ನವದೆಹಲಿ, ಮಾರ್ಚ್ 19, ಕೊರೊನಾವೈರಸ್‌ನ ಹರಡುವಿಕೆ ತಡೆಯ ದೃಷ್ಟಿಯಿಂದ ತನ್ನ ಅಧೀನದ ಕಚೇರಿಗಳಿಗೆ ಭೇಟಿ ನೀಡದಂತೆ ಜನರಿಗೆ ಮನವಿ ಮಾಡಿರುವ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ), ಪರ್ಯಾಯ ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದೆ.
ಜನರು ದೂರವಾಣಿ ಸಂಖ್ಯೆ 011-27371136 ಮೂಲಕ ವಿಚಾರಣೆ ನಡೆಸಬಹುದಾಗಿದೆ. ಅಲ್ಲದೆ, ಕುಂದುಕೊರತೆಗಳ ಪರಿಹಾರಕ್ಕೆ ಇ-ಮೇಲ್ ವಿಳಾಸ ro.delhicentral@epfindia gov.in ವನ್ನೂ ಸಂಪರ್ಕಿಸಬಹುದು ಎಂದು ದೆಹಲಿ ಇಪಿಎಫ್‌ಒ (ಕೇಂದ್ರ) ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಅಲೋಕ್ ಯಾದವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿರುವ ಇಪಿಎಫ್‌ಒ, ವಾಟ್ಸಪ್ ಸಂದೇಶಗಳಿಗಾಗಿ 8595520478 ಸಂಖ್ಯೆಯನ್ನು ಸಹ ಒದಗಿಸಿದೆ. ಎಲ್ಲಾ ಇಪಿಎಫ್‌ಒ ಕಚೇರಿಗಳಲ್ಲಿ ಸ್ಯಾನಿಟೈಸರ್ ಮತ್ತು ಮುಖಗವಸುಗಳು ಲಭ್ಯವಿವೆ ಎಂದು ಹೇಳಿಕೆ ತಿಳಿಸಿದೆ. ಕೊರನವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರಣಾಂತಿಕ ರೋಗ ತಡೆಗೆ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.