ವೃತ್ತಿ ಜೀವನಕ್ಕೆ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಭಾವನಾತ್ಮಕ ಬುದ್ಧಿಮತ್ತೆ ಅಗತ್ಯ--ಪ್ರೊ. ಎಂ.ಎಸ್‌.ಖೊದ್ನಾಪೂರ

 ವೃತ್ತಿ ಜೀವನಕ್ಕೆ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಭಾವನಾತ್ಮಕ ಬುದ್ಧಿಮತ್ತೆ ಅಗತ್ಯ--ಪ್ರೊ. ಎಂ.ಎಸ್‌.ಖೊದ್ನಾಪೂರ Emotional intelligence is essential for career and organizational development--Prof. M.S. Khodnapur

ಲೋಕದರ್ಶನ ವರದಿ 


        ವಿಜಯಪುರ  07: ಕಾರ​‍್ೋರೇಟ್ ಜಗತ್ತಿನಲ್ಲಿ ಉದ್ಯೋಗಿಗಳು ತಮ್ಮ ಸ್ವಂತ ಭಾವನೆಗಳನ್ನು ಅರ್ಥೈಸಿಕೊಂಡು ಇತರ ಸಹದ್ಯೋಗಿಗಳ ಶಕ್ತಿ-ಸಾಮರ್ಥ್ಯ ಗುರುತಿಸಿ, ಒತ್ತಡ ನಿವಾರಣೆ, ಪರಿಣಾಮಕಾರಿ ಸಂವಹನ, ಸಹಾನುಭೂತಿ ಮತ್ತು ಸವಾಲುಗಳನ್ನು ನಿಭಾಯಿಸಲು ಭಾವನಾತ್ಮಕ ಬುದ್ಧಿಮತ್ತೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.  ಅವರು ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ ಗೌತುಮನಗರದ ಸುಶೀಲಾಮಾಯಿ ಕಾಳೆ ಕಾಲೇಜಿನಲ್ಲಿ ದಿನಾಂಖಕ: 06-03-2026 ರಂದು ಆಯೋಜಿಸಿದ್ದ “ಭಾವನಾತ್ಮಕ ಬುದ್ಧಿಮತ್ತೆ” ಎಂಬ ವಿಷಯ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕೀರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ಉದ್ಯೋಗಿಯು ತನ್ನ ಆತ್ಮ ಅರಿವು, ಸ್ವಯಂ ನಿಯಂತ್ರಣ,  ಸಾಮಾಜಿಕ ಅರಿವು ಮತ್ತು ಸಂಬಂಧ ನಿರ್ವಹಣೆಯಂತಹ ಭಾವನಾತ್ಮಕ ಬುದ್ಧಿಮತ್ತೆಯ ಅಂಶಗಳು ನಾಯಕತ್ವ ಮತ್ತು ಉದ್ಯೋಗಿಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಮತ್ತು ಯಶಸ್ವಿಗೆ ಅಡಿಪಯವಾಗಲಿವೆ. ಕಂಪನಿಯಲ್ಲಿ ಸಹದ್ಯೋಗಿಗಳ ಸಮಸ್ಯೆಗಳು, ಭಾವನೆಗಳು, ಮಾನಸಿಕ ಆಲೋಚನೆ, ಚಿಂತನೆ, ಕೆಲಸದ ಸಂತೃಪ್ತಿ, ಗುಣಮಟ್ಟದ ಕಾರ್ಯನಿರ್ವಹಣೆಗೆ ಉತ್ತಮ ಪರಿಸರವನ್ನು ನಿರ್ಮಿಸುವುದರ ಮೂಲಕ ಭಾವನಾತ್ಮಕ ಸಂಬಂಧವನ್ನು ಹೊಂದಬೇಕು.

         ಇಂದಿನ ಆಧುನಿಕ ಜಗತ್ತಿನಲ್ಲಿ ವಿಷಯ ಬುದ್ದಿಮತ್ತೆಗಿಂತಲೂ ಭಾವನಾತ್ಮಕ ಬುದ್ಧಿಮತ್ತೆಯು ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಕಾರ​‍್ೋರೇಟ್ ಕ್ಷೇತ್ರದಲ್ಲಿ ಕೇವಲ ತಾಂತ್ರಿಕ ಕೌಶಲ್ಯಗಳು ಸಾಲದು. ಸಂಸ್ಥೆಯು ಕೆಲಸಗಾರರಿಗೆ ಕೆಲಸದಲ್ಲಿನ ತಾಂತ್ರಿಕ ಜ್ಞಾನ, ಅನುಭವ ಮತ್ತು ಕೌಶಲ್ಯಯುತವಾದ ವಿಷಯಗಳನ್ನು ಪರಸ್ಪರ ಹಂಚಿಕೊಂಡು ಸಹಾಯ, ಸಹಕಾರ, ಸಮನ್ವಯತೆ ಮತ್ತು ಕೂಡಿ-ಕೆಲಸ ಮಾಡುವ, ತೊಂದರೆಯಲ್ಲಿದ್ದಾಗ ಸಹಾನುಭೂತಿ ತೋರಿದಾಗ ಮಾತ್ರ ತಮ್ಮ ಮತ್ತು ಸಹದ್ಯೋಗಿಗಳ ಫಲಿತಾಂಶ ಪೂರಿತ ಕೆಲಸ ನಿರ್ವಹಣೆ ಮತ್ತು ವೃತ್ತಿ ಜೀವನಕ್ಕೆ ಮತ್ತು ಸಂಸ್ಥೆಯ ಅಭಿವೃದ್ಧಿಗೆ ಮೂಲಾಧಾರವಾಗಿದೆ ಎಂದರು.  

ಈ ಗೋಷ್ಠಿಯ ವೇದಿಕೆಯ ಮೇಲೆ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಪ್ರಶಾಂತ ಬೋರೆ, ಪ್ರಾಂಶುಪಾಲೆ ಡಾ. ವಿಜಯಾ ಗುರುಸಲ್, ವಿಶಾಲ ಜಾಧವ, ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವಿನೋದ ಪೋತೆ ಇನ್ನಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ರಾಷ್ಟ್ರೀಯ ವಿಚಾರಸಂಕೀರಣದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 200 ಕ್ಕೂ ಹೆಚ್ಚು ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಗಳು ಭಾಗವಹಿಸಿದ್ದರು.