ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಆಚರಿಸಿದ ಇಂಜಿನಿಯರ್‌ಗಳ ದಿನಾಚರಣೆ
Engineers' Day celebrated at Ishwariya University
ಗದಗ 22: ಸಮಾಜ ನಿರ್ಮಾಪಕರು ಮನುಷ್ಯರ ಅವಶ್ಯಕತೆಗಳನ್ನು ಅರ್ಥ ಮಾಡಿಕೊಳ್ಳುವವರು, ಸೇತುವೆ, ಕಟ್ಟಡ, ರಸ್ತೆ, ನೀರಾವರಿ ಯೋಜನೆಗಳನ್ನು ನಿರ್ಮಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುವವರು. ಇಂಜಿನಿಯರ್ ಗಳು ತಮ್ಮ ವಿಶೇಷತೆಯಲ್ಲಿ ಅಧ್ಯಾತ್ಮಿಕತೆಯನ್ನು ಒಗ್ಗೂಡಿಸಿಕೊಂಡು ಹೋದರೆ ಅದು ದೇಶದ ಪ್ರಗತಿಗೆ ಹೊಸ ಶಕ್ತಿಯನ್ನು ನೀಡಬಲ್ಲದು, ಪ್ರಾಮಾಣಿಕತೆ, ಸಮರಾ್ಣಭಾವ ಮತ್ತು ಪರೋಪಕಾರದಂತಹ ಮೌಲ್ಯಗಳುಇಂಜಿನಿಯರ್ ಗಳ ಜೀವನ ಮಟ್ಟವನ್ನು ಹೆಚ್ಚಿಸುತ್ತದೆ. ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ಮೆಡಿಟೇಶನ್ ನ್ನು ಅಭ್ಯಾಸ ಮಾಡುತ್ತಾ ಕಾರ್ಯ ನಿರ್ವಹಿಸಿದರೆ ಮಾನಸಿಕ ಸ್ಥಿತಿಯು ಒತ್ತಡ ಮುಕ್ತ ಆಗುವುದು ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ತಿಳಿಸಿದರು.
ಸಿದ್ಧರಾಮೇಶ್ವರ ನಗರದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಜರುಗಿದ ಇಂಜಿನಿಯರ್ ಗಳ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ದೇಹದ ಆರೋಗ್ಯ ಉತ್ತಮ ಆಗುವ ಕಾರ್ಯದಲ್ಲಿ ಕುಶಲತೆ, ನವೀನತೆ ಹೊರಹೊಮ್ಮುವುದು ಎಂದು ತಿಳಿಸುತ್ತಾ ಸ್ವರ್ಗಿಯ ಭಾರತ ನಿರ್ಮಿಸುವುದರಲ್ಲಿ ಇಂಜಿನಿಯಗಳ ಪಾತ್ರ ಮಹತ್ವಪೂರ್ಣವಾದದ್ದು ಎಂದು ಆಶೀರ್ವದಿಸಿ, ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಗದಗ ಜಿಲ್ಲಾ ಸಿವಿಲ್ ಇಂಜಿನಿಯರ್ ಗಳ ಸಂಘದ ಅಧ್ಯಕ್ಷರಾದ ಬಸವರಾಜ ಮಲ್ಲನವರ ಮಾತನಾಡಿ ಮೆಡಿಟೇಶನ್ ಮಾಡುವ ಅಭ್ಯಾಸ ನಾವು ಅಳವಡಿಸಿಕೊಳ್ಳಲೇಬೇಕು ಎಂದು ಇಲ್ಲಿಯ ಪವಿತ್ರ ವಾತಾವರಣದಲ್ಲಿ ಆಗಮಿಸಿದಾಗ ಅನುಭವವಾಯಿತು ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ನಗರಸಭೆಯ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಕಳೆದ ವರ್ಷ ಗೌರವ ಸಲ್ಲಿಸಿದ್ದೀರಿ, ಈಗ ನಮ್ಮನ್ನು ಕರೆದು ಸನ್ಮಾನಿಸಿ, ನಮ್ಮ ಶಕ್ತಿ, ಉತ್ಸಾಹ ತುಂಬಿ ಆಶಿರ್ವದಿಸಿದ್ದೀರಿ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಪಿರಮಿಡ್ ನಿರ್ಮಾಣದ ಕನ್ಸ್ ಲ್ಟಿಂಗ್ ಇಂಜಿನಿಯರ್ ಆಗಿರುವ ಶಶಿಧರ, ಆರ್ ರೆಡ್ಡಿ,ರಂಗಣ್ಣನವರ್ ಅಸೋಸಿಯೇಟ್ಸ್ ನ ಇಂಜಿನಿಯರ್ ಮಹೇಶ ರಂಗಣ್ಣನವರ್, ಎಮ್.ಟೆಕ್ ಮುಗಿಸಿ ಅನೇಕ ವರ್ಷ ವ್ಯಾಲ್ಯುಯೇಟರ್ ಆಗಿ ಸೇವೆ ಸಲ್ಲಿಸಿ ವರ್ತಮಾನ ಸಮಯದಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದ ಸೇವೆಯಲ್ಲಿ ನಿರತರಾಗಿರುವ ವಿಜಯಕುಮಾರ ಜಿರಿಗನ್ನವರ ಅವರು ಭಾಗವಹಿಸಿದರು.ಈ ಕಾರ್ಯಕ್ರಮದಲ್ಲಿ ಬಿ.ಕೆ ರೇಖಾ ಸ್ವಾಗತಿಸಿದರು, ಬಿ.ಕೆ.ಸಾವಿತ್ರಿ ವಂದಿಸಿದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 