ಯರಗಟ್ಟಿ ತಾಲೂಕು ಕೃಷಿ ಸಮಾಜ ಪದಾಧಿಕಾರಿಗಳ ಆಯ್ಕೆ
Election of Yaragati Taluk Agricultural Society office bearers
ಯರಗಟ್ಟಿ 29 : ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ ಯರಗಟ್ಟಿ ತಾಲೂಕು ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಯರಗಟ್ಟಿ ರೈತರ ಸಂಪರ್ಕ ಕೇಂದ್ರದಲ್ಲಿ ಬುಧವಾರ ರಂದು ಆಯ್ಕೆ ಪ್ರಕ್ರಿಯೆ ನಡೆಯಿತು. 8 ನಿರ್ದೇಶಕರುಗಳ ಆಯ್ಕೆಯು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಯರಗಟ್ಟಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ವಿನಾಯಕ ಪಾಟೀಲ ಉಪಾಧ್ಯಕ್ಷರಾಗಿ ಶಿವನಗೌಡ ನಾಯ್ಕರ, ಪ್ರಧಾನ ಕಾರ್ಯದರ್ಶಿಯಾಗಿ ಸೋಮಪ್ಪ ಕಳ್ಳಿಗುದ್ದಿ, ಖಜಾಂಚಿಯಾಗಿ ಅನಸೂಯಾ ಪೋಳ, ಜಿಲ್ಲಾ ಪ್ರತಿನಿಧಿಯಾಗಿ ಗುರುಬಸಯ್ಯ ಪೂಜೇರ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಯಲ್ಲಪ್ಪಗೌಡ ಪಾಟೀಲ, ಸೋಮಯ್ಯ ಯಡಹಳ್ಳಿ, ಐ. ಎಫ್. ಸಿದ್ದರಡ್ಡಿ ಆಯ್ಕೆಯಾದರು. ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು.ಈ ವೇಳೆ ಕೃಷಿ ಇಲಾಖೆ ಅಧಿಕಾರಿಗಳಾದ ಎಂ. ಜಿ. ಕಳಸಪ್ಪನ್ನವರ, ಆತ್ಮ ಸಿಬ್ಬಂದಿ ಉಮೇಶ ಯರಗಟ್ಟಿ, ಕೃಷಿ ಸಂಜೀವಿನಿ ಸಿಬ್ಬಂದಿಗಳಾದ ಶ್ರವಣ ಶಿವಪೂಜಿ, ಮಹಾಂತೇಶ ಮಾಗುಂಡನ್ನವರ, ಮಂಜು ಮುಂಡೇಶಿ, ಹನಮಂತ ತಳವಾರ, ಪ. ಪಂ. ಸದಸ್ಯ ನಿಖಿಲ ಪಾಟೀಲ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಆರ್. ಕೆ. ಪಟಾತ ಸೇರಿದಂತೆ ಅನೇಕರು ಇದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 