಿ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಜಿಲ್ಲಾ ಕೈಗಾರಿಕಾ ಕೇಂದ್ರ,ಕಾರವಾರ  ಲೊಯೋಲ ವಿಕಾಸ ಕೇಂದ್ರ, ಮುಂಡಗೋಡ ಸಿಪಿಎಫ್ ಲೊಯೋಲ ಜನಸ್ಫೂರ್ತಿ ಸ್ವ-ಸಹಾಯ ಸಂಘಗಳ ಟ್ರಸ್ಟ್‌, ರಾಷ್ಟ್ರೀಯ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಮಿಶನ್ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಯಿತು.ಶ್ರೀ.ಶಿವರಾಜಕುಮಾರ ಹೇಳವಿ, ತರಬೇತುದಾರರು, ಸಿಡಾಕ್, ಕಾರವಾರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಆಡಿ ಸಿಡಾಕ್ ಸಂಸ್ಥೆಯ ಸ್ಥಾಪನೆ.  

ಕಾರ್ಯಕ್ರಮಗಳು, ಸರಕಾರವು ಮಹಿಳೆಯಗೆ ಉದ್ಯಮಶೀಲತೆಯಲ್ಲಿ ನೀಡುವ ಪ್ರೋತ್ಸಾಹ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದರು."ನಮ್ಮ ಮಹಿಳೆಯರಿಗೆ ಸ್ವಯಂ ಉದ್ಯೋಗ ಮಾಡುವ ಮನಸ್ಸಿದೆ ಆದರೆ ವ್ಯವಸ್ಥೆಗಳಿಲ್ಲ ಆದರೆ ಈಗ ವಿವಿಧ ಬ್ಯಾಂಕ್ ಗಳು, ಸಿಸಿಎಫ್ ಲೊಯೋಲ ಜನಸ್ಪೂರ್ತಿ ಟ್ರಸ್ಟ್‌, ಸಿಡಾಕ್ ಸಂಸ್ಥೆ ಮಾರ್ಗದರ್ಶನ ಮತ್ತು ಹಣಕಾಸಿನ ವ್ಯಸ್ಥೆಗಳಿವೆ ಅವುಗಳ ಸಹಾಯ ಪಡೆದುಕೊಂಡು, ಏನುಮಾಡಲಿಕ್ಕೆ ಮನಸ್ಸು ಮಾಡಿದ್ದೇವೆ. ಅದನ್ನು ತಲೆಯಲ್ಲಿ ಇಟ್ಟುಕೊಂಡು ಇವತ್ತಿನ ತರಬೇತಿಯ ಪ್ರಯೋಜನ ಪಡೆದುಕೊಳ್ಳಿರಿ ವೃತ್ತಿಯಲ್ಲಿ ಸ್ವಾವಲಂಬನೆ ಸಾಧಿಸಿ ಆರ್ಥಿಕ ಅಭಿವೃದ್ಧಿ ಸಾಧಿಸಿ", ಎಂದು ತರಬೇತಿ ಶೀಬಿರದ ಉದ್ಘಾಟಕರಾಗಿ ಆಗಮಿಸಿದ ಫಾದರ್ ಅರುಣ್ ಲೂಯಿಸ್ ನಿರ್ದೇಶಕರು, ಆಶೀರ್ವಾದ ಸಂಸ್ಥೆ ಬೆಂಗಳೂರುರವರು ಕರೆ ನೀಡಿದರು. 

