ವಿದ್ಯುತ್ ಅವಘಡ 20 ಎಕ್ಕರ ಕಬ್ಬಿನ ಗದ್ದೆ ಬೆಂಕಿಗಾಹುತಿ
Electrical fault causes fire in 20 acres of sugarcane field
ಕಾಗವಾಡ: ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಕಬ್ಬಿನ ಬೆಳೆ ಹಾನಿಯಾಗಿರುವ ಘಟನೆ ಬುಧವಾರ ದಿ. 05 ರಂದು ತಾಲೂಕಿನ ಉಗಾರ ಬಿ.ಕೆ. ಗ್ರಾಮದಳ ಸರಹದ್ದಿನಲ್ಲಿ ಸಂಭವಿಸಿದೆ.
ಮದ್ಯಾಹ್ನದ ಸುಡು ಬಿಸಿಲಿನ ವೇಳೆಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ನೋಡು ನೋಡುತ್ತಿದ್ದಂತೆಯೇ ಸುಮಾರು 20 ಎಕ್ಕರ ಕಬ್ಬಿನ ಗದ್ದೆ ಸುಟ್ಟು ಕರಕಲಾಗಿದೆ. ಉಗಾರ ಬಿ.ಕೆ. ಗ್ರಾಮದ ಭರತೇಶ ಖಂಡೇರಾಜುರೆ, ಚಂದ್ರಕಾಂತ ಕಿವಾಟೆ, ಧರೆಪ್ಪ ಕುಸನಾಳೆ ಮಲ್ಲು ಕುರುಬರ, ಅಣ್ಣು ಕುರಬರ ಹಾಗೂ ಮಹಾದೇವ ಕುರುಬರ ಇವರಿಗೆ ಸೇರಿದ ಸುಮಾರು 20 ಎಕರೆ ಕಬ್ಬು ಸುಟ್ಟು ಕರಕಲಾಗಿವೆ. ಸುಮಾರು 25 ಲಕ್ಷ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಕಬ್ಬಿನ ಗದ್ದೆಗೆ ಬೆಂಕಿ ಅವಘಡ ಸಂಬವಿಸುತ್ತಿದ್ದಂತೆ ಉಗಾರ ಹಾಗೂ ಅಥಣಿ ಅಗ್ನಿಶಾಮಕ ದಳಕ್ಕೆ ದೂರವಾಣಿಯ ಮೂಲಕ ತಿಳಿಸುತ್ತಿದ್ದಂತೆ ಅವರು ಆಗಮಿಸಿ ಅಗ್ನಿ ನಂದಿಸಲು ಪ್ರಯತ್ನಿಸಿದರಾದರೂ ಅಷ್ಟೊತ್ತಿಗೆ ಸಾಕಷ್ಟು ಕಬ್ಬು ಸುಟ್ಟು ಅಪಾರ ಪ್ರಮಾಣದ ಹಾನಿಯಾಗಿತ್ತು. ಆದರೂ ಸಹ ಅಗ್ನಿಶಾಮಕದಳದವರು ಪಕ್ಕಲ್ಲಿದ್ದ ಹಲವಾರು ಎಕರ ಪ್ರದೇಶಕ್ಕೆ ಬೆಂಕಿ ಹತ್ತದಂತೆ ನೀರು ಹೊಡೆಯುವುದರ ಮೂಲಕ ಹೆಚ್ಚಿನ ಅನಾಹುತಗಳಾಗದಂತೆ ತಡೆಯುವಲ್ಲಿ ಯಶಸ್ವಿಯಾದ ರು.
ಕಬ್ಬಿನ ಗದ್ದೆಯ ಮೇಲಿಂದ ಹಾದು ಹೋದ ಹಳೆಯ ವಿದ್ಯುತ್ ತಂತಿಗಳು ನೇತಾಡುತ್ತಿರುವುದರಿಂದ ಒಂದಕ್ಕೊಂದು ತಾಗಿ ಶಾರ್ಟ ಸರ್ಕಿಟ್‌ನಿಂದ ಬೆಂಕಿ ತಗುಲಿದೆ. ತಮ್ಮ ಹೊಲದಲ್ಲಿರುವ ತಂತಿಗಳು ಕೆಳ ಮಟ್ಟದಲ್ಲಿ ನೇತಾಡುತ್ತಿರುವುದೇ ಅಗ್ನಿ ಅವಘಡಕ್ಕೆ ಕಾರಣ ಎಂದು ಅಲ್ಲಿಯ ರೈತರು ದೂರಿದ್ದಾರೆ. ಸ್ಥಳಕ್ಕೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಭೇಟ್ಟಿ ನೀಡಿ ಪರೀಶೀಲಿಸಿದರು. ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 