ಪದಾಧಿಕಾರಿಗಳ ಆಯ್ಕೆ, ಬೀಳ್ಕೊಡುಗೆ ಸಮಾರಂಭ

ಪದಾಧಿಕಾರಿಗಳ ಆಯ್ಕೆ, ಬೀಳ್ಕೊಡುಗೆ ಸಮಾರಂಭ Election of office bearers, farewell ceremony

ಕೊಲ್ಹಾರ 25: ಕಂದಾಯ ಇಲಾಖೆ ಕೊಲ್ಹಾರ ತಾಲ್ಲೂಕು ಗ್ರಾಮ ಸಹಾಯಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ನಾಡ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಈ ಪದಾಧಿಕಾರಿಗಳ ಆಯ್ಕೆ ಹಾಗೂ ಶ್ರೀಶೈಲ ಧರಿಯಪ್ಪ ನರಿಯವರ, ನಿವೃತ್ತಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ತಹಶೀಲ್ದಾರ ಸಂತೋಷ ಮ್ಯಾಗೇರಿ, ಅತಿಥಿಗಳಾಗಿ ಕಂದಾಯ ನೀರೀಕ್ಷಕ ಪಿ ಎಸ್ ಹುಡೇದ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ತಾಲ್ಲೂಕು ಅಧ್ಯಕ್ಷರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಹಾಗೂ ಗ್ರಾಮ ಸೇವಕರ ತಾಲ್ಲೂಕು ಅಧ್ಯಕ್ಷ ಶ್ರೀಶೈಲ ಧರಿಯಪ್ಪ ನರಿಯವರ ಬೀಳ್ಕೊಡುಗೆ ಸಮಾರಂಭ ನಡೆಯಿತು. 

ನೂತನ ತಾಲ್ಲೂಕು ಗ್ರಾಮ ಸೇವಕರ ಸಂಘದ ಅಧ್ಯಕ್ಷರಾಗಿ ರಮೇಶ ಶೇಖಪ್ಪ ಬಾಡಗಂಡಿ,ಗೌರವ ಅಧ್ಯಕ್ಷ ರಾಗಿ ಶೆಂಕ್ರೆಮ್ಮ ರಾಚಪ್ಪ ಪಡಸಲಗಿ, ಉಪಾಧ್ಯಕ್ಷ ಹಣಮಂತ ಹಿರಗಪ್ಪ ತೆಗ್ಗಿ, ಕಾರ್ಯದರ್ಶಿ ಶ್ರೀಶೈಲ ಲಕ್ಷ್ಮಣ ವಾಲಿಕಾರ, ಖಜಾಂಚಿ ಸಿದ್ದಪ್ಪ ಅಡಿವೆಪ್ಪ ಪೂಜಾರಿ ಹಾಗೂ ಸದಸ್ಯರ ಆಯ್ಕೆಯಾಗಿದ್ದಾರೆ. 

ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಾದ ಬಿ ಎನ್ ಜಿಡ್ಡಿಮನಿ,ಹಿರಿಯ ನಿವೃತ್ತ ಗ್ರಾಮ ಸಹಾಯಕ ಸದಾಶಿವ ಬಳೂತಿ, ಕಲ್ಲಪ್ಪ ಕೂಡಗಿ, ಬಾಳಕೃಷ್ಣ ಗಾಯಕವಾಡ,ಪರಸಪ್ಪ ದಳವಾಯಿ, ಗೋಪಾಲ ಬಳೂತಿ, ಅಡಿವೆಪ್ಪ ಪೂಜಾರಿ, ಮುಬಾರಕ್ ಮುಲ್ಲಾ, ನವಾಬಸಾಬ ಹಿರಿಯಾಳ, ದಸ್ತಗೀರಸಾಬ್ ವಾಲೀಕಾರ, ವಿಜಯಕುಮಾರ ನರಿಯವರ ಹಾಜರಿದ್ದರು.ಕಾರ್ಯಕ್ರಮದ ನಿರೂಪಣೆ, ಸ್ವಾಗತ ಚಂದ್ರಶೇಖರ ಈಟಿ ನಡೆಸಿಕೊಟ್ಟರು .