ಅಂಗವಿಕಲ ದಂಪತಿಗೆ ತುರ್ತು ನೆರವು

ಅಂಗವಿಕಲ ದಂಪತಿಗೆ ತುರ್ತು ನೆರವು  Emergency aid for a couple with disabilities


ಹೂವಿನಹಡಗಲಿ 31 : ಪಟ್ಟಣದ ಕಾಯ್ಕನಗರದಲ್ಲಿ ವಾಸವಿದ್ದ ಅಂಗವಿಕಲ ದಂಪತಿಯ ಶೆಡ್ ಸುಟ್ಟು ಹಾನೀಗೀಡಾದ ಹಿನ್ನೆಲೆಯಲ್ಲಿ ಶಾಸಕ ಕೃಷ್ಣ ನಾಯಕ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ತುರ್ತು ನೆರವು ನೀಡಿದವು.  

ಶಾಸಕ ಕೃಷ್ಣ ನಾಯಕ್ ಅವರು ?50 ಸಾವಿರ ನಗದು ವೈಯಕ್ತಿಕವಾಗಿ ನೀಡಿ, ಸರ್ಕಾರದಿಂದ ದೊರೆಯಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಧರ್ಮಸ್ಥಳ ಸಂಸ್ಥೆಯ ಜನಜಾಗೃತಿ ಸಮಿತಿ ವತಿಯಿಂದ ಹಾಸಿಗೆ, ಹೊದಿಕೆ, ಬಟ್ಟೆ ಸೇರಿದಂತೆ ಅಗತ್ಯ ಗೃಹೋಪಯೋಗಿ ಸಾಮಗ್ರಿಗಳನ್ನು ವಿತರಿಸಲಾಯಿತು.  

ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಎಸ್‌.ಎಂ. ಅಶೋಕ್ ಅವರು ಕುಟುಂಬಕ್ಕೆ ಒಂದು ತಿಂಗಳ ದಿನಸಿ ಸಾಮಗ್ರಿಗಳನ್ನು ನೀಡಿದರು. ಮಹಾದೇವ ತಾತ ಗ್ಯಾಸ್ ಏಜೆನ್ಸಿಯ ಮುರುಗೇಶ್ ಅವರು ಒಂದು ಸಿಲಿಂಡರ್ ಹಾಗೂ ರೆಗ್ಯುಲೇಟರ್ ಒದಗಿಸಿದರು. ಅಂಗವಿಕಲರ ಸಂಘದ ಅಧ್ಯಕ್ಷ ಎಸ್‌. ಚಂದ್ರ​‍್ಪ ತಳಕಲ್ ಅವರು ಸ್ಟೌವ್ ನೀಡಿದರು.  

ಎಸ್‌ಎಂಎನ್ ಫೌಂಡೇಷನ್ನ ಶಿವರಾಜ್ ಅವರು ಸಹ ನೆರವಿನ ಹಸ್ತ ಚಾಚುವುದಾಗಿ ತಿಳಿಸಿದರು. ಧರ್ಮಸ್ಥಳ ಸಂಸ್ಥೆಯ ಜನಜಾಗೃತಿ ಸಮಿತಿ ಸದಸ್ಯರಾದ ಕೋಡಿಹಳ್ಳಿ ಕೋಟ್ರೇಶ್, ಸಂತೋಷ್ ಜೈನ್, ಜೆ. ಶಿವರಾಜ್, ವರ್ಕನಹಳ್ಳಿ ಸುಭಾಷ್, ಯೋಜನಾಧಿಕಾರಿ ಸುಬ್ರಹ್ಮಣ್ಯ ಹಾಗೂ ವಿಕಲಚೇತನರ ಮಂಜುನಾಥ ಉಪಸ್ಥಿತರಿದ್ದರು.