ಸರ್ಕಾರದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿ; ಡಿಸಿಎಂ ಸೂಚನೆ

ಬದಾಮಿ, ಏ.12, ಕೊರೊನಾ ನಿಯಂತ್ರಣಕ್ಕಾಗಿ ಬದಾಮಿ‌ ತಾಲೂಕು  ಆಡಳಿತ ಕೈಗೊಂಡಿರುವ ಕ್ರಮಗಳ ಕುರಿತು  ಅಧಿಕಾರಿಗಳೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ  ಉಪಮುಖ್ಯಮಂತ್ರಿ ಗೋವಿಂದ  ಎಂ ಕಾರಜೋಳ ಅವರು ಸಭೆ ನಡೆಸಿ, ಸರ್ಕಾರದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ  ಜಾರಿಗೊಳಿಸಿ, ಕೊರೊನಾ ನಿಯಂತ್ರಣ ಗೊಳಿಸಬೇಕು ಎಂದು‌ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ  ಸಂಸದರಾದ ಪಿ.ಸಿ.ಗದ್ದಿಗೌಡರ್ , ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ರಾಜೇಂದ್ರ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ . ಮುಖ್ಯಕಾರ್ಯನಿರ್ವಾಹಣಾಧಿಕಾರಿ,   ವೈದ್ಯಾಧಿಕಾರಿಗಳು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.