ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ

ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ Elderly woman's body found in Hidkal Reservoir waters: Incident near Halegudanatti.

ಬೆಳಗಾವಿ : ವೃದ್ದೆಯೋರ್ವಳ ಶವವೊಂದು ಹಿಡಕಲ್ ಜಲಾಶಯದ ನೀರಿನಲ್ಲಿ ತೇಲಿ ಬಂದಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆಗುಡನಟ್ಟಿ ಬಳಿ ಪತ್ತೆಯಾಗಿದೆ. 

   ಹಳೆಗುಡನಟ್ಟಿಯ ಬ್ರಹ್ಮ ದೇವರ ಗುಡ್ಡಿ ಹತ್ತಿರ ಈ ವೃದ್ದೆಯ ಶವವು ಹಿಡಕಲ್ ಜಲಾಶಯದ ನೀರಿನಲ್ಲಿ ಬುಧವಾರ ಪತ್ತೆ ಯಾಗಿದ್ದು, ಮೃತರನ್ನು ಗೋಟೋರು ಗ್ರಾಮದ ಗಂಗವ್ವಾ ಹಂಚಿನಮನಿ (84) ಎಂದು ಗುರುತಿಸಲಾಗಿದೆ.