ಸಮಾಜಕ್ಕಾಗಿ ನಿತ್ಯ ಶ್ರಮಿಸುತ್ತಿರುವರನ್ನು ಪ್ರೋತ್ಸಾಹಿಸಿ: ಸುರೇಶ ಆಚಾರ

ಸಮಾಜಕ್ಕಾಗಿ ನಿತ್ಯ ಶ್ರಮಿಸುತ್ತಿರುವರನ್ನು ಪ್ರೋತ್ಸಾಹಿಸಿ: ಸುರೇಶ ಆಚಾರ Encourage those who work tirelessly for society: Suresh Achar

ಲೋಕದರ್ಶನ ವರದಿ  

        ಮುದ್ದೇಬಿಹಾಳ 24: ಇಂದು ತಮ್ಮ ಸ್ವಾರ್ಥಕ್ಕೆ ಸಮಾಜದಲ್ಲಿ ವೈಮನಸ್ಸುಗಳನ್ನು ಸೃಷ್ಠಿಸಿ ಒಗ್ಗಟ್ಟನ್ನು ಒಡೆದು ಆಳುವವರಿಂದ ದೂರ ಉಳಿದು ಸಮಾಜಕ್ಕಾಗಿ ನಿತ್ಯ ಶ್ರಮಿಸುತ್ತಿರುವರನ್ನು ಪ್ರೋತ್ಸಾಹಿಸಿ ಎಂದು ಆಯುರ್ವೇದ ಪಂಡೀತ ಸುರೇಶ ಆಚಾರ ಹೇಳಿದರು.  ಪಟ್ಟಣದ ವಿಶ್ವಕರ್ಮ ಸಮಾಜದ ವತಿಯಿಂದ ಸೋಮವಾರ  ಯುಗಾದಿ ಪಂಚಮಿ ನಿಮಿತ್ಯ ಹಮ್ಮಿಕೊಂಡಿದ ವಿಶ್ವಕರ್ಮರ ಕುಲದೇವತೆ ಕಾಳಿಕಾದೇವಿ ಜಾತ್ರಾ ಮಹೋತ್ಸವದಲ್ಲಿ ಬಾಗವಹಿಸಿ ಅವರು ಮಾತನಾಡಿದರು.  

           ವಿಶ್ವಕರ್ಮರು  ತಮ್ಮ ಪಂಚಕಸುಬುಗಳ ಮೂಲಕ ಇಡಿ ವಿಶ್ವಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಆದರೇ  ಸಮರ​‍್ಕ ಒಗ್ಗಟ್ಟಿಲ್ಲದೇ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ಸಮಾಜವಾಗಿದೆ. ಈ ನಿಟ್ಟಿನಲ್ಲಿ ವಿಶ್ವಕರ್ಮರು ತಮ್ಮ ಪಂಚ ವೃತ್ತಿಯ ಜತೆಗೆ ಸಿರಿವಂತರು, ಬಡವರು ಎನ್ನುವ ಬೇಧ ಭಾವವಿಲ್ಲದೇ ಎಲ್ಲರೂ ಒಂದಾಗಿ ಒಗ್ಗಟ್ಟು ಪ್ರದರ್ಸಿಸುವ ಮೂಲಕ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ಶಿಕ್ಷಣವಂತ ಸಮಾಜ ನಿರ್ಮಿಸುವಲ್ಲಿ ಮುಂದಾಗಬೇಕು  ಎಂದರು.  

