ಜಿಲ್ಲಾ ಸವಿತಾ ಸಮಾಜ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
Election of office bearers of District Savita Samaj Employees Association
ಹೊಸಪೇಟೆ 25: ಹೊಸಪೇಟೆಯಲ್ಲಿ ಭಾನುವಾರ ನಡೆದ ಜಿಲ್ಲಾ ಸವಿತಾ ಸಮಾಜ ನೌಕರರ ಸಂಘದ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ನೂತನ ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರ ಡಿ.ರಾಮಲಿಂಗಪ್ಪ,
ಜಿಲ್ಲಾ ಅಧ್ಯಕ್ಷರನ್ನಾಗಿ ನಿವೃತ್ತ ಎಎಸ್ ಐ ಎಚ್.ಶ್ರೀನಿವಾಸ್, ಖಜಾಂಚಿಯಾಗಿ ಸಾರಿಗೆ ಇಲಾಖೆ ನಿವೃತ್ತ ನೌಕರ ಎಸ್. ಮನೋಹರ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಪತ್ರಕರ್ತ ವೀರೇಂದ್ರ ನಾಗಲದಿನ್ನಿ,
ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮರಿಯಮ್ಮನಹಳ್ಳಿಯ ನಿವೃತ್ತ ಶಿಕ್ಷಕ ಕೆ.ನಾಗರಾಜ, ಕೂಡ್ಲಿಗಿ ತಾಲೂಕಿನ ನ್ಯಾಯಾಂಗ ಇಲಾಖೆಯ ಕೃಷ್ಣವೇಣಿ, ಹಗರಿಬೊಮ್ಮನಹಳ್ಳಿಯ ರಾಮಕೃಷ್ಣ, ಕೊಟ್ಟೂರಿನ ದೈಹಿಕ ಶಿಕ್ಷಕ ರಮೇಶ್ ಹಾಗೂ ಹೂವಿನಹಡಗಲಿಯ ಉಪನ್ಯಾಸಕಿ ಕು.ನಾಗವೇಣಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇನ್ನುಳಿದ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲು ನಿರ್ಣಯಿಸಲಾಯಿತು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಸಮಾಜದ ಪ್ರಮುಖರಾದ ಸೂರ್ಯನಾರಾಯಣ, ಮುಖ್ಯ ಶಿಕ್ಷಕಿ ಪಿ.ಎಲ್. ಉಷಾ, ರಾಜಶೇಖರ್, ಎಎಸ್‌ಐ ಸುರೇಶ್, ಮಹೇಶ್, ಗೀರೀಶ್, ಸಂಧ್ಯಾರಾಣಿ, ಡಾ.ಗುಣಪ್ರಿಯ, ದೀಪಕ್, ಪತ್ರಕರ್ತ ಸಿ.ಕೆ.ನಾಗರಾಜ ಸೇರಿದಂತೆ ಸಮಾಜದ ಮುಖಂಡರು, ಸಮಾಜದ ನೌಕರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 