ಹನಮಸಾಗರ ಮುಖ್ಯ ಶಿಕ್ಷಕನ ಬೀಳ್ಕೊಡುಗೆಯಲ್ಲಿ ಭಾವುಕ ಕ್ಷಣ
Emotional moment at the farewell of Hanamasagara Headmaster
ಹನುಮಸಾಗರ 21: ಸಮೀಪದ ಗುಡದೂರಕಲ್ಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಶಾಲೆಯ ಮುಖ್ಯ ಶಿಕ್ಷಕ ರಾಜಕುಮಾರ್ ನಾಯಕ ವರ್ಗಾವಣೆಯಾದ ಪ್ರಯುಕ್ತ ಅವರಿಗೆ ಶಾಲೆಯಲ್ಲೇ ಶನಿವಾರ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೆಚ್ಚಿನ ಶಿಕ್ಷಕರು ವರ್ಗಾವಣೆಯಾದ್ದ ವಿಷಯ ತಿಳಿದು ಬೇಸರಗೊಂಡ ಮಕ್ಕಳು ತರಗತಿಯಲ್ಲೇ ಗೋಳಾಡಿ ಅತ್ತರು.ಕಾರ್ಯಕ್ರಮ ಮುಗಿಸಿ ಕೊಠಡಿಯಿಂದ ಹೊರ ಬರುತ್ತಿದ್ದಂತೆಯೇ ಶಿಕ್ಷಕರನ್ನು ಬಿಗಿದಪ್ಪಿಕೊಂಡು ಕೈಮುಗಿದು ’ನಮ್ಮ ಶಾಲೆಯಿಂದ ಹೋಗಬೇಡಿ. ನೀವು ಇಲ್ಲಿಯೇ ಇರ್ರಿ’ ಎಂದು ಕಣ್ಣೀರು ಹಾಕಿದರು.
ರಾಜಕುಮಾರ್ ಶಿಕ್ಷಕರನ್ನು ಮಕ್ಕಳು ಮುಗಿಬಿದ್ದು ,ಅಪ್ಪಿಕೊಂಡು ಅಳುತ್ತಿರುವುದನ್ನು ನೋಡಿದ ಸಹಾ ಶಿಕ್ಷಕರ ಕಣ್ಣಲ್ಲೂ ನೀರು ಹರಿಯಿತು.ನಮಗೆ ಚೆನ್ನಾಗಿ ಪಾಠ ಮಾಡ್ತೀರಿ ದಯವಿಟ್ಟು ನೀವು ಹೋಗಬೇಡಿ, ಇಲ್ಲೇ ಇರಿ ಸರ್ ಎಂದು ಶಾಲೆಯ ವಿದ್ಯಾರ್ಥಿಗಳು ಶಿಕ್ಷಕನ ಬಳಿ ಕಣ್ಣೀರು ಹಾಕುತ್ತಾ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತುಂಬಿಬಂತು.ಹಿರಿಯ ಶಿಕ್ಷಕ ಮುದೆಗೌಡ ಗೌಡ್ರು ಮಾತನಾಡುತ್ತಾ ನಮ್ಮ ಶಾಲೆಯ ಗೌರವಾನ್ವಿತ ಮುಖ್ಯ ಶಿಕ್ಷಕರಾಗಿದ್ದ ರಾಜಕುಮಾರ್ ನಾಯಕ ಅವರ ವರ್ಗಾವಣೆ ನಮಗೆ ಒಂದು ಕಡೆ ದುಃಖಕರವಾದರೂ, ಇನ್ನೊಂದು ಕಡೆ ಅವರ ಪ್ರಗತಿಗೆ ಸಂತೋಷಕರವಾಗಿದೆ.
ಅವರ ನೇತೃತ್ವದಲ್ಲಿ ನಮ್ಮ ಶಾಲೆ ಹಲವಾರು ಸಾಧನೆಗಳನ್ನು ಕಂಡಿದೆ. ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಏರಿಕೆ, ಶಿಸ್ತು ಮತ್ತು ಉತ್ತಮ ವಾತಾವರಣ ನಿರ್ಮಾಣವು ಅವರ ವಿಶೇಷ ಕೊಡುಗೆ. ಅವರ ಹೊಸ ಕಾರ್ಯಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ.ಸಹಾ ಶಿಕ್ಷಕ ಹನುಮಂತಪ್ಪ ಮದರಿ ಮಾತನಾಡಿ ನಿಮ್ಮ ಕೈಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನಮಾಡಿ ಸಮಾಜದಲ್ಲಿ ಉತ್ತಮ ಸ್ಥಾನಗಳಲ್ಲಿ ಕಾರ್ಯನಿರ್ವಹಿ ಸುತ್ತಿರುತ್ತಾರೆ. ಅವರುಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರಾಥಮಿಕ ಶಾಲೆಯಲ್ಲಿ ನೀವು ಕಲಿಸಿದ ಮೌಲ್ಯ,ಕಲಿಸಿದ ಪಾಠವನ್ನು ಜೀವನ ಪರ್ಯಂತ ಮಕ್ಕಳು ಮರೆಯುವುದಿಲ್ಲ ಎಂದರು.
ಎಸ್ ಡಿ ಎಮ್ ಸಿ ಅಧ್ಯಕ್ಷ ಶಿವಾನಂದಪ್ಪ ಯರಗೇರ ಸದಸ್ಯರಾದ ಶರಣಪ್ಪ ಗೊಲ್ಲರ ರಾಜ್ಯ ಪ್ರಾಥಮಿಕ ಶಿಕ್ಷಕ ಸಂಘದ ನಿರ್ದೇಶಕ ಚಂದ್ರ್ಪ ಹಕ್ಕಿ , ಅಮರೇಶ ತಮ್ಮನವರ , ನಾಗನಗೌಡ ಪೊಲೀಸ್ ಪಾಟೀಲ,ಶಂಕರ ಉಪ್ಪಾರ,ಡಿ.ಎನ್.ಪಾಟೀಲ್, ಮುದಕಪ್ಪ ಹುಣಿಶ್ಯಾಳ, ರಾಜಪ್ಪ ವಣಗೇರಿ, ವಿರೇಶ ಕೊಪ್ಪಳ, ಸದಾಶಿವಯ್ಯ ಹಿರೇಮಠ, ಮಂಜುನಾಥ ಅಳ್ಳೊಳ್ಳಿ.ಗೋಪಾಲಗೌಡ್ರ ದಳಪತಿ,ಯಲ್ಲಪ್ಪ, ಶರಣಪ್ಪ ಕುರಿ,ಶರಣಯ್ಯ, ದ್ಯಾಮಣ್ಣ ಗೊಲ್ಲರ, ದೇವರಾಜ್, ಗಂಗಪ್ಪ ಜಾಲಿಹಾಳ, ಮಲ್ಲಮ್ಮ,ಸತೀಶ್ ಕುರಿ, ಪರಶುರಾಮ ವಣಗೇರಿ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 