ಉದ್ಯೋಗದಿಂದ ಕುಟುಂಬದ ಆರ್ಥಿಕತೆ ವೃದ್ಧಿ: ಶಾಸಕ
Employment boosts family economy: MLA
ಉದ್ಯೋಗದಿಂದ ಕುಟುಂಬದ ಆರ್ಥಿಕತೆ ವೃದ್ಧಿ: ಶಾಸಕ
ಹೂವಿನಹಡಗಲಿ 02: ಕ್ಷೇತ್ರದ ನಿರುದ್ಯೋಗಿ ಯುವಕ/ಯುವತಿಯರ ಉದ್ಯೋಗ ಮೇಳದ ಲಾಭ ಪಡೆದು ಆರ್ಥಿಕವಾಗಿ ಸದೃಢರಾಗಬೇಕು. ಆಗ ಮಾತ್ರವೇ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸುತ್ತದೆ’ ಎಂದು ಶಾಸಕ ಕೃಷ್ಣನಾಯಕ ಹೇಳಿದರು.ಪಟ್ಟಣದ ಜಿಬಿಆರ್ ಕಾಲೇಜಿನ ಆವರಣದಲ್ಲಿ ಮಂಗಳವಾರ ಶಾಸಕ ಕೃಷ್ಣನಾಯಕ ಹುಟ್ಟು ಹಬ್ಬದ ನಿಮಿತ್ತ ಮಂಗಳವಾರ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಾನು ಶಾಸಕನಾಗಿರುವ ಉದ್ದೇಶ ಗ್ರಾಮೀಣ ಭಾಗದ ಜನರಿಗೆ ಶಿಕ್ಷಣ, ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವುದರ ಜತೆಗೆ ಮಹಿಳೆಯರಿಗೆ ಸಾಲ, ಸೌಲಭ್ಯ ತರಬೇತಿಯನ್ನು ನೀಡಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ನೆರವು ನೀಡುವುದಾಗಿ ಹೇಳಿದ ಅವರ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ’ಈ ಉದ್ಯೋಗ ಮೇಳದಲ್ಲಿ ರಾಜ್ಯದ ಮತ್ತು ಹೊರ ರಾಜ್ಯಗಳಿಂದ ಹಲವು ಉದ್ಯೋಗದಾತ ಕಂಪನಿಗಳು ಪಾಲ್ಗೊಂಡಿವೆ. ತಾಲ್ಲೂಕು ಹಾಗೂ ನೆರೆಯ ಜಿಲ್ಲೆಗಳ 1400 ಮಂದಿ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. 300 ಜನರಲ್ಲಿ ತಾಲೂಕಿನ ವಿಕಲಚೇತನ ಗಂಡ-ಹೆಂಡತಿಗೆ ಉದ್ಯೋಗ ನೆಮಕಾತಿ ಆದೇಶ ಪಡೆದಿದ್ದಾರೆ. ಈ ಮೇಳದಲ್ಲಿ ಕೆಲಸ ಪಡೆಯುವಲ್ಲಿ ಹಿನ್ನಡೆ ಅನುಭಸಿದರೂ ಚಿಂತೆ ಬೇಡ. ಅವರಿಗೆ ಬೇರೆ-ಬೇರೆ ಸಂಸ್ಥೆಗಳ ಮೂಲಕ ಕೌಶಲ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.ಜಿಬಿಆರ್ ಕಾಲೇಜಿನ ಆಡಳಿತ ಮಂಡಳಿ ಅದ್ಯಕ್ಷ ಸಿ. ಮೋಹನ್ ರೆಡ್ಡಿ, ಕಾರ್ಯಕ್ರಮ ಅದ್ಯಕ್ಷತೆ ವಹಿದ್ದ ವಿವಿ ಸಂಘದ ಕಾರ್ಯದರ್ಶಿ ಅರವಿಂದ್ ಪಾಟೀಲ್ ಮಾತನಾಡಿದರು.
ಜಿಬಿಆರ್ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್.ಪಾಟೀಲ್ ಸ್ವಾಗತಿಸಿದರು. ಸಭೆಯಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಕೆ.ಎಂ.ಉದಾಸಿ, ಬೀರಬ್ಬಿ ಬಸವರಾಜ್,ಬಿಜೆಪಿ ಜಿಲ್ಲಾದ್ಯಕ್ಷ ಸಂಜೀವ ರೆಡ್ಡಿ,ಜಿಲ್ಲಾ ಉಪಾಧ್ಯಕ್ಷ ಹಣ್ಣಿ ಶಶಧರ,ಹೆಚ್.ಪೂಜಪ್ಪ, ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಪೂಜಾರ, ಮುಖಂಡರಾದ ಕೋಡಿಹಳ್ಳಿಮುದುಕಪ್ಪ, ವಾರದ ಗೌಸ ಮೊಹಿದ್ದೀನ್, ಕೋಟೆಪ್ಪ,ಕೊಟ್ರೇಶ ನಾಯ್ಕ ಇದ್ದರು. ಉದ್ಯೋಗ ಹರಿಸಿ ಜಿಲ್ಲೆಯ ನಾನಾ ಕಡೆಯಿಂದ ಸಾವಿರಾರು ಯುವಕ, ಯುವತಿಯರು ಪಾಲ್ಗೊಂಡಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 