ಎನ್ ಆರ್ ಎಲ್ ಎಮ್ ತಾಲ್ಲೂಕಿನ ಎಲ್ಲ ಮಹಿಳೆಯರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವ ಸರ್ಕಾರದಿಂದ ಇರುವ ಸೌಲಭ್ಯಗಳನ್ನು ಒದಗಿಸಿ ಕೊಡುವ ಕಾರ್ಯವನ್ನು ತನ್ನ ಗಾಯಮಮಟ್ಟದ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಮೂಲಕ ಮಾಡುತ್ತಿದ್ದೆ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಆಹಾರ ಸಂಸ್ಕರಣೆ ಮತ್ತು ತಯಾರಿಕೆಗಾಗಿ ಯಂತ್ರೋಪಕರಣಗಳ ಖರೀದಿ ಸ್ಥಾಪನೆಗೆ (ಪಿಎಮ್ ಎಫ್‌ಇ) ಪ್ರಧಾನ ಮಂತ್ರಿ ಫೂಡ್ ಎಂಬ್ಲ್ಯೂಪನರ್ ಶಿಪ್ ನಡಿ 50ಅ ಸಹಾಯಧನ, (ಎಮ್ ಇಜಿಪಿ) ಮೇಣದ ಬತ್ತಿ ತಯಾರಿಕೆ, ಹಪ್ಪಳ ಮಜುಂತಾದ ಲಘು ಉದ್ಯಮಘಟಕ ಸ್ಥಾಪನೆಗೆ 30ಅ ಸಹಾಯಧನ, ಕಿರು ಉದ್ಯಮ ಸ್ಥಾಪನೆಗೆ ಕಡಿಮೆ ಬಡ್ಡಿಯಲ್ಲಿ ಹಣಕಾಸು ವ್ಯವಸ್ಥೆ, ಇತ್ತೀಚೆಗೆ ಫೂಡ್ ಟ್ರಂಕ್ ಸ್ಕಿಮ್ ನಲ್ಲಿ ಫೂಡ್ ಟ್ರಂಕ್ ಸ್ಥಾಪಿಸಲು 15 ಲಕ್ಷ ಅನುದಾನ ಒದಗಿಸಲಾಗುವುದು ಹಲವಾರು ಸಬ್ಸಿಡಿ ಯೋಜನೆಗಳನ್ನು ಎನ್ ಆರ್ ಎಲ್ ಎಮ್ ಮೂಲಕ ಒದಗಿಸಲು ಅವಕಾಶಗಳಿದ್ದು ಅದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಲು ಹತ್ತಿರದ ಒಕ್ಕೂಟ ಮತ್ತು ತಾಲ್ಲೂಕಾ ಎನ್ ಆರ್ ಎಲ್ ಎಮ್ ಕಚೇರಿಯನ್ನು ಸಂಪರ್ಕಿಸುವಂತೆ", ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಮಿತನ್ನ ತಾಲ್ಲೂಕಾ ವ್ಯವಸ್ಥಾಪಕರಾದ ಸುಧಿರ ಕರಿಯಣ್ಣನವರ ಮಾಹಿತಿ ನೀಡಿದರು.ಒಂದು ಕೆಲಸ ಕೈಗೆತ್ತಿಕೊಂಡರೆ, ಅದನ್ನು ಕೊನೆಗೊಳಿಸಬೇಕು.  

ನಾನು ಎಲ್ಲಿ ಹೇಗೆ ಮಾಡುತ್ತೇನೆ ಅನ್ನುವುದು ಖಚಿತಗೊಳಿಸಬೇಕು ಮಹಿಳೆಯರು ಮನೆಯಲ್ಲಿದ್ದುಕೊಂಡು ಗೃಹ ಉದ್ಯಮ ಮಾಡಲು ಆನೇಕ ಅವಕಾಶಗಳಿದ್ದು, ಅವುಗಳಲ್ಲಿ ಫಿನಾಯಿಲ್ ತಯಾರಿಕೆ, ಸೋಪ್ ತಯಾರಿಕೆ, ಹಲವಾರು ಉದ್ಯಮಗಳಿದ್ದು, ಅನೇಕ ತರಬೇತಿಗಳಿಗೆ ಮಾರಾಟ ವ್ಯವಸ್ಥೆ, ತಾಂತ್ರಿಕ ಬೆಂಬಲ ಮತ್ತು ವೃತ್ತಿ ಮಾರ್ಗದರ್ಶನ ಮಾಡಲು ಸಿಡಾಕ್ ಸಂಸ್ಥೆ ಇದ್ದು ಅದು ಕೇವಲ ತರಬೇತಿ ಮಾತ್ರವಲ್ಲ ಮಾರುಕಟ್ಟೆ ಉದ್ಯಮ ಶೀಲತೆ ಅಭಿವೃದ್ಧಿ ಪಡಿಸಲು ಸದಾ ಸಿದ್ದವಿದೆ. ದುಡ್ಡನ್ನು ಮ್ಯಾಜಿಕ್ ಮಾಡಿ ಸಂಪಾದಿಸಲು ಸಾಧ್ಯವಿಲ್ಲ. ನಮ್ಮ ಉತ್ಪನ್ನ ಮತ್ತು ಸೇವೆಗಳಿಗೆ ಸಂತೆ ಮತ್ತಿತರ ಕಡೆ ಮಾರಾಟ ಮಾಡಲು ನಾಚಿಕೆ ಪಡದೆ ನಮ್ಮನ್ನು ತೊಡಗಿಸಿಕೊಂಡರೆ ನಮ್ಮ ಅಭಿವೃದ್ಧಿ ಸಾಧ್ಯ ಗುಂಪು ಘಟಕ ಸ್ಥಾಪನೆಯಿಂದ ಹತ್ತಾರು ಮಹಿಳೆಯರ ಮೂಲಕ ಅನೇಕ ಕುಟುಂಬಗಳಿಗೆ ಬದುಕಿನ ಆಸರೆ ಆಗಲು ಸಾಧ್ಯ ಎಲ್ ಏಕೆ ಸಂಸ್ಥೆ ಕಳೇದ ವರ್ಷ 400 ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದ್ದೇವೆ ಈ ದಿನದ ತರಬೇತಿ ಪಡೆದು ನೀವೆಲ್ಲಾ ಸ್ವಯಂ ಉದ್ಯೋಗಿಗಳಾಗಿ ಎಂದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಫಾದರ್ ಅನಿಲ್ ಡಿ’ಸೋಜ ನಿರ್ದೇಶಕರು, ಲೊಯೋಲ ವಿಕಾಸ ಕೇಂದ್ರ ಮುಂಡಗೋಡರವರು ಮಾತನಾಡಿದರು.ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಜಗದೀಶ ಎಲಿಗಾರರವರು ಉದ್ಯಮ ಶೀಲತಾ ಸಾಧನಾ ಪ್ರೇರಣಾ ತರಬೇತಿ ನೀಡಿದರು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಇರುವ ಯೋಜನೆಗಳು ಮತ್ತು ಹಣಕಾಸು ವ್ಯವಸ್ಥೆ ಕುರಿತು ಶ್ರೀ ಮಂಜುನಾಥ ಕುಲಕರ್ಣಿ ಸಂಪನ್ಮೂಲ ವ್ಯಕ್ತಿಗಳಾಗಿ, ಮಾಹಿತಿ ನೀಡಿದರು.  

ಶ್ರೀ ಮುರಳೀಧರ ದೇಶಪಾಂಡೆ ರವರು ಉದ್ಯಮದಲ್ಲಿ ಅವಕಾಶಗಳನ್ನು ಗುರುತಿಸುವುದರ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸರೋಜಾ ಚವ್ಹಾಣ ಅಧ್ಯಕ್ಷರು ಸಿಸಿಎಫ್ ಲೊಯೋಲ ಜನಸ್ಪೂರ್ತಿ ಸ್ವಸಹಾಯ ಸಂಘಗಳ ಟ್ರಸ್ಟ್‌, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕರಾದ ಗೋಪಿಕಾ, ಹಾಜರಿದ್ದರು. ಮಲ್ಲಮ್ಮ ನೀರಲಗಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಂಗಳಾ ಮೋರೆ ಇವರು ಅಥಿತಿ ಗಣ್ಯಮಾನ್ಯರನ್ನು ಸ್ವಾಗತಿಸಿದರು ಹಾಗೂ ಶ್ರೀಮತಿ ನದ್ದೂಬಾಯಿ ಕೊಕರೆ ಅವರು ವಂದಿಸಿದರು. ಒಟ್ಟು 60 ಮಹಿಳೆಯರು ಭಾಗವಹಿಸಿದ್ದರು