ಆಂಗ್ಲ ಭಾಷಾ ಶಿಕ್ಷಕರ ತರಬೇತಿ ಕಾರ್ಯಗಾರ

ಆಂಗ್ಲ ಭಾಷಾ ಶಿಕ್ಷಕರ ತರಬೇತಿ ಕಾರ್ಯಗಾರ English Language Teacher Training Worker


ರಾಣೆಬೆನ್ನೂರು 21 : ಪ್ರತಿಯೊಂದು ಪಾಠ ಆಧಾರಿತ ಮಗುವಿನ ಅವಲೋಕನವು ಇಂದಿನ ಶಿಕ್ಷಣದಲ್ಲಿ ಮಹತ್ವದ್ದಾಗಿದೆ. ಪ್ರತಿಯೊಂದು ಪಾಠದ ಪರಿಕಲ್ಪನೆಯು ಮುಂದಿನ ಕಲಿಕೆಗೆ ಸಹಾಯವಾಗುತ್ತದೆ. ಪರೀಕ್ಷೆಯಷ್ಟೇ ಮಗುವಿನ ಅಂತಿಮ ಧ್ಯಯವಾಗಬಾರದು. ಪರೀಕ್ಷೆಯ ನಂತರವೂ ಮಗುವಿನ ಮನಸ್ಸಿನಲ್ಲಿ ಉಳಿಯುವಂತೆ ಶಿಕ್ಷಕರು ಬೋಧನಾ ಚಟುವಟಿಕೆಗಳು ಅಳವಡಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಯಕ್ ಹೇಳಿದರು. ಅವರು, ಇತ್ತೀಚೆಗೆ ನಗರದ ಆಂಗ್ಲ ಭಾಷಾ ಶಿಕ್ಷಕರ ವೇದಿಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಆಂಗ್ಲೋ ಉರ್ದು ಪ್ರೌಢಶಾಲೆ ಸಹಯೋಗದಲ್ಲಿ  2025 ಮತ್ತು 2026ನೇ ಸಾಲಿನ ಇಂಗ್ಲಿಷ್ ಭಾಷಾ ಶಿಕ್ಷಕರ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.  ಇಂದಿನ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದ ವ್ಯವಸ್ಥೆ ತಕ್ಕಂತೆ ನಾವು ನಮ್ಮ ಮಕ್ಕಳನ್ನು ಸನ್ನದ ಗೊಳಿಸಬೇಕಾಗಿದೆ.  

ಎಂದ ಅವರು ಆರಂಭದಿಂದಲೇ ಪರೀಕ್ಷೆಯ ತಯಾರಿ ನಡೆಸಬೇಕು ಮಕ್ಕಳ ಭವಿಷ್ಯಕ್ಕಾಗಿ ಪ್ರತಿಯೊಬ್ಬ ಪಾಲಕರು ಕೈ ಜೋಡಿಸಬೇಕು ಎಂದು ಕೋರಿದರು. ಉರ್ದು ಆಂಗ್ಲೋ  ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಏ. ಎಸ್‌. ದಂಡಿನ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಇಂಗ್ಲೀಷ್ ಭಾಷಾ ಶಿಕ್ಷಕರ ವೇದಿಕೆಯ ಗೌರವಾಧ್ಯಕ್ಷ   ಎಸ್‌.ಆರ್‌.ತೆವರಿ, ಸಂಪನ್ಮೂಲ ಶಿಕ್ಷಕರಾದ ವಿ.ವಿ.ವಾಲಿಶೆಟ್ಟರ, ಆರ್‌.ಎಂ. ಬಾರ್ಕಿ, ಶೈಲಜಾ  ಸಂಗಾಪುರ, ಲೋಕೇಶ್ ಲಮಾಣಿ, ಎಸ್‌. ಹೆಚ್‌. ಕಮ್ಮಾರ, ಆನಂದ ದೇವರಮನಿ, ಎಂ.ಜಿ. ಕೋಟ್ಯಪ್ಪನವರ, ಕುಬೇಂದ್ರ ನಾಯಕ, ಅಕ್ಕಮ್ಮ ಮಣ್ಣಮ್ಮನವರ, ಸೂರಲಿಂಗಯ್ಯ, ಶಿವಲೀಲಾ ಮಳಲಿ, ವಿನೋದಾ ಎಸ್‌. ಕೆ. ಮತ್ತಿತರರು ಇದ್ದರು. ಶ್ರೀಮತಿ ಸುಜಾತಾ ಸಂಗಡಿಗರು ಪ್ರಾರ್ಥಿಸಿದರು. ವಿವೇಕಾನಂದ ಜಿ. ಬಿ. ಸ್ವಾಗತಿಸಿದರು. ಇಂಗ್ಲಿಷ್ ಭಾಷಾ ವೇದಿಕೆ ಅಧ್ಯಕ್ಷ ಜಗದೀಶ್ ಮಳಿಮಠ, ಪ್ರಾಸ್ತಾವಿಕವಾಗಿ ಮಾತನಾಡಿದರು.ದಾವಲ್ ಖಾನ್ ನಿರೂಪಿಸಿ, ವಂದಿಸಿದರು. ಕಾರ್ಯಗಾರದಲ್ಲಿ 200 ನೂರಕ್ಕೂ ಹೆಚ್ಚು ಆಂಗ್ಲ ಭಾಷೆ ಶಿಕ್ಷಕರು ಪಾಲ್ಗೊಂಡಿದ್ದರು.