ಸೋಮವಾರ ಬೆಳಿಗ್ಗೆ ವಿಶ್ವಕರ್ಮ ಧ್ವಜಾರೋಹಣ, ನಿರ್ಮಾಲ್ಯ, ಕಾಳಿಕಾದೇವಿ ಅಷ್ಟೋತ್ತರ, ಅಲಂಕಾರ ನಡೆಯಿತು ಬಳಿಕ ಸಕಲ ವಾದ್ಯ ಮೇಳ ಹಾಗೂ ಸುಮಂಗಲೆಯರ ಕಳಸದೊಂದಿಗೆ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಪಟ್ಟಣದ ಕಿಲ್ಲಾದಲ್ಲಿರುವ ಕಾಳಿಕಾದೇವಿ ದೇವಸ್ಥಾನದಿಂದ ಮುಖ್ಯ ರಸ್ತೆಯ ಮೂಲಕ ಮುಖ್ಯ ಬಜಾರ ಮಾರ್ಗವಾಗಿ ಹುಡ್ಕೋ ಬಡಾವಣೆಯಲ್ಲಿರುವ ಶಿರವಾಳ ಲೇಓಟನಲ್ಲಿ ನಿಯೋಜಿತ ವಿಶ್ವಕರ್ಮ ದೇವಸ್ಥಾನ ಕಟ್ಟೆಗೆ ತೆರಳಿ ದೇವಿಯ ಪಲ್ಲಕ್ಕಿ ಉತ್ಸವವು ಮಂಗಲವಾದ್ಯಗಳ ಮೆರವಣಿಗೆ ಮತ್ತು ಪುರವಂತರ ಸೇವೆಯೊಂದಿಗೆ ಸಂಭ್ರಮದಿಂದ ನಡೆದು, ಪುನಃ ಕಾಳಿಕಾದೇವಿ ದೇವಸ್ಥಾನಕ್ಕೆ ಬರಲಾಯಿತು. ಕಾಳಿಕಾದೇವಿಗೆ ಸಂಪ್ರದಾಯದಂತೆ ಅಭಿಷೇಕ ಹಾಗೂ ಮಹಾಪೂಜೆ, ವಿಶೇಷ ಅಲಂಕಾರ, ಮಹಾಮಂಗಳಾರುತಿ ನೆರವೇರಿತು. ಬಳಿಕ ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಪ್ರಸಾದ ಸೇವೆ ನಡೆಯಿತು.  

ಸಮಾಜದ ಹಿರಿಯರಾದ ಮನೋಹರ ಶಿರವಾಳ, ಈರಣ್ಣ ಬಡಿಗೇರ (ನಿವೃತ್ತ ಕಂಟ್ರೋಲರ್) ಪ್ರಭು ಪತ್ತಾರ (ಬಾವೂರ)ವಿರುಪಾಕ್ಷೀ ಪತ್ತಾರ, ಗಂಗಾಧರ ಸೋನಾರ, ಈರಣ್ಣ ಹಂದ್ರಾಳ, ಗುಂಡು ಕವಡಿಮಟ್ಟಿ, ಸದಾಶಿವ ಬಡಿಗೇರ,ಬಸವರಾಜ ಪತ್ತಾರ,  ಕಾಳಪ್ಪ ಬಡಿಗೇರ(ಹಳ್ಳೂರ) ಈರಣ್ಣ ಇಂಡಿ, ಮಾಣಿಕ ಪತ್ತಾರ (ಹಳ್ಳೂರ) ಮಾನಪ್ಪ ಪತ್ತಾರ,  ಡಾ, ಗೀರೀಶ ನಂದರಗಿ, ಪ್ರಕಾಶ ಕವಡಿಮಟ್ಟಿ, ಕೇಶವ ಪತ್ತಾರ, ರಾಘವೆಂದ್ರ ಪತ್ತಾರ, ಗುರು ಪತ್ತಾರ ಇಟಗಿ, ವಿಜಯ ಸೋನಾರ, ಸುನೀಲ ಉಕ್ಕಲಿ, ಪುಂಡಲೀಕ  ಪತ್ತಾರ, ಮೌನೇಶ ಇಟಗಿ, ಈರಣ್ಣ ಮಲ್ಲಾಪೂರ, ಮೌನೇಶ ಪತ್ತಾರ, ಮೌನೇಶ ಕಂಡಕ್ಟರ, ಆಕಾಶ ಪತ್ತಾರ ಸೇರಿದಂತೆ ಉತ್ಸವದಲ್ಲಿ ಪಟ್ಟಣದ ಮಹಿಳೆಯರು, ಹಿರಿಯರು, ಮಕ್ಕಳು ಸೇರಿದಂತೆ  ಸಮುದಾಯಗಳ ಭಕ್ತರು ಪಾಲ್ಗೊಂಡಿದ್ದರು.