ಕುಡಿಯುವ ನೀರಿನ ಸಮಸ್ಯೆ ಆಗದಂತೆ ನಿಗಾ ವಹಿಸಿ: ಯಶವಂತರಾಯಗೌಡ

ಕುಡಿಯುವ ನೀರಿನ ಸಮಸ್ಯೆ ಆಗದಂತೆ ನಿಗಾ ವಹಿಸಿ: ಯಶವಂತರಾಯಗೌಡ  Ensure that there is no problem with drinking water: Yashwantha Rayagowda

ಲೋಕದರ್ಶನ ವರದಿ  

ಇಂಡಿ 22 : ತಾಲೂಕು ಪಂಚಾಯತ ಇಂಡಿ ಸಭಾ ಭವನದಲ್ಲಿ ಇಂಡಿ ಶಾಸಕರಾದ ಯಶವಂತರಾಯಗೌಡ  ಪಾಟೀಲ ರವರ  ಘನ ಅಧ್ಯಕ್ಷತೆಯಲ್ಲಿ ವಿಜಯಪೂರ ಜಿಲ್ಲಾಧಿಕಾರಿ  ಕೆ ಆನಂದ ರವರ ಉಪಸ್ಥಿತಿಯಲ್ಲಿ ತಾಲೂಕ ಆಡಳಿತ ಅಧಿಕಾರಿಗಳ ರವರ ಪ್ರಗತಿ ಪರೀಶೀಲನೆ ಸಭೆ ನಡೆಯಿತು.ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಭೀಮಣ್ಣ ಕವಲಗಿ ಇಂಡಿ ಉಪವಿಭಾಗಾಧಿಕಾರಿ ಗುರುಸ್ವಾಮಿ ಮತ್ತು ಇಂಡಿ ತಹಶೀಲ್ದಾರ್ ಬಿ ಎಸ್ ಕಡಕಭಾವಿ  ಹಾಗೂ ಬಿ ಡಿ ಸೌದೆಗಾರ ಅವರ ಸಮ್ಮುಖದಲ್ಲಿ ಸಭೆ ನಡೆಯಿತು.ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಭೀಮಾಶಂಕರ ಕನ್ನೂರ ರವರು ಸಭೆಗೆ ಸ್ವಾಗತ ಕೋರಿ ಸಭೆಯನ್ನು ಪ್ರಾರಂಭಿಸಿದರು. 

ಈ ಸಂದರ್ಭದಲ್ಲಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ ತಾಲೂಕಿನ ಎಲ್ಲಾ ವಿವಿಧ ಅಧಿಕಾರಿಗಳಿಗೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಸಮಸ್ಯೆ ಆಗದಂತೆ ನೀರನ್ನು ಕಾಯ್ದಿಟ್ಟುಕೊಳ್ಳಲು ಸಂಬಂದಿಸಿದ ಅಧಿಕಾರಿಗಳ ರವರಿಗೆ ಸೂಚನೆ ನೀಡಿದರು.ಹಾಗೂ ಅಧಿಕಾರಿಗಳು ಆತ್ಮ ಸಾಕ್ಷಿಯಾಗಿ  ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಹೇಳಿದರು. ವಿಜಯಪೂರ ಜಿಲ್ಲಾಧಿಕಾರಿ ಆನಂದ ಕೆ ಮಾತನಾಡಿ ಬೇಸಿಗೆಯಲ್ಲಿ ಯಾವುದೇ ನೀರಿನ ಅಭಾವವಾಗದಂತೆ ಸಮರ​‍್ಕವಾಗಿ ಕುಡಿಯುವ ನೀರು ಪೂರೈಸಬೇಕು.  

ನೀರಿನ ಸಮಸ್ಯೆ ಉದ್ಭವಿಸಬಹುದಾದ ಸ್ಥಳಗಳ ಕುರಿತು ಮುಂಚಿತವಾಗಿ ತಿಳಿದುಕೊಂಡು ಮಾಹಿತಿ ಸಲ್ಲಿಸಬೇಕು. ನಗರ ನೀರು ಸರಬರಾಜಿಗೆ ಸಂಬಂಧಿಸಿದ ಅಗತ್ಯ ಮುಜಾಗೃತಾ ಕ್ರಮವಹಿಸಬೇಕು. ಗ್ರಾಮ ಪಂಚಾಯತಿ ಹಂತದಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಶಾಸಕರು ಇನ್ನಿತರ ವಿಷಯಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಜಲಧಾರೆ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಬೇಕು. ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಹಾಗೂ ಇಂಡಿ ತಾಲ್ಲೂಕಿನ ತಡವಲಗಾ ಹಂಜಗಿ ರಾಜನಾಳ ನಿಂಬಾಳ ಸೇರಿದಂತೆ 19 ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಹಾಗೂ ಎಲ್ಲಾ ಕೆರೆಗಳಲ್ಲಿ ಶೇಕಡಾ ಐವತ್ತು ರಷ್ಟು ನೀರು ಸದಾ ಇರಲೇಬೇಕು. 

ಕಾಲುವೆ ಮುಖಾಂತರ ಎಲ್ಲಾ ಕಡೆ ನೀರು ಹರಿಸಿ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಬೇಕು.ಹಾಗೂ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಕೆಪಿಟಿಸಿಎಲ್ ಅಧಿಕಾರಿಗಳ ಜೊತೆ ಹಾಗೂ ಕಂದಾಯ ಮತ್ತು ಉಪ ನೋಂದಣಿ ಅಧಿಕಾರಿ ಮತ್ತು ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳ ಜೊತೆ ಚರ್ಚಿಸಿದರು. ಕಳೆದ ಬಾರಿ ಕೆಲವು ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದ್ದು ಈ ಬಾರಿ ಯಾವುದೇ ಸಮಸ್ಯೆ ಆಗದಂತೆ ಮುಜಾಗ್ರತೆ ಕ್ರಮ ಕೈಗೊಳ್ಳಿ ಎಂದರು. ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಬಾರದಂತೆ ಖುದ್ದಾಗಿ ಪರೀಶೀಲನೆ ನಡೆಸಬೇಕು.

ಎಲ್ಲಾ ಬೋರವೆಲ್ ಗಳ ಮಾಹಿತಿ ಕ್ರೋಢೀಕರಿಸಬೇಕು. ಚಾಲ್ತಿಯಲ್ಲಿರುವ ಬೋರವೆಲ್ ಗಳು ಪರೀಶೀಲನೆ ಮಾಡಬೇಕು. ದುರಸ್ತಿ ಅವಶ್ಯಕತೆ ಇರುವ ಬೋರವೆಲ್ ಗಳ ದುರಸ್ತಿ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ವಿಭಾಗದ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತಾಲೂಕ ಪಂಚಾಯತ ಸಿಬ್ಬಂದಿಗಳು ಇದ್ದರು.